ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿದ ಈರುಳ್ಳಿ: ಗ್ರಾಹಕ ನಿಟ್ಟುಸಿರು, ರೈತ ಕಣ್ಣೀರು

|
Google Oneindia Kannada News

ಬೆಂಗಳೂರು/ಬೆಳಗಾವಿ, ಅಕ್ಟೋಬರ್. 15: ಕಳೆದ ಮೂರು ತಿಂಗಳಿನಿಂದ ಏರಿಕೆ ಹಾದಿಯಲ್ಲೇ ಇದ್ದ ಈರುಳ್ಳಿ ದರ ದಿಢೀರ್ ಕುಸಿದಿದೆ. ಮಾರುಕಟ್ಟೆಗೆ ಹೊಸ ಈರುಳ್ಳಿ ಪ್ರವೇಶವಾದ ಪರಿಣಾಮ ದರ ಇಳಿಕೆಯಾಗಿದೆ.

ಗ್ರಾಹಕರು ನಿಟ್ಟುಸಿರು ಬಿಟ್ಟರೆ, ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಬೆಳಗಾವಿಯಲ್ಲಿ ರೈತರು ರಸ್ತೆ ತಡೆ ನಡೆಸಿ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಬೆಂಗಳೂರು ಹಾಪ್ ಕಾಮ್ಸ್ ನಲ್ಲಿ ದೊಡ್ಡ ಗಾತ್ರದ ಈರುಳ್ಳಿ 55 ರು., ಮಧ್ಯಮ ಗಾತ್ರದ ಈರುಳ್ಳಿ 46 ರು. ಗೆ ಇಳಿದಿದೆ.

Onion price fall: Farmers Starts protest

ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆಯಾಗಿದೆ. ಕೆಜಿಗೆ 42 ರು. ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ಇದೀಗ 22 ರು ಗೆ ಇಳಿದಿದೆ. ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಕಡಿಮೆ ಬೆಲೆಗೆ ಹರಾಜು ಕೂಗುತ್ತಿದ್ದಂತೆ ರೈತರ ಆಕ್ರೋಶ ಆರಂಭವಾಯಿತು.[ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

ಲಾಸೆಗಾಂವ್ ಮಾರುಕಟ್ಟೆಯಲ್ಲೂ ಇಳಿಕೆ
ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದು ಕರೆಸಿಕೊಳ್ಳುವ ಲಾಸೆಗಾಂವ್ ನಲ್ಲೂ ಈರುಳ್ಳಿ ದರ ಕುಸಿದಿದೆ. ಕೆಜಿಗೆ 30 ರು. ಗಿಂತ ಕೆಳಕ್ಕೆ ಇಳಿದಿದ್ದು ಮಾರುಕಟ್ಟೆಗೆ ಹೊಸ ಈರುಳ್ಳಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿರುವುದೇ ದರ ಇಳಿಕೆಗೆ ಪ್ರಮುಖ ಕಾರಣವಾಗಿದೆ.

ಬೆಂಗಳೂರು ಹಾಪ್ ಕಾಮ್ಸ್ ದರಪಟ್ಟಿ ನೋಡಿ

English summary
After three months, prices of onions have finally begun to show a downward trend. Prices of the edible bulb have come down from the Rs 70-80 mark to settle between Rs 40-Rs 55 per kilo. Wholesale rates of the edible bulb came down to Rs. 15-35 from the season's all-time high of Rs. 65. Based on these rates, price of onions in the retail market has also fallen to about Rs. 55 for the best quality of onions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X