ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಆರ್ ಹಿರೇಮಠ ಅವರಿಗೆ ಒನ್ಇಂಡಿಯ ಪ್ರಶಸ್ತಿ ಪ್ರದಾನ

|
Google Oneindia Kannada News

ಬೆಂಗಳೂರು, ಜ. 2 : ಒನ್ಇಂಡಿಯಾ ಕನ್ನಡದ ಓದುಗರು 'ಕರ್ನಾಟಕದ ವರ್ಷದ ವ್ಯಕ್ತಿ 2013' ಪ್ರಶಸ್ತಿಗೆ ಆಯ್ಕೆ ಮಾಡಿದ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರಿಗೆ ಗುರುವಾರ ಒನ್ಇಂಡಿಯಾ ಕನ್ನಡ ಬಳಗದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗುರುವಾರ ಒನ್ಇಂಡಿಯಾ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಒನ್ಇಂಡಿಯಾದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ಜಿ.ಮಹೇಶ್ ಅವರು ಸಂಗಯ್ಯ ರಾಚಯ್ಯ ಹಿರೇಮಠ ಅವರಿಗೆ ಕರ್ನಾಟಕದ ವರ್ಷದ ವ್ಯಕ್ತಿ 2013 ಪ್ರಶಸ್ತಿ ಪ್ರದಾನ ಮಾಡಿದರು. ಒನ್ಇಂಡಿಯಾ ಕನ್ನಡದ ಸಂಪಾದಕ ಎಸ್.ಕೆ. ಶ್ಯಾಮ ಸುಂದರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಆರ್.ಹಿರೇಮಠ, ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸದೆ ಭ್ರಷ್ಟಚಾರ, ಅಕ್ರಮ ಗಣಿಗಣಿಗಾರಿಕೆ ವಿರುದ್ಧ ತಾವು ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕದ ವರ್ಷದ ವ್ಯಕ್ತಿ 2013 ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಒನ್ಇಂಡಿಯಾ ಕನ್ನಡದ ಓದುಗರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. [ಕರ್ನಾಟಕ ವರ್ಷದ ವ್ಯಕ್ತಿಗೆ ಅಭಿನಂದನೆಗಳು]

ಹೋರಾಟಕ್ಕೆ ಸ್ಫೂರ್ತಿ : ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಭಾರತ ಮತ್ತು ಪ್ರಪಂಚದಲ್ಲಿ ಹಲವಾರು ಹೋರಾಟಗಳು ನಡೆದಿವೆ. ಮಹಾತ್ಮ ಗಾಂಧಿ, ನೆಲ್ಸನ್ ಮಂಡೇಲಾ ಮುಂತಾದವರಿಂದ ಸ್ಫೂರ್ತಿ ಪಡೆದು ತಾವು ಸಾಮಾಜಿಕ ಹೋರಾಟದಲ್ಲಿ ತೊಡಗಿದ್ದೇವೆ ಎಂದು ಹಿರೇಮಠ ಹೇಳಿದರು. ಅಮೆರಿಕಾದಲ್ಲಿದ್ದಾಗಲೇ ತವರು ನೆಲ ಭಾರತದಲ್ಲಿರುವ ಅನಕ್ಷರತೆ, ನಿರುದ್ಯೋಗ, ಆರೋಗ್ಯ ಸಮಸ್ಯೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕೆಂದು ಆಲೋಚಿಸುತ್ತಿದ್ದೆವು ಎಂದರು.

ದೇಶಕ್ಕೆ ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ, ದೇಶದ ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಮುಂತಾದವರು ನಮ್ಮ ಹೋರಾಟಕ್ಕೆ ಸ್ಫೂರ್ತಿ ತುಂಬಿದರು. ಆದ್ದರಿಂದ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆ ಭ್ರಷ್ಟಾಚಾರ ಮುಂತಾದ ಅಕ್ರಮಗಳ ವಿರುದ್ಧ ತಾವು ಹೋರಾಟ ನಡೆಸುತ್ತಿದ್ದೇವೆ ಎಂದು ಹಿರೇಮಠ ಹೇಳಿದರು.

ಕರ್ನಾಟಕದಲ್ಲಿ ಕೆಲವು ರಾಜಕಾರಣಿಗಳು ಕಾನೂನಿಯ ನಿಯಮಗಳನ್ನು ಗಾಳಿಗೆ ತೂರಿ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆಯುತ್ತಿದ್ದರು. ಆದರೆ, ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಜನರು ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದರು. ಇದನ್ನು ಕಂಡ ನಾವು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೋರಾಟ ಆರಂಭಿಸಿದೆವು ಎಂದರು.

ಬಳ್ಳಾರಿ ಹೋರಾಟ ಮೊದಲ ಗೆಲುವು : ಬಳ್ಳಾರಿಯಲ್ಲಿ ಸಂವಿಧಾನವನ್ನು ಗಣಿಧಣಿಗಳು ಕಸದ ಬುಟ್ಟಿಗೆ ಹಾಕಿದ್ದರು. ಸರ್ಕಾರಿ ಅಧಿಕಾರಿಗಳನ್ನು ಗುಲಾಮರಂತೆ ಇಟ್ಟುಕೊಂಡಿದ್ದರು. ಅಲ್ಲಿಂದಲೇ ನಮ್ಮ ಹೋರಾಟವನ್ನು ಆರಂಭಿಸಿದೆವು. ನೈಸರ್ಗಿಕ ಸಂಪತ್ತು ಲೂಟಿ ಹೊಡೆದವರಿಗೆ ಕಾನೂನ ಪ್ರಕಾರ ಶಿಕ್ಷೆ ಆಗಬೇಕೆಂದು ಹೋರಾಟ ಆರಂಭಿಸಿದೆವು. ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲು ಸೇರಿದ್ದು ನಮಗೆ ದೊಡ್ಡ ಗೆಲುವು ಎಂದು ಹಿರೇಮಠ ಹೇಳಿದರು.

ಯುವಕರು ಹೋರಾಟಕ್ಕೆ ಬರಬೇಕು : ದೇಶದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಾದ ಅಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಕವಲು ದಾರಿಯಲ್ಲಿದೆ. ದೇಶದ ಯುವಕರು ಹೋರಾಟಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹಿರೇಮಠ ಕರೆ ನೀಡಿದರು. ದೆಹಲಿಯಲ್ಲಿ ಯುವಕರು ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಟ ಮಾಡಬೇಕು ಎಂದು ತೋರಿಸಿದ್ದಾರೆ. ಇದು ಸ್ಫೂರ್ತಿ ಆಗಬೇಕು ಎಂದು ತಿಳಿಸಿದರು.

English summary
Oneindia - Karnataka person of the year-2013 Shri S.R. Hiremath felicitated in Bangalore by BG Mahesh founder, Managing Director of Greynium Information Technology Pvt, Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X