ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ದರ ಹೆಚ್ಚಳ: ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಮಾರಾಟ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಅಕ್ಟೋಬರ್ 1: ವಿಶ್ವದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಭಾರತದಲ್ಲಿ ಈ ಬಾರಿ ಬೆಳೆ ಕುಂಠಿತವಾಗಿದೆ. ಭಾರಿ ಮಳೆಯಿಂದಾಗಿ ಬೆಳೆಗಳು ನಷ್ಟವಾಗಿದ್ದು, ಇಳುವರಿ ಬಾರದೇ ರೈತ ಕಂಗಾಲಾಗಿದ್ದಾನೆ.

ಇತ್ತ ಮಾರುಕಟ್ಟೆಗೆ ಬರುತ್ತಿರೋ ಅಲ್ಪಸ್ವಲ್ಪ ಈರುಳ್ಳಿಯ ದರ ಕೂಡ ಗಗನಕ್ಕೇರಿದೆ. ಕಿಲೋಗೆ 50ರಿಂದ 80 ರೂ.ವರೆಗೂ ಮಾರಾಟವಾಗುತ್ತಿದೆ. ಇದು ಗ್ರಾಹಕರ ಜೇಬಿಗೆ ಹೊರೆಯಾಗಿ ಪರಿಣಮಿಸಿದೆ.

ಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರಎಲ್ಲ ಬಗೆಯ ಈರುಳ್ಳಿ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈರುಳ್ಳಿ ರಫ್ತು ವ್ಯಾಪಾರವನ್ನೂ ಇತ್ತೀಚೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ದಿನದಿಂದ ದಿನಕ್ಕೆ ಈರುಳ್ಳಿಯ ದರದಲ್ಲಿ ಹೆಚ್ಚಳವಾಗುತ್ತಿದ್ದು, ಗ್ರಾಹಕರಿಗೆ 'ಕಣ್ಣೀರುಳ್ಳಿ'ಯ ಅನುಭವ ನೀಡುತ್ತಿದೆ.

Onion Rate Increase Discount On Flipkart

ಇಷ್ಟೆಲ್ಲ ಈರುಳ್ಳಿಯ ಬಗ್ಗೆ ದರ ಸಮರದ ವಿಚಾರ ನಡೆಯುತ್ತಿದ್ದರೆ, ಇ ಕಾಮರ್ಸ್ ತಾಣ ಫ್ಲಿಪ್ ಕಾರ್ಟ್ ಈರುಳ್ಳಿಯನ್ನ ಆನ್ಲೈನ್ ನಲ್ಲಿ ಮಾರಾಟ ಮಾಡಲು ಮುಂದಾಗಿದೆ. ನವರಾತ್ರಿಯ ನಿಮಿತ್ತ ಸದ್ಯ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ನಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲು ಫ್ಲಿಪ್ ಕಾರ್ಟ್ ತಯಾರಾಗಿದೆ.

ಶೇ 24ರಷ್ಟು ರಿಯಾಯಿತಿ ನೀಡುತ್ತಿರುವುದಾಗಿ ಜಾಹೀರಾತಿನಲ್ಲಿ ಹೇಳಿಕೊಂಡಿರುವ ಫ್ಲಿಪ್ ಕಾರ್ಟ್, ಕಿಲೋಗೆ 57ರೂ.ನಂತೆ ಈರುಳ್ಳಿಯ ಮಾರಾಟಕ್ಕೆ ಇಳಿದಿದೆ. ಫ್ಲಿಪ್ ಕಾರ್ಟ್ ನ ಗ್ರೋಸರಿ ವಿಭಾಗದಲ್ಲಿ ಇದು ಲಭ್ಯವಿದ್ದು, ಸೀಮಿತ ನಗರಗಳಲ್ಲಿ ಮಾತ್ರ ಡೆಲಿವರಿ ಮಾಡಲಾಗುತ್ತದೆ.

ಗುಣಮಟ್ಟ ಹಾಗೂ ರುಚಿಯಲ್ಲಿ ಈ ಈರುಳ್ಳಿ ಎಷ್ಟು ಉತ್ತಮವಾಗಿದಯೋ ತಿಳಿಯದು. ಆದರೆ, ಬೆಲೆ ಏರಿಕೆಯ ನಡುವೆ ಇದು ಗ್ರಾಹಕರಲ್ಲಿ ಕೊಂಚ ಸಮಾಧಾನ ಮೂಡಿಸಿದೆ.

English summary
India is the largest onion growing nation in the world. The crops are lost due to heavy rains and the farmer is miserable without yielding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X