• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರ್ಧ ಶತಕ ಬಾರಿಸಿದ ಈರುಳ್ಳಿ, ಟೊಮೆಟೋ ಬೆಲೆ!

|

ಬೆಂಗಳೂರು, ನವೆಂಬರ್ 17 : ಅಡುಗೆ ಮನೆಯಲ್ಲಿ ಸದಾ ಕಾಣಿಸಿಕೊಳ್ಳುವ ತರಕಾರಿ ಈರುಳ್ಳಿ, ಟೊಮೆಟೋ. ಆದರೆ, ಈಗ ಈ ಎರಡೂ ತರಕಾರಿಗಳು ಜನರಿಂದ ದೂರವಾಗುತ್ತಿವೆ, ಕಾರಣ ದರ ಏರಿಕೆ.

ಈರುಳ್ಳಿ ಮತ್ತು ಟೊಮೆಟೋ ದರಗಳು ಅರ್ಧ ಶತಕವನ್ನು ದಾಟಿವೆ. ಬೆಲೆಗಳು ಏರಿಕೆಯಾಗುತ್ತಲೇ ಇದ್ದು, ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯಲ್ಲಿವೆ. ತರಕಾರಿಗಳ ಪೂರೈಕೆಯಲ್ಲಿ ಆಗಿರುವ ವ್ಯತ್ಯಾಸವೇ ಇದಕ್ಕೆ ಕಾರಣವಾಗಿದೆ.

ಭಾರತದ ಟೊಮೋಟೊ ಬೇಡವೆಂದ ಪಾಕ್

ಬೆಂಗಳೂರಿನಲ್ಲಿನ ಹಾಪ್‌ ಕಾಮ್ಸ್‌ಗಳಲ್ಲಿ ಇಂದಿನ ಈರುಳ್ಳಿ ದರ ಕೆಜಿಗೆ 56 ರೂ., ಟೊಮೆಟೋ 58 ರೂ.. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಆದ್ದರಿಂದ, ದರ ಅರ್ಧ ಶತಕ ದಾಟಿದೆ.

ಧಮ್ ಇದ್ರೆ ಟೊಮೆಟೊದಲ್ಲಿ ಹೊಡೆದು ತೋರ್ಸೋ!

ಮೈಸೂರು ನಗರದಲ್ಲಿ ಸಾಮಾನ್ಯ ದರ್ಜೆಯ ಈರುಳ್ಳಿ ಬೆಲೆ 52 ರಿಂದ 60 ರೂ. ಇದೆ. ದೊಡ್ಡ ಗಾತ್ರದ ಈರುಳ್ಳಿ ಬೆಲೆ 56 ರಿಂದ 62ರ ತನಕವಿದೆ. ಹೈಬ್ರಿಡ್ ಟೊಮೆಟೋ 55, ನಾಟಿ ಟೊಮೆಟೋ ಬೆಲೆ 40 ರಿಂದ 45 ರೂ. ಇದೆ.

ಗದಗದಲ್ಲಿ ಅತ್ಯಾಧುನಿಕ ನಾಸಿಕ್‌ ಮಾದರಿ ಈರುಳ್ಳಿ ಗೋದಾಮು ನಿರ್ಮಾಣ

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಿಂದ ಬೆಂಗಳೂರಿನ ಮಾರುಕಟ್ಟೆಗಳಿಗೆ ಈರುಳ್ಳಿ ಸರಬರಾಜು ಆಗುತ್ತದೆ. ಆದರೆ, ಈಗ ಮಾರುಕಟ್ಟೆಗೆ ಈರುಳ್ಳಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಹೊಸ ಈರುಳ್ಳಿ ಬರುವ ತನಕ ದರ ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೇವಲ ಈರುಳ್ಳಿ, ಟೊಮೆಟೋ ಮಾತ್ರವಲ್ಲ ವಿವಿಧ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ. ಹಾಪ್ ಕಾಮ್ಸ್ ದರ ಪಟ್ಟಿಯ ಅನ್ವಯ ಬೀಟ್ ರೋಟ್ 68, ಬದನೆಕಾಯಿ 38, ಕ್ಯಾಪ್ಸಿಕಂ 68, ಕ್ಯಾರೆಟ್ 92, ಬೀನ್ಸ್ ಕೆಜಿಗೆ 52 ರೂ. ದರವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prices of onion and tomato crossed 50 Rs per Kg. The prices are unlikely to come down until fresh stocks hit the markets. The prices began rising after shortage of supply form Maharashtra and North Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more