ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಕವೀರ ಈರುಳ್ಳಿಯಿಂದ ಮತ್ತೊಂದು ದಾಖಲೆ

|
Google Oneindia Kannada News

Recommended Video

ವ್ಯಾಪಾರಿಗಳೇ ಎಚ್ಚರ,ಈರುಳ್ಳಿ ಸಂಗ್ರಹಿಸಿಟ್ಟರೆ ಸಂಕಷ್ಟ ಗ್ಯಾರೆಂಟಿ | Oneindia kannada

ಬೆಂಗಳೂರು, ಡಿಸೆಂಬರ್ 4: ಎಲ್ಲಿಂದ ಈರುಳ್ಳಿ ಆಮದು ಮಾಡಿಕೊಂಡರೇನು ದಿನದಿಂದ ದಿನಕ್ಕೆ ಬೆಲೆ ಅಂತೂ ಏರಿಕೆಯಾಗುತ್ತಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ ನೂರರ ಗಡಿ ದಾಟಿದೆ. ಮಹಾರಾಷ್ಟ್ರದ ಪುಣೆ ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕದಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ಈರುಳ್ಳಿ ಬೆಲೆಯೂ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 120 ರೂ ಮುಟ್ಟಿದ್ದು, ಗ್ರಾಹಕರಿಗೆ ಬಿಸಿ ತಟ್ಟಲಿದೆ.

ಈರುಳ್ಳಿ ಹರಾಜು: ಬೆಲೆ ಪ್ರತಿ ಕ್ವಿಂಟಾಲ್ ಗೆ ಎಷ್ಟೊಂದಾ?ಈರುಳ್ಳಿ ಹರಾಜು: ಬೆಲೆ ಪ್ರತಿ ಕ್ವಿಂಟಾಲ್ ಗೆ ಎಷ್ಟೊಂದಾ?

ಬೆಂಗಳೂರು ಎಪಿಎಂಸಿ , ಚಿತ್ರದುರ್ಗ, ದಾವಣಗೆರೆ, ಗದಗ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ಜಿಲ್ಲೆಗಳಿಂದ ಈರುಳ್ಳಿ ಸರಬರಾಜಾಗುತ್ತದೆ.

ಮಂಗಳೂರಿಗೆ ಬಂದಿದೆ 50 ಟನ್ ಟರ್ಕಿ ಈರುಳ್ಳಿ

ಮಂಗಳೂರಿಗೆ ಬಂದಿದೆ 50 ಟನ್ ಟರ್ಕಿ ಈರುಳ್ಳಿ

ಈರುಳ್ಳಿ ಅಭಾವವೇ ಬೆಲೆ ಏರಿಕೆಗೆ ಕಾರಣವಾಗಿದೆ. ಮಂಗಳೂರಿನ ವ್ಯಾಪಾರಿಗಳು ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮಂಗಳೂರು ಹಳೆ ಬಂದರಿಗೆ ಸುಮಾರು 50 ಟನ್‌ನಷ್ಟು ಟರ್ಕಿ ಈರುಳ್ಳಿಯನ್ನು ಆಮದು ಮಾಡಲಾಗಿದೆ. ಇದರ ದರ ಬೆಳಗ್ಗಿನ ಹೊತ್ತು ಸಗಟು ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 12 ಸಾವಿರ ರೂ ನಿಂದ, 13 ಸಾವಿರ ರೂ ಆಗಿದೆ. ಅಂದರೆ ಬೆಲೆ 120 ರಿಂದ 130 ರೂ ಒಂದು ಕೆಜಿಗೆ ನೀಡಬೇಕಾಗುತ್ತದೆ.

ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಇಲ್ಲ

ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಇಲ್ಲ

ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಈರುಳ್ಳಿ ಪೂರೈಕೆಯಾಗುತ್ತಿಲ್ಲ, ಹೀಗಾಗಿ ಬೆಲೆ ಗಗನಕ್ಕೇರಿದೆ. ಇದರಿಂದ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಈಗ ನಿರಾಸೆಯುಂಟಾಗಿದೆ. ಜನವರಿ-ಫೆಬ್ರವರಿ ತಿಂಗಳಲ್ಲಿ ಹೊಸ ಬೆಳೆ ಬರಲಿದ್ದು, ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ.

ಈರುಳ್ಳಿ ಸಂಗ್ರಹಿಸಿಟ್ಟರೆ ಭಾರಿ ದಂಡ: ವ್ಯಾಪಾರಿಗಳೇ ಎಚ್ಚರ ಎಚ್ಚರ!ಈರುಳ್ಳಿ ಸಂಗ್ರಹಿಸಿಟ್ಟರೆ ಭಾರಿ ದಂಡ: ವ್ಯಾಪಾರಿಗಳೇ ಎಚ್ಚರ ಎಚ್ಚರ!

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದನೆ

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಕೆಜಿಗೆ 130 ರೂ, ಗುಜರಾತಿನಲ್ಲಿ ಕೆಜಿಗೆ 100 ರೂ. ನಿಗದಿಯಾಗಿ ಆತಂಕ ಸೃಷ್ಟಿಸಿದೆ. ದೇಶದೆಲ್ಲೆಡೆ ಈರುಳ್ಳಿ ಕೊರತೆ ಇರುವುದರಿಂದ ಬೇಡಿಕೆ ಹೆಚ್ಚಿದೆ. ಸಗಟು ಮಾರುಕಟ್ಟೆಯಲ್ಲಿ ಹೊಸ ಹಾಗೂ ಹಳೆಯ ಈರುಳ್ಳಿಗೂ ಉತ್ತಮ ಬೆಲೆ ಇದೆ. ಈರುಳ್ಳಿ ಕ್ವಿಂಟಾಲ್ ಬೆಲೆ 3ರಿಂದ 6 ಸಾವಿರ ರೂ ಇದೆ.

ಬಿಜೆಪಿ ಕಚೇರಿ ಎದುರು 35 ರೂ.ಗೆ ಈರುಳ್ಳಿ ಮಾರಾಟ ಮಾಡಿದ ಮಾಜಿ ಸಂಸದಬಿಜೆಪಿ ಕಚೇರಿ ಎದುರು 35 ರೂ.ಗೆ ಈರುಳ್ಳಿ ಮಾರಾಟ ಮಾಡಿದ ಮಾಜಿ ಸಂಸದ

ಇನ್ನಷ್ಟು ಏರಿಕೆಯಾಗುವ ಸಾಧ್ಯತೆ

ಇನ್ನಷ್ಟು ಏರಿಕೆಯಾಗುವ ಸಾಧ್ಯತೆ

ವಿಪರೀತ ಮಳೆಗೆ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ಭೂಮಿಯಲ್ಲೇ ಕೊಳೆತು ಹೋಗಿತ್ತು. ಬೆಳೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ಸರಬರಾಜಾಗಿರುವುದರಿಂದ ಮಾರುಕಟ್ಟೆಗೆ ಸರಬರಾಜಾಗಬೇಕಿದ್ದ ಪ್ರಮಾಣವೂ ಕಡಿಮೆಯಾಗಿದೆ. ಇದ್ದ ಹಳೆಯ ದಾಸ್ತಾನು ಬರಿದಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ನಿರಂತರವಾಗಿ ಸುರಿದರೆ ಬೆಳೆದ ಬೆಳೆಯೂ ನೆಲಕಚ್ಚುವ ಭೀತಿ ರೈತರದ್ದಾಗಿದೆ. ಪೂರೈಕೆ ಕೊರತೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

English summary
The onion prices are skyrocketing due to unseasonal rains in producing states. Onions are being sold at Rs 120per kilogram in Bengaluru Market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X