ಸಿದ್ದು ಬಜೆಟ್ ಹಿಂದಿದೆ ಈ ಅಧಿಕಾರಿಗಳ ಪರಿಶ್ರಮ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 15ರಂದು ಮಂಡಿಸಿದ ಬಜೆಟ್ ನ ಹಿಂದೆ ಕೆಲವು ಪ್ರಮುಖ ಅಧಿಕಾರಿಗಳ ಪರಿಶ್ರಮವಿದೆ. ಆ ಅಧಿಕಾರಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಐಎನ್ಎಸ್ ಪ್ರಸಾದ್ - ಇವರು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Officials who worked for Karnataka Budget for 2017-18

ಅರವಿಂದ್ ಶ್ರೀವಾತ್ಸವ - ಇವರು ರಾಜ್ಯ ಸರ್ಕಾರದ ಆಯವ್ಯಯ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಿತೇಶ್ ಕುಮಾರ್ ಸಿಂಗ್ - ಇವರು ಕರ್ನಾಟಕ ಸರ್ಕಾರದ ಕಾರ್ಯದರ್ಶಿ

ಸಿಂಧು ಹಾಗೂ ಪವನ್ ಕುಮಾರ್ - ಇವರು ಕರ್ನಾಟಕ ಸರ್ಕಾರದ ಉಪ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.

ಈ ಮೇಲ್ಕಂಡ ಅಧಿಕಾರಿಗಳ ಜತೆಗೆ ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶು ಕುಮಾರ್, ಆಯ ವ್ಯಯ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸಹನಾ ಅವರು ಬಜೆಟ್ ನ ಕರಡು ಪ್ರತಿಯನ್ನು ಕನ್ನಡಕ್ಕೆ ಭಾಷಾಂತರಗೊಳಿಸುವಲ್ಲಿ ನೆರವು ನೀಡಿದ್ದಾರೆಂದು ಮುಖ್ಯಮಂತ್ರಿಗಳ ಕಚೇರಿಯು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the top officials of Karnataka Government who worked to prepare Karnataka Budget for 2017-18. Important officials among them are state government's additional chief secretary IBS Prasad, Chief Secretary Aravind Srivasthava are some among them.
Please Wait while comments are loading...