ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಕೋವಿಡ್ ಪ್ರಕರಣ ಇಳಿಕೆ, ಪರೀಕ್ಷೆ ಸಂಖ್ಯೆಯೂ ಕಡಿಮೆ

|
Google Oneindia Kannada News

ಬೆಂಗಳೂರು, ಮೇ 10; ಕರ್ನಾಟಕದಲ್ಲಿ ಸೋಮವಾರ 39,305 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. 596 ಜನರು ಮೃತಪಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಯ ಸಂಖ್ಯೆ ಕುಸಿತವಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 7065 ಆಂಟಿಜೆನ್, 1,17,045 ಆರ್‌ಟಿಪಿಸಿಆರ್ ಸೇರಿದಂತೆ 1,24,110 ಮಾದರಿಗಳ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ನಲ್ಲಿ ಹೇಳಿದೆ.

ಕರ್ನಾಟಕ; ಹೊಸ ಕೋವಿಡ್ ಪ್ರಕರಣ ಕೊಂಚ ಇಳಿಕೆ ಕರ್ನಾಟಕ; ಹೊಸ ಕೋವಿಡ್ ಪ್ರಕರಣ ಕೊಂಚ ಇಳಿಕೆ

ಕೋವಿಡ್ 2ನೇ ಅಲೆ ಕಾಣಿಸಿಕೊಂಡ ಬಳಿಕ ರಾಜ್ಯದಲ್ಲಿ ಪ್ರತಿದಿನ ಸರಾಸರಿ 2 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ 24 ಗಂಟೆಯಲ್ಲಿ ಪರೀಕ್ಷೆಗಳು ಕಡಿಮೆಯಾಗಿವೆ. ರಾಜ್ಯದಲ್ಲಿ 596 ಜನರು ಮೃತಪಟ್ಟಿದ್ದು ಇದೇ ಮೊದಲು.

ಬೆಂಗಳೂರು; 380 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ ಬೆಂಗಳೂರು; 380 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ

Only 1.24 Lakh COVID Test In Karnataka On Monday

24 ಗಂಟೆಯಲ್ಲಿ ರಾಜ್ಯದಲ್ಲಿ 39,305 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 32,188 ಜನರು ಗುಣಮುಖಗೊಂಡಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 5,71,006ಕ್ಕೆ ಏರಿಕೆಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 19,73,683.

ಆಕ್ಸಿಜನ್ ಪೂರೈಕೆ; ಕರ್ನಾಟಕಕ್ಕೆ ಕೊಡುಗೆ ಕೊಟ್ಟ ಕೇಂದ್ರ ಆಕ್ಸಿಜನ್ ಪೂರೈಕೆ; ಕರ್ನಾಟಕಕ್ಕೆ ಕೊಡುಗೆ ಕೊಟ್ಟ ಕೇಂದ್ರ

48 ಪೊಲೀಸ್ ಸಿಬ್ಬಂದಿಗೆ ಸೋಂಕು; ಮಂಗಳೂರಿನಲ್ಲಿ 48 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ. 7 ಜನರು ಗುಣಮುಖರಾಗಿದ್ದು, ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ. ಒಬ್ಬರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಹೋಂ ಐಸೋಲೇಷನ್‌ ಹೆಚ್ಚು; ಬೆಳಗಾವಿ ವಿಭಾಗಕ್ಕೆ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರುತ್ತದೆ. ಈ ವಿಭಾಗದಲ್ಲಿ ರೋಗ ಲಕ್ಷಣಗಳು ಇಲ್ಲದ ಅಥವ ಸಾಮಾನ್ಯ ಲಕ್ಷಣಗಳು ಇರುವ ಸೋಂಕಿತರೇ ಹೆಚ್ಚಾಗಿದ್ದಾರೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ 26,612 ಸಕ್ರಿಯ ಪ್ರಕರಣ ವಿಭಾಗದಲ್ಲಿದೆ. ಇವರಲ್ಲಿ 18,854 ಜನರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 7,758 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Recommended Video

ಮಹಾಯುದ್ದವನ್ನ ಜೈವಿಕ ಶಸ್ತ್ರಾಸ್ತ್ರಗಳೊಂದಿಗೆ ಹೋರಾಟ ಮಾಡಿ ಪ್ಲಾನ್! | Oneindia Kannada

ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ. ಸೋಮವಾರ ಲಾಕ್ ಡೌನ್ ಜಾರಿಗೆ ಬಂದಿದ್ದು, ಮೇ 24ರ ತನಕ ಜಾರಿಯಲ್ಲಿರುತ್ತದೆ.

English summary
Karnataka conducted 1.24 lakh tests on Monday. A decline from about 2 lakh tests done daily when the second wave of the coronavirus hit the state. State reports 39,305 new positive cases in 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X