ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರಿಗಳ ವರ್ಗಾವಣೆ: ಎಚ್‌ಡಿಕೆ ಯೇ ಬಾಸ್, ಮೈತ್ರಿಗೆ ಬೀಳಲಿದೆಯೇ ಪೆಟ್ಟು?

|
Google Oneindia Kannada News

Recommended Video

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್ ಡಿ ಕೆಗೆ ಸಿಕ್ಕಿತು ವಿಶೇಷ ಅಧಿಕಾರ | Oneindia Kannada

ಬೆಂಗಳೂರು, ಅಕ್ಟೋಬರ್ 18: ಅಧಿಕಾರಿಗಳ ವರ್ಗಾವಣೆ ಈಗಾಗಲೇ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ ಅಂತಹುದರಲ್ಲಿ ಸಿಎಂ ಕುಮಾರಸ್ವಾಮಿ ತಳೆದಿರುವ ಏಕಪಕ್ಷೀಯ ನಿರ್ಧಾರ ದೋಸ್ತಿ ಪಕ್ಷಗಳ ನಡುವೆ ಕಂದರ ನಿರ್ಮಿಸುವ ಮುನ್ಸೂಚನೆ ನೀಡಿದೆ.

ಇನ್ನು ಮುಂದೆ ಯಾವುದೇ ಇಲಾಖೆಯ ಅಧಿಕಾರಿಗಳ ವರ್ಗಾವಣೆಯನ್ನು ಸಿಎಂ ಅವರು ಮಾಡಬಹುದಾಗಿದ್ದು, ಈ ವಿಷಯದಲ್ಲಿ ಯಾವುದೇ ಇಲಾಖೆಯ ಸಚಿವರುಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸರ್ಕಾರದ ಕಾರ್ಯದರ್ಶಿ ಎಲ್ಲ ಇಲಾಖೆಗಳಿಗೂ ಸುತ್ತೋಲೆ ಹೊರಡಿಸಿದ್ದಾರೆ.

ಮೂವರು ಡಿವೈಎಸ್‌ಪಿ ಸೇರಿ 36 ಎಸ್‌ಐಗಳ ವರ್ಗಾವಣೆ, ಪೂರ್ಣ ಪಟ್ಟಿ ಇಲ್ಲಿದೆಮೂವರು ಡಿವೈಎಸ್‌ಪಿ ಸೇರಿ 36 ಎಸ್‌ಐಗಳ ವರ್ಗಾವಣೆ, ಪೂರ್ಣ ಪಟ್ಟಿ ಇಲ್ಲಿದೆ

ನಿನ್ನೆಯಷ್ಟೆ ಈ ರೀತಿಯ ಸುತ್ತೋಲೆಯೊಂದು ಸಿಎಂ ಅವರ ಸೂಚನೆ ಮೇರೆಗೆ ಹೊರಡಿಸಲಾಗಿದ್ದು, ಈಗಾಗಲೇ ಹಲವು ಕಾಂಗ್ರೆಸ್‌ ಮಂತ್ರಿಗಳು ಈ ಬಗ್ಗೆ ಅಸಮಾಧಾನಗೊಂಡಿದ್ದಾರೆ.

ಸಮನ್ವಯ ಸಮಿತಿ ನಿರ್ಣಯ ಗಾಳಿಗೆ

ಸಮನ್ವಯ ಸಮಿತಿ ನಿರ್ಣಯ ಗಾಳಿಗೆ

ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ಬಳಿಕವೇ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಈ ಹಿಂದೆ ನಿರ್ಣಯ ಕೈಗೊಳ್ಳಕಾಗಿತ್ತು. ಆದರೆ ಕುಮಾರಸ್ವಾಮಿ ಅವರು ಆ ನಿಯಮ ಮೀರಿ ಏಕಪಕ್ಷೀಯ ನಿರ್ಣಯ ಕೈಗೊಳ್ಳಲು ಮುಂದಾಗಿದ್ದಾರೆ ಹಾಗೂ ಇದಕ್ಕೆ ಯಾರೂ ಆಕ್ಷೇಪ ಎತ್ತುವಂತಿಲ್ಲ ಎಂದೂ ಆಗ್ರಹಪಡಿಸಿದ್ದಾರೆ.

ಎಲ್ಲಿಗೆ ಬೇಕಾದರೂ ಯಾವಾಗ ಬೇಕಾದರೂ ವರ್ಗ

ಎಲ್ಲಿಗೆ ಬೇಕಾದರೂ ಯಾವಾಗ ಬೇಕಾದರೂ ವರ್ಗ

ಐಎಎಸ್‌, ಐಪಿಎಸ್, ಕೆಎಸ್‌, ಮುಖ್ಯ ಎಂಜಿನಿಯರ್‌ಗಳು ಸೇರಿದಂತೆ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳನ್ನು ಕುಮಾರಸ್ವಾಮಿ ಅವರು ಎಲ್ಲಿಗೆ ಬೇಕಾದರೂ, ಯಾವಾಗ ಬೇಕಾದರೂ ವರ್ಗಾವಣೆ ಮಾಡಬಹುದಾಗಿದೆ. ಹೀಗೆಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿಗೆ ಬರ್ತಿದ್ದಾರೆ 'ಸಿಂಗಂ' ಅಣ್ಣಾಮಲೈ: 5 ಐಪಿಎಸ್ ಅಧಿಕಾರಿಗಳ ವರ್ಗಾವಣೆಬೆಂಗಳೂರಿಗೆ ಬರ್ತಿದ್ದಾರೆ 'ಸಿಂಗಂ' ಅಣ್ಣಾಮಲೈ: 5 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಯಾವುದೇ ನಿಗಮ, ಮಂಡಳಿ, ಪ್ರಾಧಿಕಾರಕ್ಕಾದರೂ ವರ್ಗ

ಯಾವುದೇ ನಿಗಮ, ಮಂಡಳಿ, ಪ್ರಾಧಿಕಾರಕ್ಕಾದರೂ ವರ್ಗ

ಇನ್ನು ಮುಂದೆ ಯಾವುದೇ ಯಾವುದೇ ಅಧಿಕಾರಿಗಳನ್ನು ಯಾವುದೇ ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆ ಅಧೀನ ಹುದ್ದೆ, ಪ್ರಾಧಿಕಾರದ ಹುದ್ದೆಗಳಿಗೆ ನೇರವಾಗಿ ಸಿಎಂ ಅವರೇ ಸ್ಥಳ ನಿಯೋಜನೆ ಮಾಡಬಹುದು. ಹೀಗೆ ಸಿಎಂ ಇಂದ ಸ್ಥಳ ನಿಯುಕ್ತಿ ಪಡೆದವರಿಗೆ ಮತ್ತೊಮ್ಮೆ ಯಾವುದೇ ಇಲಾಖೆ ಇಲಾಖೆಯು ಸ್ಥಳ ನಿಯೋಜನೆ ಮಾಡುವಂತಿಲ್ಲ ಎಂದು ಸಹ ಸುತ್ತೋಲೆಯಲ್ಲಿ ನಿಯಮ ಹೇರಲಾಗಿದೆ.

ವರ್ಗಾವಣೆ ವಿಷಯದಿಂದ ಅಸಮಾಧಾನ ಹುಟ್ಟಿತ್ತು

ವರ್ಗಾವಣೆ ವಿಷಯದಿಂದ ಅಸಮಾಧಾನ ಹುಟ್ಟಿತ್ತು

ಕೆಲವು ತಿಂಗಳುಗಳ ಹಿಂದೆ ಅಷ್ಟೆ ಅಧಿಕಾರಿಗಳ ವರ್ಗಾವಣೆ ಕಾರಣದಿಂದ ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಉಲ್ಬಣಿಸಿತ್ತು. ಕಾಂಗ್ರೆಸ್‌ ಮಂತ್ರಿಗಳು ಈ ವಿಷಯವಾಗಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಬಳಿ ದೂರುಗಳನ್ನು ಹೇಳಿದ್ದರು. ಹಾಗಾಗಿ ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ನಂತರವೇ ವರ್ಗಾವಣೆ ನಿರ್ಣಯ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ತಾಕೀತು ಮಾಡಿದ್ದರು ಹಾಗಿದ್ದರೂ ಸಹ ಈಗ ಕುಮಾರಸ್ವಾಮಿ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ.

ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..ಸಿಎಂ ಕುಮಾರಸ್ವಾಮಿ ಡೈನಾಮಿಕ್ ನಿರ್ಧಾರಕ್ಕೆ ಸಾರ್ವಜನಿಕರ ಉಘೇ..ಉಘೇ..

ಕಾಂಗ್ರೆಸ್‌ ಮಂತ್ರಿಗಳ ಅಸಮಾಧಾನ

ಕಾಂಗ್ರೆಸ್‌ ಮಂತ್ರಿಗಳ ಅಸಮಾಧಾನ

ಈಗಾಗಲೇ ಈ ಸುತ್ತೋಲೆ ಬಗ್ಗೆ ಯು.ಟಿ.ಖಾದರ್, ಕೃಷ್ಣಬೈರೇಗೌಡ ಸೇರಿದಂತೆ ಹಲವು ಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುವುದಾಗಿ ಖಾದರ್‌ ಹೇಳಿದ್ದಾರೆ.

ಶಿಕ್ಷಕರ ವರ್ಗಾವಣೆ ನಿರೀಕ್ಷೆ ಅಂತ್ಯ: ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ಶಿಕ್ಷಕರ ವರ್ಗಾವಣೆ ನಿರೀಕ್ಷೆ ಅಂತ್ಯ: ಚುನಾವಣಾ ಆಯೋಗ ಗ್ರೀನ್ ಸಿಗ್ನಲ್

English summary
CM Kumaraswamy can transfer any officers to any where and ministers can not question his decision. Chief secretary issued a circulation about this to every department
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X