ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಸಿಬ್ಬಂದಿ ಕನ್ನಡದಲ್ಲೂ ಘೋಷಣೆ ಮಾಡಲಿ!

By ಅರುಣ್ ಜಾವಗಲ್
|
Google Oneindia Kannada News

ಮುಂಬೈನಿಂದ-ಅಹಮದಾಬಾದ್, ತಿರುವನಂತಪುರ- ಚೆನೈ, ಬೆಂಗಳೂರು-ಹೈದರಾಬಾದ್ ಹೀಗೆ ಭಾರತ ದೇಶದ ಒಳಗೆ ವಿಮಾನದಲ್ಲಿ ಓಡಾಡಿದವರಿಗೆ ಒಂದು ವಿಷಯ ಗಮನಕ್ಕೆ ಬಂದಿರುತ್ತದೆ.

ವಿಮಾನವು ಭಾರತದೊಳಗಿನ ಯಾವುದೇ ಊರಿನಿಂದ ಹೊರಡಲಿ/ ತಲುಪಲಿ, ಹೊರಡುವ/ ತಲುಪುವ ಊರಿನ ಭಾಷೆ ಯಾವುದೇ ಇರಲಿ ವಿಮಾನದೊಳಗಿನ ಸುರಕ್ಷತೆ ಮತ್ತು ಇನ್ನಿತರ ಮಾಹಿತಿಗಳನ್ನು ಹಿಂದಿ/ಇಂಗ್ಲೀಶ್ ಭಾಷೆಯಲ್ಲಿ ನೀಡಲಾಗುತ್ತದೆ. ಹಿಂದಿಯೊಂದೇ ಈ ದೇಶದ ಭಾಷೆ ಎನ್ನುವ ಭ್ರಮೆಯಲ್ಲಿರುವ ಭಾರತದ ಕೇಂದ್ರ ಸರಕಾರದ ವಿಮಾನಯಾನ ಸಚಿವಾಲಯವೂ ವಿಮಾನಗಳಲ್ಲಿನ ಈ ಹುಳುಕು ಭಾಷಾ ನೀತಿಗೆ ಒಪ್ಪಿಗೆ ನೀಡಿದೆ.

Online Petition to demanding to mandate in-flight announcements in Indian languages

ಜನಗಣತಿಯ ಆಧಾರದ ಮೇಲೆ ನೋಡಿದರೆ ಭಾರತದಲ್ಲಿ ಹಿಂದಿ ಮಾತೃಭಾಷೆಯನ್ನಾಗಿ ಹೊಂದಿರುವ ಜನರ ಸಂಖ್ಯೆ ಸುಮಾರು 25% ನಷ್ಟಿದೆ ಮತ್ತು ಇಂಗ್ಲೀಶದ ತಿಳಿದಿರುವವರ ಸಂಖ್ಯೆ ಸುಮಾರು 7% ಇದೆ. ವಿಮಾನಯಾನ ಸಚಿವಾಲಯದ ಒಪ್ಪಿಗೆ ಮೇರೆಗೆ ಬಳಸಲಾಗುತ್ತಿರುವ ಭಾಷಾ ನೀತಿಯು ಹಿಂದಿ/ಇಂಗ್ಲೀಶ್ ಗೊತ್ತಿಲ್ಲದ ಜನರಿಗೆ ತಮ್ಮ ಜೀವಕ್ಕೆ ಬೆಲೆ ಇಲ್ಲವೇ ಎನ್ನುವ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡಿದೆ.

ಸಾವಿರಾರು ಕೋಟಿ ವ್ಯವಹಾರ ನಡೆಸುವ ವಿಮಾನಯಾನ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಬಳಕೆಯಲ್ಲಿರುವಂತೆ ವಿಮಾನ ಹೊರಡುವ ಮತ್ತು ತಲುಪುವ ಊರಿನ ಭಾಷೆಯನ್ನು ಬಳಕೆ ಮಾಡುವುದೇನು ದೊಡ್ಡ ವಿಷಯವಲ್ಲ.

ವಿಮಾನಯಾನ ಸಚಿವಾಲಯು ಈ ಬಗ್ಗೆ ಗಮನಹರಿಸಿ, ಹೊರಡುವ/ ತಲುಪುವ ಊರಿನ ಭಾಷೆಯನ್ನು ಒಳಗೊಂಡಂತೆ ಭಾಷಾ ನೀತಿ ರೂಪಿಸಬೇಕೆಂದು ಎಲ್ಲಾ ವಿಮಾನಯಾನ ಕಂಪನಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸೋಣ. ಇದಕ್ಕಾಗಿ ನೀವು ಆನ್ ಲೈನ್ ಪಿಟೀಷನ್ ಗೆ ಸಹಿ ಹಾಕಲು ಲಿಂಕ್ ಇಲ್ಲಿದೆ ಕ್ಲಿಕ್ಕಿಸಿ

English summary
Demand to mandate in-flight announcements in Indian languages. we demand ministry of civil aviation to mandate all airlines operating within India to provide safety, in-flight instructions and all communication with passengers in state administrative languages of flight’s origin and destination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X