ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PMO ವೆಬ್ ಸೈಟ್ ನಲ್ಲಿ ಕನ್ನಡ ಎಲ್ಲಿ? ಅರ್ಜಿಗೆ ಸಹಿ ಹಾಕಿ

By Mahesh
|
Google Oneindia Kannada News

ಬೆಂಗಳೂರು, ಮೇ 30: ಪ್ರಾದೇಶಿಕ ಭಾಷೆಗಳಲ್ಲಿ ಪ್ರಧಾನಿ ಸಚಿವಾಲಯದ ವೆಬ್ ಸೈಟ್ ಗಳನ್ನು ಇತ್ತೀಚೆಗೆ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಬಿಡುಗಡೆ ಮಾಡಿದರು. ಆದರೆ, ಕನ್ನಡ ಭಾಷೆಯಲ್ಲಿ ಈ ವೆಬ್ ಸೈಟ್ ಇಲ್ಲದಿರುವುದು ಕನ್ನಡಿಗರಿಗೆ ನೋವುಂಟು ಮಾಡಿದೆ ಎಂದು ಹೇಳಿ ಆನ್ ಲೈನ್ ಅರ್ಜಿ ಹಾಕಲಾಗಿದೆ.

ಇಂಗ್ಲೀಷ್, ಹಿಂದಿ ಅಲ್ಲದೆ ತಮಿಳು, ಮರಾಠಿ, ಬೆಂಗಾಲಿ, ಮಲೆಯಾಳಮ್, ಗುಜರಾತಿ, ತೆಲುಗು ಭಾಷೆಗಳಲ್ಲಿ ಈಗ ಪ್ರಧಾನಿ ಸಚಿವಾಲಯದ ವೆಬ್ ಸೈಟ್ ಲಭ್ಯವಿದೆ.

ಕೇವಲ ಒಬ್ಬ ಸಂಸದರನ್ನು ಆಯ್ಕೆ ಮಾಡಿ ಕಳಿಸಿರುವ ಕೇರಳದಂಥ ರಾಜ್ಯಕ್ಕೆ ಆದ್ಯತೆ ನೀಡಲಾಗಿದೆ. ವಿಶ್ವದ ಅತ್ಯಂತ ಪ್ರಾಚೀನ ಹಾಗೂ ವ್ಯಾಕರಣಬದ್ಧ ಭಾಷೆಗಳಲ್ಲಿ ಒಂದೆನಿಸಿರುವ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ.

Online Petition to include Kannada language in PMO website

ಸ್ವಾತಂತ್ರ್ಯ ಬಂದ ನಂತರ ಎಲ್ಲಾ ಸರ್ಕಾರಗಳು ದಕ್ಷಿಣ ಭಾರತದ ಭಾಷೆಗಳನ್ನು ಕಡೆಗಣಿಸುತ್ತಾ ಬಂದಿವೆ. ಭಾಷಾ ತಾರತಮ್ಯ ನೀತಿಯನ್ನು ಮುಂದುವರೆಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ಎಷ್ಟು ಸರಿ? ಎಂದು ಪ್ರಶ್ನಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಪ್ರಧಾನಿ ಸಚಿವಾಲಯದ ವೆಬ್ ಸೈಟ್ ಕಾರ್ಯ ನಿರ್ವಹಿಸುವುದರಿಂದ ಕೋಟ್ಯಂತರ ಕನ್ನಡಿಗರು ಕನ್ನಡ ಭಾಷೆಯಲ್ಲಿ ಪ್ರಧಾನಿ ಸಚಿವಾಲಯ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದು ರಾಘವೇಂದ್ರ ಪುರಾಣಿಕ್ ಎಂಬುವವರು ಆನ್ ಲೈನ್ ಅರ್ಜಿ ಹಾಕಿದ್ದಾರೆ.

ನೀವು ಕೂಡಾ ಬೆಂಬಲ ವ್ಯಕ್ತಪಡಿಸ ಬಯಸಿದರೆ ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರು ಹಾಗೂ ಅರ್ಜಿಗೆ ಸಹಿ ಹಾಕುವ ಕಾರಣ ತಿಳಿಸಿ ಹಂಚಿಕೊಳ್ಳಬಹುದು.

English summary
Online Petition to include Kannada language in PMO website. It is disheartening to see BJP forgetting the language of the people who first opened the doors to them in South India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X