ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಮತ್ತೆ ಸಿಎಂ ಯಡಿಯೂರಪ್ಪ ಹಿಂದೆ ಬಿದ್ದ ಎಚ್.ವಿಶ್ವನಾಥ್

|
Google Oneindia Kannada News

ಮೈಸೂರು, ಫೆ 19: ಬಿಜೆಪಿಯ ನಾಮನಿರ್ದೇಶಿತ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದಂಬಾಲು ಬಿದ್ದಿದ್ದಾರೆ ಎನ್ನುವ ಮಾಹಿತಿಯಿದೆ.

ಕಾರಣ, ಅದೇ ಸಚಿವ ಸ್ಥಾನಕ್ಕಾಗಿ ಹೊರತು ಬೇರೆ ಇನ್ನೇನಕ್ಕೂ ಅಲ್ಲ. ನಾಮ ನಿರ್ದೇಶಿತ ಸದಸ್ಯರು ಸಚಿವರಾಗುವಂತಿಲ್ಲ ಎನ್ನುವ ಸುಪ್ರೀಂಕೋರ್ಟ್ ನಿರ್ದೇಶನದ ನಂತರ ವಿಶ್ವನಾಥ್ ಗೆ ಭಾರೀ ಹಿನ್ನಡೆಯಾಗಿತ್ತು.

ವಿಧಾನ ಪರಿಷತ್ ಉಪ ಚುನಾವಣೆಗೆ ದಿನಾಂಕ ಘೋಷಣೆ: ಎಸ್‌.ಎಲ್. ಧರ್ಮೇಗೌಡ ನಿಧನದಿಂದ ತೆರುವಾಗಿದ್ದ ಸ್ಥಾನ!ವಿಧಾನ ಪರಿಷತ್ ಉಪ ಚುನಾವಣೆಗೆ ದಿನಾಂಕ ಘೋಷಣೆ: ಎಸ್‌.ಎಲ್. ಧರ್ಮೇಗೌಡ ನಿಧನದಿಂದ ತೆರುವಾಗಿದ್ದ ಸ್ಥಾನ!

ಸುಪ್ರೀಂಕೋರ್ಟ್ ಆದೇಶಕ್ಕೂ ಬಿಜೆಪಿಯ ಕೆಲವು ಮುಖಂಡರ ವಿರುದ್ದ ಕಿಡಿಕಾರಿದ್ದ ವಿಶ್ವನಾಥ್, ತಮ್ಮ ಮುಂಬೈ ಫ್ರೆಂಡ್ಸ್ ಸಚಿವರ ವಿರುದ್ದವೂ ಗರಂ ಆಗಿದ್ದರು. ನನ್ನ ಜೊತೆಗಿದ್ದವರೆಲ್ಲಾ ಸಚಿವರಾಗಿದ್ದಾರೆ, ನಾನು ಮಾತ್ರ ಏಕಾಂಗಿಯಾದೆ ಎನ್ನುವ ನೋವನ್ನು ವಿಶ್ವನಾಥ್ ತೋಡಿಕೊಂಡಿದ್ದಾರೆ.

ಪರಿಷತ್‌ನಲ್ಲಿ ಇನ್ನು ಮೊಬೈಲ್ ಬಳಕೆಗೆ ನಿರ್ಬಂಧ: ಸಭಾಪತಿ ಘೋಷಣೆಪರಿಷತ್‌ನಲ್ಲಿ ಇನ್ನು ಮೊಬೈಲ್ ಬಳಕೆಗೆ ನಿರ್ಬಂಧ: ಸಭಾಪತಿ ಘೋಷಣೆ

ಈಗ, ಮತ್ತೆ ಮುಖ್ಯಮಂತ್ರಿಗಳ ಹಿಂದೆ ಬಿದ್ದಿರುವ ವಿಶ್ವನಾಥ್, ವಿಧಾನ ಪರಿಷತ್ ಗೆ ಡೈರೆಕ್ಟ್ ಎಂಟ್ರಿ ಬಯಸಿದ್ದಾರೆ. ಮುಖ್ಯಮಂತ್ರಿಗಳು ಯಾವರೀತಿ ಇದಕ್ಕೆ ಸ್ಪಂದಿಸಿದ್ದಾರೆ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಅದು ಹೇಗೆ, ಡೈರೆಕ್ಟ್ ಎಂಟ್ರಿ, ಮುಂದೆ ಓದಿ..

ಎಸ್.ಎಲ್. ಧರ್ಮೇಗೌಡ ಅವರ ನಿಧನದಿಂದ ತೆರುವಾಗಿದ್ದ ಸ್ಥಾನ

ಎಸ್.ಎಲ್. ಧರ್ಮೇಗೌಡ ಅವರ ನಿಧನದಿಂದ ತೆರುವಾಗಿದ್ದ ಸ್ಥಾನ

ವಿಧಾನ ಪರಿಷತ್ ಜೆಡಿಎಸ್ ಸದಸ್ಯರಾಗಿದ್ದ ಎಸ್.ಎಲ್. ಧರ್ಮೇಗೌಡ ಅವರ ನಿಧನದಿಂದ ತೆರುವಾಗಿದ್ದ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ದಿನಾಂಕವನ್ನು ಘೊಷಣೆ ಮಾಡಿದೆ. ಕಳೆದ ಡಿಸೆಂಬರ್ 28, 2020ರಂದು ಜೆಡಿಎಸ್ ಸದಸ್ಯರಾಗಿದ್ದ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಧಾನ ಪರಿಷತ್ ಚುನಾವಣೆ

ವಿಧಾನ ಪರಿಷತ್ ಚುನಾವಣೆ

ಮಾರ್ಚ್‌ 15 ರಂದು ಚುನಾವಣೆ ನಡೆಯಲಿದ್ದು, ಇದೇ ಫೆ. 25 ರಂದು ಅಧಿಸೂಚನೆ ಜಾರಿಯಾಗಲಿದೆ. ಮಾರ್ಚ್‌ 4 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಾರ್ಚ್ 15 ರಂದು ಬೆಳಗ್ಗೆ 9 ಗಂಟೆಯಿಂದ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಬಳಿಕ ಅಂದು 5ಗಂಟೆಗೆ ಮತ ಎಣಿಕೆ ಬಳಿಕ ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಬಿಜೆಪಿ ಟಿಕೆಟ್ ಗಾಗಿ ಹಿಂದೆ ಬಿದ್ದಿರುವ ಎಚ್.ವಿಶ್ವನಾಥ್

ಬಿಜೆಪಿ ಟಿಕೆಟ್ ಗಾಗಿ ಹಿಂದೆ ಬಿದ್ದಿರುವ ಎಚ್.ವಿಶ್ವನಾಥ್

ಈ ಸ್ಥಾನಕ್ಕೆ ಸ್ಪರ್ಧಿಸಲು ಎಚ್.ವಿಶ್ವನಾಥ್ ಮುಖ್ಯಮಂತ್ರಿ ಯಡಿಯೂರಪ್ಪನವರ ಹಿಂದೆ ಬಿದ್ದಿದ್ದಾರೆ. ತಮಗೆ ಈ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಬೇಕೆಂದು ವಿಶ್ವನಾಥ್ ಒತ್ತಡವನ್ನು ಹೇರುತ್ತಿದ್ದಾರೆ. ಮುಖ್ಯಮಂತ್ರಿಗಳು ವಿಶ್ವನಾಥ್ ಅವರಿಗೆ ಏನಾದರೂ ಭರವಸೆಯನ್ನು ನೀಡಿದ್ದಾರೆ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.

Recommended Video

203 ದಿನಗಳ ಪ್ರಯಾಣದ ನಂತರ ಮಂಗಳನ ಅಂಗಳ ತಲುಪಿದ ನಾಸಾ ರೋವರ್‌..! | NASA Rover | Oneindia Kannada
ಬಿಜೆಪಿ ಯಾವರೀತಿ ಸ್ಪಂದಿಸಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ

ಬಿಜೆಪಿ ಯಾವರೀತಿ ಸ್ಪಂದಿಸಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ

ಈ ಏಕೈಕ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವುದರಿಂದ, ಇದರಲ್ಲಿ ಗೆದ್ದರೆ, ಸಚಿವ ಸ್ಥಾನ ಪಡೆದುಕೊಳ್ಳಲು ಕೋರ್ಟಿನಿಂದ ತಕರಾರು ಇರುವುದಿಲ್ಲ. ಸಚಿವ ಸ್ಥಾನಕ್ಕಾಗಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ವಿಶ್ವನಾಥ್ ಅವರ ಬೇಡಿಕೆಗೆ ಬಿಜೆಪಿ ಯಾವರೀತಿ ಸ್ಪಂದಿಸಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

English summary
One Karnataka Legislative Council Election: H Vishwanath Trying For BJP Ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X