ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಂದು ದೇಶ- ಒಂದು ಭಾರತ' ಕೇಂದ್ರ ಸರ್ಕಾರದ ನಡೆ ಬಗ್ಗೆ ಎಚ್‌ಡಿಕೆ ಕಿಡಿ

|
Google Oneindia Kannada News

ಬೆಂಗಳೂರು, ಜೂ. 15: 'ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಒಂದು ದೇಶ ಒಂದು ಭಾಷೆ ಮೂಲಕ ಸಂಚು ರೂಪಿಸಿ ಕನ್ನಡವನ್ನು ನಿರ್ಲಕ್ಷಿಸಿವೆ. ಇದು ಕ್ಷಮಾರ್ಹ ಹಾಗೂ ಖಂಡನಾರ್ಹ' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ.

ಭಾರತ ಅಮೃತ ಮಹೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ 'ಒಂದು ಭಾರತ- ಶ್ರೇಷ್ಠ ಭಾರತ' ಪ್ರವಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರಲ್ಲಿ ಕೇವಲ ಹಿಂದಿ ಮಾತನಾಡುವ ಹಿಂದಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳ ವರದಿ ನೋಡಿ ನಾನು ಗಾಬರಿಯಾಗಿದ್ದೇನೆ. ಬೆಂಗಳೂರು ಡಿಡಿಪಿಐ ಹೊರಡಿಸಿರುವ ಆದೇಶ ಕನ್ನಡವನ್ನು ಕಗ್ಗೊಲೆ ಮಾಡುವ ಆದೇಶ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಿರೋಧಿಗಳ ಮೇಲೆ ಸುಳ್ಳು ಇಡಿ ಕೇಸು ದಾಖಲು: ರಾಮಲಿಂಗಾರೆಡ್ಡಿ ಅರೋಪ ಬಿಜೆಪಿ ವಿರೋಧಿಗಳ ಮೇಲೆ ಸುಳ್ಳು ಇಡಿ ಕೇಸು ದಾಖಲು: ರಾಮಲಿಂಗಾರೆಡ್ಡಿ ಅರೋಪ

''ಕನ್ನಡವನ್ನು ನಿರ್ನಾಮ ಮಾಡುವ ಈ ಕೃತ್ಯಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಚಿವರೇ ನೇರ ಹೊಣೆ. ಸರ್ಕಾರದ ಅರಿವಿಗೆ ಇಲ್ಲದೇ ಇಂತಹ ಆದೇಶ ಮಾಡಲು ಸಾಧ್ಯವಿದೆಯೇ? ಇದು ಸರ್ಕಾರದ ಕನ್ನಡ ವಿರೋಧಿ ಆಡಳಿತಕ್ಕೆ ಹಿಡಿದ ಕನ್ನಡಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಆಡಳಿತಕ್ಕೆ ಬಂದ ನಂತರ ಕನ್ನಡ ಮತ್ತು ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ. ಇದು ಕರ್ನಾಟಕದ ಘನತೆಗೆ ಧಕ್ಕೆ ತಂದಿದೆ'' ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

One Bharath, One Language police: Ex CM HD Kumarswamy slams BJP govt

ಕರ್ನಾಟಕ ಮತ್ತು ಕನ್ನಡ ಕಟುಕರ ಕೈಯಲ್ಲಿ ಸಿಲುಕಿದೆ. ನಮ್ಮ ಕನ್ನಡ ಮತ್ತು ಕರ್ನಾಟಕವನ್ನು ಹಿಂದಿ ಪ್ರಭಾವದಿಂದ ರಕ್ಷಣೆ ಮಾಡಿಕೊಳ್ಳಬೇಕಿದೆ. ಹಿಂದಿ ಹೇರಿ ಆದೇಶ ಮಾಡಿರುವ ಅಧಿಕಾರಿಯನ್ನು ಈ ಕೂಡಲೇ ವರ್ಗಾವಣೆ ಮಾಡಿ, ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಕನ್ನಡ ಮಕ್ಕಳು ಕಡ್ಡಾಯವಾಗಿ ಹೊರ ರಾಜ್ಯಗಳಿಗೆ ಪ್ರವಾಸ ಹೋಗಲು ಅವಕಾಶ ಕಲ್ಪಿಸಬೇಕು ಎಂದು ಮಾಜಿ ಸಿಎಂ ಟ್ವೀಟ್‌ನಲ್ಲಿ ಒತ್ತಾಯಿಸಿದ್ದಾರೆ.

English summary
One nation one Language policy :'Kannada and Karnataka are caught in butchers hands says Ex chief Minister HD Kumarswamy know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X