ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿಗೆ ರೋಗ ಬಾಧೆ, ಬೆಲೆ ಮತ್ತೆ ಹೆಚ್ಚಾಗುವ ಸಾಧ್ಯತೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 10: ಏಕಾಏಕಿ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ ಕಳೆದ ವಾರ ಕೊಂಚ ಕಡಿಮೆಯಾಗಿತ್ತು.

ಆದರೆ ಈರುಳ್ಳಿಗೆ ರೋಗಬಾಧೆ ಕಾರಣ ಮತ್ತೆ ಬೆಲೆ ಏರಿಕೆ ಸಾಧ್ಯತೆ ಹೆಚ್ಚಿದೆ. ಅತಿವೃಷ್ಟಿಯಿಂದ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರಿಗೆ ಇದೀಗ ಸುರಿಯುತ್ತಿರುವ ಮಳೆಯಿಂದ ಈರುಳ್ಳಿ ಬೆಳೆಗೆ ರೋಗಬಾಧೆ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ದಿನದಿಂದ ದಿನಕ್ಕೆ ಏರುತ್ತಿದ್ದ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ರಫ್ತು ನಿಷೇಧಿಸಿತ್ತು.

ದಿಢೀರನೆ ಕುಸಿತ ಕಂಡ ಈರುಳ್ಳಿ ಬೆಲೆ, ಈಗೆಷ್ಟಿದೆ?ದಿಢೀರನೆ ಕುಸಿತ ಕಂಡ ಈರುಳ್ಳಿ ಬೆಲೆ, ಈಗೆಷ್ಟಿದೆ?

ರಾಜ್ಯದಲ್ಲಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುತ್ತಿದ್ದು, 14-15 ಲಕ್ಷ ಈರುಳ್ಳಿ ಬೆಳೆಗಾರರಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲೇ 50 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ.

ರೋಗ ಬಂದಿರುವ ಕಾರಣ ಈರುಳ್ಳಿ ಬೆಲೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಆದರೂ ಆ ಬೆಲೆ ಬೆಳಗಾರರಿಗೆ ಸಿಗುವುದಿಲ್ಲ, ಮಧ್ಯರ್ತಿಗಳ ಪಾಲಾಗಲಿದೆ.

 ಈರುಳ್ಳಿ ಬಂಪರ್ ಬೆಲೆ ಬಂದಿದ್ದರಿಂದ ಬೆಳೆಗಾರರೂ ಖುಷಿ ಪಟ್ಟಿದ್ದರು

ಈರುಳ್ಳಿ ಬಂಪರ್ ಬೆಲೆ ಬಂದಿದ್ದರಿಂದ ಬೆಳೆಗಾರರೂ ಖುಷಿ ಪಟ್ಟಿದ್ದರು

ಈರುಳ್ಳಿಗೆ ಬಂಪರ್ ಬೆಲೆ ಬಂದಿದ್ದರಿಂದ ಬೆಳಗಾರರೂ ಖುಷಿ ಪಟ್ಟಿದ್ದರು. ಆದರೆ ಇನ್ನೊಂದೆಡೆ ಕೇಂದ್ರ ಸರ್ಕಾರದ ರಫ್ತು ನಿಷೇಧ ನಿರ್ಧಾರ ಬೆಲೆ ಕುಸಿತಕ್ಕೆ ಕಾರಣವಾಗಿ ನಷ್ಟದಿಂದ ಮತ್ತೆ ಆಘಾತ ಎದುರಿಸುತ್ತಿದ್ದಾರೆ. ಜೊತೆಗೆ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ಬೆಳೆಗೆ ಕೊಳೆ ರೋಗ, ಹಳದಿ ರೋಗ ತರುತ್ತಿರುವುದರಿಂದ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿತ್ತು.

 ರಫ್ತು ನಿಷೇಧದಿಂದ ಕ್ವಿಂಟಾಲ್ ಈರುಳ್ಳಿ ಬೆಲೆ ಇಳಿಕೆ

ರಫ್ತು ನಿಷೇಧದಿಂದ ಕ್ವಿಂಟಾಲ್ ಈರುಳ್ಳಿ ಬೆಲೆ ಇಳಿಕೆ

ಮಾರುಕಟ್ಟೆಯಲ್ಲಿ ರಫ್ತು ನಿಷೇಧದಿಂದ ಪ್ರತಿ ಕ್ವಿಂಟಾಲ್ ಈರುಳ್ಳಿ 6,500ರಿಂದ 1,500 ರೂಗೆ ಇಳಿಕೆಯಾಗಿದೆ. ಉತ್ತಮ ಫಸಲು ಹಾಗೂ ಬೆಲೆಯ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳಗಾರರಿಗೆ ರೋಗದ ಹಾವಳಿ ಚಿಂತೆಗೀಡು ಮಾಡಿದೆ. ಉತ್ತರ ಕರ್ನಾಟಕದ ಈರುಳ್ಳಿ ಬೆಳೆಯುವ ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈರುಳ್ಳಿ ಹೆಚ್ಚಿನ ತೇವಾಂಶದಿಂದ ಬುಡದಲ್ಲೇ ಕೊಳೆಯುತ್ತಿದ್ದರೆ , ಕೆಲವೆಡೆ ಎಲೆಗಳು ಒಣಗಿ ನೆಲ ಕಚ್ಚುತ್ತಿವೆ.

ಈರುಳ್ಳಿ ಬೆಲೆ ಕೆಳಗೆ ಇಳಿಯಿತು, ಈಗ ಟೊಮೆಟೊ ಬೆಲೆ ಸಿಕ್ಕಾಪಟ್ಟೆ ಏರಿಕೆಈರುಳ್ಳಿ ಬೆಲೆ ಕೆಳಗೆ ಇಳಿಯಿತು, ಈಗ ಟೊಮೆಟೊ ಬೆಲೆ ಸಿಕ್ಕಾಪಟ್ಟೆ ಏರಿಕೆ

 ಕಳೆದ ವರ್ಷವೂ ಕಡಿಮೆ ಬೆಲೆ

ಕಳೆದ ವರ್ಷವೂ ಕಡಿಮೆ ಬೆಲೆ

ಕಳೆದ ವರ್ಷ ಪ್ರತಿ ಕ್ವಿಂಟಾಲ್ ಈರುಳ್ಳಿಗೆ 500 ರೂ ಗೆ ಮಾರಲಾಗಿತ್ತು.ಈ ವರ್ಷ ಕ್ವಿಂಟಾಲ್‌ಗೆ 3 ಸಾವಿರ ರೂನಿಂದ ನಾಲ್ಕೂವರೆ ಸಾವಿರ ರೂ ವರೆಗೆ ದರ ನಿಗದಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ರಫ್ತು ನಿಷೇಧಿಸಿದ್ದರಿಂದ ದರ ಇಳಿಕೆಯಾಗಿದೆ.

 ಬಳ್ಳಾರಿಯಲ್ಲಿ ಪ್ರತಿಭಟನೆ

ಬಳ್ಳಾರಿಯಲ್ಲಿ ಪ್ರತಿಭಟನೆ

ಅ.10ರಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ಸಾಂಕೇತಿಕವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವಾರು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಈರುಳ್ಳಿ ಮಾತ್ರವಲ್ಲ, ಇನ್ನು ಟೊಮ್ಯಾಟೊದಿಂದಲೂ ಕಣ್ಣೀರು!ಈರುಳ್ಳಿ ಮಾತ್ರವಲ್ಲ, ಇನ್ನು ಟೊಮ್ಯಾಟೊದಿಂದಲೂ ಕಣ್ಣೀರು!

English summary
Onion prices, which had been on the rise for a while, fell slightly last week.Onion Price Will Be Rise Again Due To Disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X