ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ ತಿಂಗಳ ಕ್ಯಾಲೆಂಡರ್ ನೋಡಿದ್ರಾ, ರಜೆಗಳ ಸುಗ್ಗಿ!

|
Google Oneindia Kannada News

ಗೌರಿಗಣೇಶ ಹಬ್ಬ ಮುಗಿದಿದೆ, ಮಕ್ಕಳಿಗೆ ಮಿಡ್ ಟರ್ಮ್ ಪರೀಕ್ಷೆ ಆರಂಭವಾಗಿದೆ. ಇದಾದ ನಂತರ ಪಿತೃಪಕ್ಷ, ನಂತರ ದಸರಾ.

ಅಕ್ಟೋಬರ್ 2015ರ ತಿಂಗಳ ಕ್ಯಾಲೆಂಡರ್ ಒಮ್ಮೆ ತಿರುವಿದರೆ ಅಂಕಿಗಳೆಲ್ಲಾ ಕೆಂಪುಮಯ, ಅರ್ಥಾತ್ ಸಾಲು ಸಾಲು ರಜೆಗಳ ಸುಗ್ಗಿ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಪ್ರಳಯ ಆಗುತ್ತಂತೆ ಎನ್ನುವ ಸುದ್ದಿಯ ನಡುವೆಯೂ, ಬರುವ ತಿಂಗಳು ಬರುವ ರಜೆಗಳ ಝಲಕ್ ಈ ರೀತಿಯಿದೆ ನೋಡಿ. (ಸೆಪ್ಟೆಂಬರ್ 28ಕ್ಕೆ ಜಗತ್ ಪ್ರಳಯ)

ಅಕ್ಟೋಬರ್ 2 ಶುಕ್ರವಾರ, ಗಾಂಧಿ ಜಯಂತಿ. ಇಲ್ಲಿ (ಟೆಕ್ಕಿಗಳೇತರರು) ಒಂದು ದಿನ ರಜೆ ಹಾಕಿದರೆ ಮೂರು ದಿನಗಳ ಸಾಲು ರಜಾ.

ಇನ್ನು ಅಕ್ಟೋಬರ್ 12 ಸೋಮವಾರ, ಮಹಾಲಯ ಅಮವಾಸ್ಯೆ. ಬ್ಯಾಂಕ್ ಮತ್ತು ಸರಕಾರಿ ನೌಕರರಿಗೆ ಹೇಗೂ ಎರಡನೇ ಶನಿವಾರ (ಅ 10) ರಜಾ, ಇಲ್ಲಿ ಮತ್ತೆ ಶನಿವಾರ, ಭಾನುವಾರ ಮತ್ತು ಸೋಮವಾರ ಮೂರು ದಿನಗಳ ರಜಾ ಸಂಭ್ರಮ.

Series of Holidays and long weekends in October 2015

ಅಕ್ಟೋಬರ್ ತಿಂಗಳಲ್ಲಿ ರಜೆಗಳ ಸಂಪದ್ಭರಿತ ವಾರ ಎಂದರೆ ನಾಲ್ಕನೇ ವಾರ. ಅಕ್ಟೋಬರ್ 22 (ಗುರುವಾರ, ಆಯುಧಪೂಜೆ) 23 (ಶುಕ್ರವಾರ, ವಿಜಯದಶಮಿ), 24 (ಶನಿವಾರ, ಮೊಹರಂ) 25 (ಭಾನುವಾರ), 27 (ಮಂಗಳವಾರ, ವಾಲ್ಮೀಕಿ ಜಯಂತಿ).

ಇಲ್ಲಿ ಖಾಸಗಿ ಕಂಪೆನಿಯ ಉದ್ಯೋಗಿಗಳಿಗೆ ಆಯುಧಪೂಜೆ ಮತ್ತು ವಿಜಯದಶಮಿಗೆ ರಜೆ ಇದ್ದೇ ಇರುತ್ತೆ. ಹಾಗಾಗಿ ಒಟ್ಟು ನಾಲ್ಕು ದಿನಗಳ ರಜೆಗಳ ಸಾಲು. (2015ರಲ್ಲಿ ಬರುವ ಸುದೀರ್ಘ ರಜೆಗಳ ಪಟ್ಟಿ)

ಇನ್ನು ಬ್ಯಾಂಕ್ ಮತ್ತು ಸರಕಾರಿ ಉದ್ಯೋಗಿಗಳಿಗೆ ಸೋಮವಾರ (ಅಕ್ಟೋಬರ್ 26) ಒಂದು ದಿನ ರಜೆ ಹಾಕಿದರೆ ಆರು ದಿನಗಳ ಸುದೀರ್ಥ ರಜೆಗಳ ಗೊಂಚಲು. ಅಬ್ಬಬ್ಬಾ...

ಸ್ವಕುಟುಂಬ ಸಮೇತ ಊರಿಗೆ, ಟ್ರಿಪ್ಪಿಗೆ ತೆರಳಲು ಪ್ಲಾನ್ ಮಾಡಿಕೊಂಡಿರುವವರು ಈಗಲೇ ಸಿದ್ಧತೆ ನಡೆಸುವುದು ಒಳ್ಳೆಯದು. ರಜೆಗಳು ವಾರಾಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ ಪ್ರವಾಸಿ ಸ್ಥಳಗಳು, ದೇವಾಲಯಗಳು ಪ್ರವಾಸಿಗರಿಂದ ತುಂಬಿ ತುಳುಕುವುದು ಗ್ಯಾರಂಟಿ.

ಹಾಗಾಗಿ ಲಾಡ್ಜುಗಳು, ಪ್ರವಾಸಿ ಮಂದಿರಗಳು, ವಸತಿಗೃಹಗಳು, ರೆಸಾರ್ಟುಗಳನ್ನು ಮುಂಗಡವಾಗಿಯೇ ಬುಕ್ ಮಾಡಿ ಅನ್ನೋದು ನಮ್ಮ ಕಡೆಯಿಂದ ನಿಮಗೆ ಪುಗ್ಸಟೆ ಸಲಹೆ. (ಹಬ್ಬ, ರಜಾದಿನಗಳ ಪಟ್ಟಿ)

ಅಕ್ಟೋಬರ್ ತಿಂಗಳಲ್ಲಿ ರಾಜ್ಯದ ಸರಕಾರಿ ಆಡಳಿತಯಂತ್ರ ಬಹುತೇಕ ಸ್ಥಗಿತಗೊಳ್ಳುವುದು ಗ್ಯಾರಂಟಿ. ಇನ್ನು ಬ್ಯಾಂಕುಗಳೂ ಕ್ಲೋಸ್ ಆಗುವುದರಿಂದ ಎಟಿಎಂಗಳಲ್ಲಿ ಹಣ ಖಾಲಿಯಾಗಬಹುದು.

ಸಾಲು ಸಾಲು ರಜೆಗಳು ಬಂದಾಗ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕ್‌ ಸಿಬ್ಬಂದಿ ಕ್ರಮ ತೆಗೆದುಕೊಳ್ಳಬೇಕು. ಎಟಿಎಂಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಹೆಚ್ಚಿನ ಹಣದ ವ್ಯವಸ್ಥೆಯನ್ನು ಮಾಡಿರಬೇಕು ಎನ್ನುವ ಕೂಗು ಇಂದು ನಿನ್ನೆಯದಲ್ಲ. ನೋಡೋಣ.. ಈ ಬಾರಿಯ ರಜೆಯಲ್ಲಿ ಏನಾಗುತ್ತದೆಯೆಂದು.

ಇನ್ನು ರಜೆಯ ಸಂದರ್ಭದಲ್ಲಿ ಖಾಸಗಿ ಬಸ್ ನವರಿಗಂತೂ ಶುಕ್ರದೆಸೆ. ರಜೆಯ ಲಾಭ ಪಡೆದು, ಹಣ ಮಾಡಿಕೊಳ್ಳಲು ಟಿಕೆಟ್ ಶುಲ್ಕವನ್ನು ಮನಬಂದಂತೆ ಏರಿಕೆ ಮಾಡುತ್ತಾರೆ. ಅದಕ್ಕೂ ಸಿದ್ದರಾಗಿ. ಈ ಬಗ್ಗೆ ಸಾರಿಗೆ ಸಚಿವರಿಗೆ ದೂರು ನೀಡೋಣ ಅಂದ್ರೆ ಕೆಎಸ್ಆರ್ಟಿಸಿಯವರೂ ಬಸ್ ದರ ಜಾಸ್ತಿ ಮಾಡ್ತಾರೆ..

English summary
Series of Holidays and long weekends in October 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X