ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ದಿನವೂ ಡಿಕೆಶಿಗೆ 'ಇಡಿ ಡ್ರಿಲ್' : ಕುಮಾರಸ್ವಾಮಿ ಟ್ವೀಟ್

|
Google Oneindia Kannada News

Recommended Video

ಮತ್ತೆ ಡಿಕೆಶಿ ಬೆಂಬಲಕ್ಕೆ ನಿಂತ ಕುಮಾರಣ್ಣ..? | DK Shivakumar | Oneindia Kannada

ಬೆಂಗಳೂರು, ಸೆ 2: ಗಣೇಶ ಚತುರ್ಥಿಯ ದಿನದಂದೂ, ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದಕ್ಕೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಎಚ್ಡಿಕೆ, " ಗೌರಿಗಣೇಶ ಹಿಂದೂಗಳ ಬಹುಮುಖ್ಯವಾದ ಹಬ್ಬ. ಈ ಹಬ್ಬವನ್ನು ಆಚರಿಸಲು ಒಂದು ದಿನದ ಅವಕಾಶವನ್ನು ಡಿ ಕೆ ಶಿವಕುಮಾರ್ ಕೇಳಿದ್ದರು. ಆದರೆ, ಇಡಿ ಅಧಿಕಾರಿಗಳು ಇದಕ್ಕೆ ಅವಕಾಶ ನೀಡಲಿಲ್ಲ. ಇದು ಪ್ರತೀಕಾರದ ವರ್ತನೆ ಅಲ್ಲದೆ ಇನ್ನೇನು" ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿಚಾರಣೆಗೆ ತೆರಳುವ ಮುನ್ನಾ ಭಾವುಕರಾದ ಗಟ್ಟಿ ಗುಂಡಿಗೆಯ ಡಿಕೆ.ಶಿವಕುಮಾರ್ವಿಚಾರಣೆಗೆ ತೆರಳುವ ಮುನ್ನಾ ಭಾವುಕರಾದ ಗಟ್ಟಿ ಗುಂಡಿಗೆಯ ಡಿಕೆ.ಶಿವಕುಮಾರ್

ಇದಕ್ಕೂ ಮೊದಲು ಎಚ್ಡಿಕೆ ಹಬ್ಬದ ಶುಭಾಶಯವನ್ನು ಕೋರಿದ್ದರು." ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗೋಣ. ವಿಘ್ನ ವಿನಾಶಕನು ಎಲ್ಲರ ಬಾಳಲ್ಲೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ" ಎಂದು ಎಚ್ಡಿಕೆ ಟ್ವೀಟ್ ಮಾಡಿದ್ದರು.

On Festival Day ED Enquirty Continued To DK Shivakumar: HD Kumaraswamy Tweet

ಇಡಿ ವಿಚಾರಣೆಗೆ ತೆರಳುವ ಮುನ್ನಾ ಎದುರಾದ ಮಾಧ್ಯಮಗಳ ಎದುರು ಮಾತನಾಡಿದ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಗದ್ಗದಿತರಾದರು. "ಇಂದು ನಮ್ಮ ತಂದೆಯವರಿಗೆ ಹಿರಿಯರಿಗೆ ಪೂಜೆ ಮಾಡುವ ದಿನ. ಆದರೆ, ಅವರಿಗೆ ಇಂದು ಎಡೆ ಸಹ ಇಡಲು ಆಗುತ್ತಿಲ್ಲ, ಇವರು ಅವಕಾಶ ನೀಡಲಿಲ್ಲ, ನಾನೂ ನನ್ನ ತಮ್ಮ ಇಬ್ಬರೂ ಸಹ ಇಂದು ಇಲ್ಲೇ ಇದ್ದೇವೆ " ಎಂದುಡಿ ಕೆ ಶಿವಕುಮಾರ್ ಗದ್ಗಿತರಾದರು.

ಮಗನ ಪರಿಸ್ಥಿತಿಗೆ ಕಣ್ಣೀರು ಹಾಕಿದ ಡಿಕೆಶಿ ತಾಯಿ ಗೌರಮ್ಮಮಗನ ಪರಿಸ್ಥಿತಿಗೆ ಕಣ್ಣೀರು ಹಾಕಿದ ಡಿಕೆಶಿ ತಾಯಿ ಗೌರಮ್ಮ

"ನನ್ನ ಮಗನ ಏಳಿಗೆಯನ್ನು ನೊಡಲಾರದೆ ಬಿಜೆಪಿಯವರು ಅವನ ಮೇಲೆ ತಂತ್ರ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗುವುದಿಲ್ಲ" ಎಂದು ಡಿಕೆಶಿ ತಾಯಿ ಗೌರಮ್ಮ ಬಿಜೆಪಿಗೆ ಶಾಪ ಹಾಕಿದ್ದರು.

ಡಿ.ಕೆ.ಶಿವಕುಮಾರ್ ಅವರ ತಂದೆ ಸಮಾಧಿಗೆ ಎಡೆ ಇಡುವ ಕಾರ್ಯವನ್ನು ಡಿಕೆ ಶಿವಕುಮಾರ್ ಪುತ್ರ ನಡೆಸಿಕೊಟ್ಟರು. ಪ್ರತಿವರ್ಷ ಡಿಕೆ.ಶಿವಕುಮಾರ್ ಮತ್ತು ಅವರ ಸಹೋದರರು ಈ ಕಾರ್ಯ ನಡೆಸಿಕೊಡುತ್ತಿದ್ದರು.

English summary
On Ganesh Chaturthi Festival Day ED Enquirty Continued To former Minister and Senior Congress Leader DK Shivakumar: Unhappy former CM HD Kumaraswamy Tweet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X