ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಬರೆದ ಈರುಳ್ಳಿ ದರ; ಕೆ. ಜಿ. ಗೆ 180 ರೂ.!

|
Google Oneindia Kannada News

ಬೆಂಗಳೂರು, ಡಿಸೆಂಬರ್ 5 : ಈರುಳ್ಳಿ ದರ ಇಳಿಕೆಯಾಗುವ ಯಾವ ಸೂಚನೆಗಳು ಸಿಗುತ್ತಿಲ್ಲ. ಬೆಂಗಳೂರು ನಗರದಲ್ಲಿ ಪ್ರತಿ ಕೆ. ಜಿ. ಈರುಳ್ಳಿ ದರ 180 ರೂ.ಗೆ ಏರಿಕೆಯಾಗಿದೆ. ದರ ಏರಿಕೆ ಲಾಭ ರೈತರಿಗೆ ಸಿಗುತ್ತಿದೆಯೇ? ಎಂಬ ಪ್ರಶ್ನೆಯೂ ಎದ್ದಿದೆ.

ಬೆಳಗಾವಿ ಎಪಿಎಂಸಿಯಲ್ಲಿ ಬುಧವಾರ ಉತ್ಕೃಷ್ಟ ಗುಣಮಟ್ಟದ ಈರುಳ್ಳಿ ಪ್ರತಿ ಕ್ವಿಂಟಾಲ್‌ಗೆ 13 ರಿಂದ 15 ಸಾವಿರ ದರವಿತ್ತು. ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆ. ಜಿ. ಈರುಳ್ಳಿ ಬೆಲೆ 140 ರಿಂದ 180 ರೂ. ತನಕ ಏರಿಕೆಯಾಗಿದೆ.

ಬಿಸಿ-ಬಿಸಿ ಈರುಳ್ಳಿ ಪಕೋಡಾ ನಾಲಿಗೆ ಮಾತ್ರವಲ್ಲ ಜೇಬು ಸುಡುತ್ತಿದೆ! ಬಿಸಿ-ಬಿಸಿ ಈರುಳ್ಳಿ ಪಕೋಡಾ ನಾಲಿಗೆ ಮಾತ್ರವಲ್ಲ ಜೇಬು ಸುಡುತ್ತಿದೆ!

ಈರುಳ್ಳಿ ದರ ಏರಿಕೆಯಿಂದಾಗಿ ಜನರು ಆತಂಕಗೊಂಡಿದ್ದರು. ಈಗ ಹೋಟೆಲ್ ಉದ್ಯಮದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ವಿವಿಧ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಸಣ್ಣ-ಪುಟ್ಟ ಹೋಟೆಲ್‌ಗಳು ಈಗಾಗಲೇ ನಷ್ಟ ಅನುಭವಿಸುತ್ತಿದ್ದಾರೆ.

ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್! ಚಿನ್ನ, ಬೆಳ್ಳಿಯಲ್ಲ, ಈರುಳ್ಳಿ ಕಳುವಾಗಿದ್ದಕ್ಕೆ ಪೊಲೀಸ್ ಠಾಣೆಯಲ್ಲಿ ಕೇಸ್!

Onion Price Hikes 180 Per Kg In Bengaluru

ಉತ್ಕೃಷ್ಟ ಗುಣಮಟ್ಟಣದ ಹೊಸ ಈರುಳ್ಳಿ ಬೆಂಗಳೂರು ಎಪಿಎಂಸಿಯಲ್ಲಿ ಕ್ವಿಂಟಾಲ್‌ಗೆ 10 ರಿಂದ 12 ಸಾವಿರ, ಪುಣೆಯಲ್ಲಿ 12 ರಿಂದ 14 ಸಾವಿರ, ಗದಗದಲ್ಲಿ 11 ಮತ್ತು ಹುಬ್ಬಳ್ಳಿಯಲ್ಲಿ 10 ಸಾವಿರ ರೂ.ಗೆ ಮಾರಾಟವಾಗಿದೆ.

ಈರುಳ್ಳಿ ದರ ಏರಿಕೆ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ ಈರುಳ್ಳಿ ದರ ಏರಿಕೆ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರು ನಗರಕ್ಕೆ ಈರುಳ್ಳಿ ಪೂರೈಕೆಯಲ್ಲಿ ಗಣನೀಯ ಕಡಿತವಾಗಿದೆ. ದಾವಣಗೆರೆ, ಗದಗ, ಹುಬ್ಬಳ್ಳಿಯಿಂದ ಈರುಳ್ಳಿ ಬರುತ್ತಿಲ್ಲ. ಇದರಿಂದಾಗಿ ನಗರದಲ್ಲಿ ಮುಂದಿನ ವಾರ ಈರುಳ್ಳಿ ಬೆಲೆ 200 ರೂ. ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ.

ಈಗಾಗಲೇ ಸರ್ಕಾರ ಈರುಳ್ಳಿ ಬೆಲೆಗೆ ಕಡಿವಾಣ ಹಾಕಲು ದಾಸ್ತಾನು ಮಾಡುವ ಪ್ರಮಾಣವನ್ನು ಕಡಿಮೆ ಮಾಡಿದೆ. ವಾರದ ಹಿಂದೆ 6,500 ರಿಂದ 8,300 ರೂ. ತನಕ ಇದ್ದ ಕ್ವಿಂಟಾಲ್ ಈರುಳ್ಳಿ ಬೆಲೆ 10 ರಿಂದ 12 ಸಾವಿರ ರೂ.ಗೆ ಏರಿಕೆಯಾಗಿದೆ.

ಕರಾವಳಿಗೆ ಬಂದ ಟರ್ಕಿ ಈರುಳ್ಳಿ : ಬೆಲೆ ಏರಿಕೆಯ ನಡುವೆಯೇ ಟರ್ಕಿ ಈರುಳ್ಳಿ ಮಂಗಳೂರು ಮಾರುಕಟ್ಟೆಯನ್ನು ಪ್ರವೇಶಿಸಿದೆ. ಮಂಗಳವಾರ ನಗರಕ್ಕೆ 30 ಟನ್‌ನಷ್ಟು ಟರ್ಕಿ ಈರುಳ್ಳಿ ಬಂದಿದ್ದು ಬುಧವಾರ ಕೆ. ಜಿ. ಗೆ 130 ರೂ.ನಂತೆ ಮಾರಾಟವಾಗಿದೆ.

ಟರ್ಕಿ ಈರುಳ್ಳಿ ದೊಡ್ಡ ಗಾತ್ರದ್ದಾಗಿದ್ದು, ರುಚಿ ಮತ್ತು ಖಾರ ಚೆನ್ನಾಗಿದೆ ಎಂದು ಜನರು ಖರೀದಿ ಮಾಡುತ್ತಿದ್ದಾರೆ. ಈಜಿಪ್ಟ್‌ನ ಈರುಳ್ಳಿಯೂ ಮಂಗಳೂರು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ಸುರಿದ ಮಳೆ ಈರುಳ್ಳಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಮಳೆ, ಪ್ರವಾಹದಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು ಉತ್ಪಾದನೆ ಕುಸಿದಿದೆ. ಇದರಿಂದಾಗಿ ದರ ಏರಿಕೆಯಾಗಿದೆ.

English summary
Tough time manage kitchen supplies. Onion prices have touched Rs 180 per Kg at Bengaluru. Prices are expected to soar till February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X