ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒನ್ಇಂಡಿಯಾ ಕನ್ನಡ ವರದಿ ಫಲಶ್ರುತಿ: ಪೆಟ್ರೋಲ್ ಬಂಕ್ ಕೇಸ್, ಅಧಿಕಾರಿಗೆ ನೋಟಿಸ್

|
Google Oneindia Kannada News

ಬೆಂಗಳೂರು ಆಗಸ್ಟ್ 2: ರಾಜಧಾನಿಯ ಪೆಟ್ರೋಲ್ ಬಂಕ್‌ನಿಂದ ಮಾಮೂಲಿ ವಸೂಲಿ ಕುರಿತು ಒನ್ಇಂಡಿಯಾ ಕನ್ನಡ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಆರೋಪಿತ ಅಧಿಕಾರಿ ಸೀಮಾ ಕೆ. ಮಾಗಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಲಂಚ ಆರೋಪ ಕುರಿತು ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿ ಇಲಾಖೆಯ ಮುಖ್ಯ ನಿಯಂತ್ರಕರಾದ ಶ್ರೀರೂಪಾ ಅವರು ನೋಟಿಸ್ ನೀಡಿದ್ದಾರೆ. ಒನ್ಇಂಡಿಯಾ ಕನ್ನಡ ವರದಿ ಪರಿಣಾಮ ಸೀಮಾ ವಿರುದ್ಧ ವಿಚಾರಣೆ ನಡೆಯುತ್ತಿದೆ.

ಒನ್ಇಂಡಿಯಾ ಕನ್ನಡ ವರದಿ ಬಿತ್ತರಿಸುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯ ಉನ್ನತ ಅಧಿಕಾರಿಗಳು ಮೂರು ಅಂಶಗಳನ್ನು ಮುಂದಿಟ್ಟು ಉತ್ತರ ನೀಡುವಂತೆ ಸೂಚಿಸಿದ್ದಾರೆ. ಸೀಮಾ ಕೆ. ಮಾಗಿ ಅವರು ಜು. 27 ರಂದೇ ಬೆಂಗಳೂರು ಉತ್ತರ ವಿಭಾಗದ ಸಹಾಯಕ ನಿಯಂತ್ರಕಿ ಹುದ್ದೆಯಿಂದ ಬೇರಡೆ ವರ್ಗಾವಣೆಯಾಗಿದ್ದರು. ಹೊಸಕೋಟೆ ವಿಭಾಗಕ್ಕೆ ಹೋಗಲು ಅವಕಾಶವೇ ಇಲ್ಲದಿದ್ದರು ಎರಡು ದಿನದ ಬಳಿಕ ಹೋಗಿ ಹಫ್ತಾ ವಸೂಲಿ ಮಾಡಿರುವ ಘಟನೆ ಇಲಾಖೆಯ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮೇಡಮ್ ಫೀಸ್ ಬೇಡವಾ.. ಹ ಹ...ಹಾ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಯ ಹಫ್ತಾ ವಸೂಲಿ ಸೀಕ್ರೆಟ್ ವಿಡಿಯೋ ರಿಲೀಸ್ ! ಮೇಡಮ್ ಫೀಸ್ ಬೇಡವಾ.. ಹ ಹ...ಹಾ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಯ ಹಫ್ತಾ ವಸೂಲಿ ಸೀಕ್ರೆಟ್ ವಿಡಿಯೋ ರಿಲೀಸ್ !

ವರ್ಗಾವಣೆಯಾದರೂ ಯಾಕೆ ನೀವು ಈ ವಿಭಾಗಕ್ಕೆ ಭೇಟಿ ನೀಡಿದ್ದೀರಿ? ನೀವು ಆ ಪೆಟ್ರೋಲ್ ಬಂಕ್ ಬಳಿ ಐದು ಲೀಟರ್ ಕ್ಯಾನ್ ತಪಾಸಣೆ ಮಾಡಿದ್ದೀರಾ? ತಪಾಸಣೆ ಮಾಡಿದ್ದಲ್ಲಿ ಯಾಕೆ ಅದನ್ನು ಇಲಾಖೆಯ ಕಂಪ್ಯೂಟರ್‌ನಲ್ಲಿ ಉಲ್ಲೇಖಿಸಿಲ್ಲ? ಇನ್ನು ಅಳತೆ ಮತ್ತು ತೂಕದ ಇಲಾಖೆಯಲ್ಲಿ ಏಜೆಂಟ್ ಆಗಿ ಭ್ರಷ್ಟಚಾರ ನಡೆಸಿದ ಆರೋಪದಡಿ ಎಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿ ಶಿವಕುಮಾರ್ ಅವರ ಜತೆ ಯಾಕೆ ಹೋಗಿದ್ದಿರಿ? ಒಬ್ಬ ಆರೋಪಿಯ ಜತೆ ಮಾತನಾಡುವುದು ತಪ್ಪಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ಕೇಳಲಾಗಿದೆ ಎಂದು ಅಳತೆ ಮತ್ತು ತೂಕದ ಇಲಾಖೆಯ ಅಧಿಕಾರಿಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಏಜೆಂಟ್ ಶಿವಕುಮಾರ್ ಬಗ್ಗೆ ಎಸಿಬಿಗೆ ಮಾಹಿತಿ

ಏಜೆಂಟ್ ಶಿವಕುಮಾರ್ ಬಗ್ಗೆ ಎಸಿಬಿಗೆ ಮಾಹಿತಿ

ಏಜೆಂಟರ ಮೂಲಕ ಅಳತೆ ಮತ್ತು ಮಾಪನ ಉಪಕರಣ ತಯಾರು ಮಾಡುವರ ಬಳಿ ಲಂಚ ವಸೂಲಿ ಮಾಡಿ ಅಧಿಕಾರಿಗಳಿಗೆ ತಲುಪಿಸುತ್ತಿದ್ದ 20 ಏಜೆಂಟರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬಂಧನದ ವೇಳೆ 9 ಲಕ್ಷ ರೂ. ನಗದು ಹಣ ಸಿಕ್ಕಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಬಂಧನಕ್ಕೆ ಒಳಗಾಗಿದ್ದ ಏಜೆಂಟ್ ಶಿವಕುಮಾರ್ ಇದೀಗ ಮತ್ತೆ ಕಾನೂನು ಮಾಪನ ಶಾಸ್ತ್ರ (ಅಳತೆ ಮತ್ತು ತೂಕ) ಇಲಾಖೆಯ ಅಧಿಕಾರಿಗಳ ಜತೆ ಸೇರಿ ಮಾಮೂಲಿ ವಸೂಲಿಗೆ ಇಳಿದಿರುವ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಮಾಹಿತಿ ಕಲೆ ಹಾಕಿದೆ. ಒನ್ಇಂಡಿಯಾ ಕನ್ನಡ ವರದಿ ಬೆನ್ನಲ್ಲೇ ವಿಡಿಯೋದಲ್ಲಿರುವ ಶಿವಕುಮಾರ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮತ್ತೆ ಇಲಾಖೆಯಲ್ಲಿ ತಲೆಯೆತ್ತಿರುವ ಏಜೆಂಟರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ ಎನ್ನಲಾಗಿದೆ. ಲಂಚ ನೇರವಾಗಿ ಸ್ವೀಕರಿಸಿದರೆ ಸಾಕ್ಷ ಸಿಗುತ್ತದೆ ಎನ್ನುವ ಕಾರಣಕ್ಕೆ ಉನ್ನತ ದರ್ಜೆಯ ಅಧಿಕಾರಿಗಳು ಏಜೆಂಟರನ್ನು ಇಟ್ಟುಕೊಂಡು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಬೂಬು ಉತ್ತರಕ್ಕೆ ಸಿದ್ದವಾದಳೇ ಸೀಮಾ

ಸಬೂಬು ಉತ್ತರಕ್ಕೆ ಸಿದ್ದವಾದಳೇ ಸೀಮಾ

ಕಾನೂನು ಮಾಪನ ಶಾಸ್ತ್ರ ಇಲಾಖೆಯ ಲಂಚಾವತಾರದ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ಹೊಸಕೋಟೆ ರಸ್ತೆಯ ಬೂದಿಗೆರೆ ಸಮೀಪ ಇರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕರನ್ನು ಆರೋಪಿತ ಅಧಿಕಾರಿ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಮಾಮೂಲಿ ನೀಡಿದ ಬಗ್ಗೆ ಬೇರೆ ಕಾರಣ ನೀಡುವಂತೆ ಅವರಿಗೆ ಹೊಸದೊಂದು ಕಥೆ ಸೃಷ್ಟಿಸಿದ್ದಾರೆ ಎಂದು ಗೊತ್ತಾಗಿದೆ. ಅದು ಮಾಮೂಲಿ ಅಲ್ಲ ಎಂಬ ಸಿದ್ಧ ಉತ್ತರವನ್ನು ಆರೋಪಿತ ಅಧಿಕಾರಿ ತಮ್ಮ ಆಪ್ತ ಬಳಗದ ಬಳಿ ಹೇಳಿಕೊಂಡಿದ್ದಾರೆ. ಆದರೆ ಒಬ್ಬ ಬಂಧಿತ ಆರೋಪಿ ಏಜೆಂಟನ ಜತೆ ಹೋಗಿರುವುದು, ಮೇಡಮ್‌ಗೆ ಫೀಸ್ ಕೊಡಿ ಎಂದು ಹೇಳಿರುವುದು, ಮೇಡಮ್ ಹೊರ ಬರುತ್ತಿದ್ದಂತೆ ಕಾರು ಚಾಲಕ ಪೆಟ್ರೋಲ್ ಬಂಕ್ ಒಳಗೆ ಹೋಗಿ ಹಣ ಪಡೆದು ವಾಪಸು ಬಂದಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ವರ್ಗಾವಣೆ ಆದೇಶ ಆಗಿ ಎರಡು ದಿನದ ಬಳಿಕ ಹೋಗಲು ಅರ್ಹತೆ ಇಲ್ಲದಿದ್ದರೂ ಹೋಗಿರುವುದು, ಎಸಿಬಿಯಿಂದ ದಾಳಿಗೆ ಒಳಗಾದ ಏಜೆಂಟ್‌ನನ್ನು ಜತೆ ಕರೆದುಕೊಂಡು ಹೋಗಿರುವುದು, ಆತನೇ ಫೀಸ್ ಹೆಸರಿನಲ್ಲಿ ಮಾಮೂಲಿ ಕೇಳಿರುವುದು, ಪೆಟ್ರೋಲ್ ಬಂಕ್‌ನಲ್ಲಿ ಯಾವುದೇ ತಪಾಸಣೆ ಮಾಡದೇ ಬಂದಿರುವುದು ವಿಡಿಯೋದಲ್ಲಿ ಇರುವುದು ಇದೀಗ ಆರೋಪಿತ ಅಧಿಕಾರಿ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಪರಿಣಿತರಲ್ಲದವರ ಕೈಗೆ ಅಧಿಕಾರ

ಪರಿಣಿತರಲ್ಲದವರ ಕೈಗೆ ಅಧಿಕಾರ

ಸಾರ್ವಜನಿಕರಿಗೆ ತೂಕದಲ್ಲಿ ಮೋಸ ಮಾಡುವ ಜಾಲವನ್ನು ತಡೆಗಟ್ಟುವುದು ಕಾನೂನು ಮಾಪನ ಶಾಸ್ತ್ರ( ಅಳತೆ ಮತ್ತು ತೂಕ) ಇಲಾಖೆಯ ಪರಮ ಧ್ಯೇಯ. ಆದರೆ, ಅಧಿಕಾರ ಹಂಚಿಕೆಯಲ್ಲಿ ಆಗಿರುವ ಬಹುದೊಡ್ಡ ಪ್ರಮಾಣದಿಂದ ತಜ್ಞರು ಸಂತೆಯಲ್ಲಿ ಬಡವರು ತರಕಾರಿ ಮಾರುವ ಅಳತೆ ಮಾಪನಗಳ ತಪಾಸಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಅಳತೆ ಮತ್ತು ತೂಕದ ಬಗ್ಗೆ ಯಾವುದೇ ವಿಶೇಷ ಜ್ಞಾನ ಇಲ್ಲದವರು, ತಜ್ಞರು ಅಲ್ಲದ ಆಡಳಿತಾತ್ಮಕ ಅಧಿಕಾರಿಗಳು ಪೆಟ್ರೋಲ್ ಬಂಕ್, ಸ್ಕೇಲ್ ಉತ್ಪದಾನಾ ಘಟಕಗಳ ತಪಾಸಣೆ ಅಧಿಕಾರ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಕರ್ನಾಟಕ ಆಡಳಿತ ಸೇವೆಯಿಂದ ನೇಮಕವಾಗಿ ಬರುತ್ತಾರೆ. ಆಡಳಿತದ ಮೂಲಕ ಬರುವ ಅಧಿಕಾರಿಗಳು ಅಳತೆ ಮತ್ತು ತೂಕದಲ್ಲಿ ಆಗುತ್ತಿರುವ ಮೋಸ ನಿಯಂತ್ರಣಕ್ಕೆ ಯೋಜನೆ ರೂಪಿಸಿ ಅದನ್ನು ಜಾರಿ ಮಾಡಬೇಕಿತ್ತು. ವಿಶೇಷ ತಾಂತ್ರಿಕ ಪರಿಣಿತಿ ಪಡೆದಿರುವ ಇನ್ ಸ್ಪೆಕ್ಟರ್ ಗಳ ಮೂಲಕ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಬೇಕಿತ್ತು.


ಆದರೆ ಇಲ್ಲಿ ಆಗಿರುವುದೇ ಬೇರೆ. ಅಳತೆ ಮತ್ತು ತೂಕದ ಬಗ್ಗೆ ಯಾವ ವಿಶೇಷ ಪರಿಣಿತಿ, ತರಬೇತಿ ಪಡೆದ ಆಡಳಿತ ಹಂತದ ಅಧಿಕಾರಿಗಳು ಕೆಲವೊಂದು ತಪಾಸಣೆ ಅಧಿಕಾರ ಇಟ್ಟುಕೊಂಡಿದ್ದಾರೆ. ಹೀಗಾಗಿ ಪೆಟ್ರೋಲ್ ಬಂಕ್, ಅಳತೆ ಉಪಕರಣ ತಯಾರಿಸುವ ಕಂಪನಿಗಳಲ್ಲಿ ಏನಾದರೂ ಅಕ್ರಮ ಕಂಡು ಬಂದರೂ ಅಳತೆ ಮತ್ತು ಮಾಪನ ಇಲಾಖೆಯ ಇನ್‌ಸ್ಪೆಕ್ಟರ್‌ಗಳು ಪ್ರಕರಣ ದಾಖಲಿಸುವಂತಿಲ್ಲ. ದಾಖಲಿಸಿದರೂ ಅದಕ್ಕೆ ಮಾನ್ಯತೆಯೇ ಇಲ್ಲ ಎಂದು ಆರೋಪಿಗಳನ್ನು ಬಚಾವ್ ಮಾಡುವ ವ್ಯವಸ್ಥೆಯನ್ನೇ ಇಲಾಖೆ ಪಾಲಿಸಿಕಕೊಂಡು ಬಂದಿದೆ.

Recommended Video

ನೀವು ಏನ್ ಮಾಡಿದ್ರೂ ಅಷ್ಟೆ ನಾವಂತೂ ಮೇಕೆದಾಟು ಮಾಡೇ ಮಾಡ್ತೀವಿ | Oneindia Kannada
 ಅವೈಜ್ಞಾನಿಕ ಅವ್ಯವಸ್ಥೆಗೆ ತಿಲಾಂಜಲಿ

ಅವೈಜ್ಞಾನಿಕ ಅವ್ಯವಸ್ಥೆಗೆ ತಿಲಾಂಜಲಿ

ಅಳತೆ ಮತ್ತು ಮಾಪನ, ಅದರಲ್ಲಿ ಆಗುವ ಅನ್ಯಾಯ, ಅದನ್ನು ಪತ್ತೆ ಮಾಡುವ ವಿಧಾನ, ಅಕ್ರಮ ಕಂಡು ಬಂದರೆ ಕೇಸು ಮಾಡುವ ರೀತಿ ಬಗ್ಗೆ ರಾಂಚಿಯಲ್ಲಿ ತರಬೇತಿ ಪಡೆದ ಇನ್ಸ್ ಪೆಕ್ಟರ್‌ಗಳಿಗೆ ಅಧಿಕಾರವಿಲ್ಲ ಇದು ಅಳತೆ ಮತ್ತು ಮಾಪನ ಇಲಾಖೆಯ ಬಹುದೊಡ್ಡ ವೈಫಲ್ಯ.

ಈ ಅವೈಜ್ಞಾನಿಕ ಪದ್ಧತಿಯನ್ನು ಬದಲಿಸಲು ಈ ಹಿಂದೆ ಮುಖ್ಯ ನಿಯಂತ್ರಕರು ಯತ್ನಿಸಿದ್ದರು. ಆದರೆ ಅದಕ್ಕೆ ಅವಕಾಶ ಕೊಡಲಿಲ್ಲ. ಇದರ ಪರಿಣಾಮ ರಾಜ್ಯದ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಕದಿಯುತ್ತಿದ್ದರೂ ಅದನ್ನು ಪತ್ತೆ ಮಾಡುವ ಚಾಣಾಕ್ಷತೆ ಹಿರಿಯ ಅಧಿಕಾರಿಗಳಿಗೆ ಇಲ್ಲ. ಈ ಸತ್ಯ ಗೊತ್ತಿರುವ ಕೆಲವಂತೂ ತಮ್ಮ ದಂಧೆಯನ್ನು ನಿರಾತಂಕವಾಗಿ ಮುಂದುವರೆಸಿದ್ದಾರೆ. ನೂತನ ನಿಯಂತ್ರಕರು ಈ ಅವೈಜ್ಞಾನಿಕ ಅವ್ಯವಸ್ಥೆಗೆ ತಿಲಾಂಜಲಿ ಇಡುತ್ತಾರಾ ಕಾದು ನೋಡಬೇಕು.

English summary
Petrol Bunk bribe case: Departmental inquiry conducting against Corrupt officer of Legal metrology department, Oneindiakananda report impact:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X