ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು: ಈ ಮನುಷ್ಯ 92 ಕೆಜಿ ತೂಕ ಕಳೆದುಕೊಂಡ

By Srinath
|
Google Oneindia Kannada News

Obese Sunil D Mello loses 92 kgs at Kasturba Medical College Mangalore
ಮಂಗಳೂರು, ಫೆ.22: ಇತ್ತೀಚೆಗೆ ಒಂದೇ ಸಮನೆ ತೂಕ ಹೆಚ್ಚಿಸಿಕೊಳ್ಳುತ್ತಾ ಅಪಾಯಕಾರಿ ಹಂತಕ್ಕೆ ಬೆಳೆದ ಮಧ್ಯ ವಯಸ್ಕ ವ್ಯಕ್ತಿ 92 ಕೆಜಿ ತೂಕ ಕಳೆದುಕೊಂಡು ಈಗ ಹಗುರವಾಗಿದ್ದಾರೆ. ನಗರದ ಪ್ರತಿಷ್ಠಿತ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ವೈದ್ಯರು ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಎರಡು ವರ್ಷಗಳಿಂದೀಚೆಗೆ 35 ವರ್ಷದ ಸುನಿಲ್ ಡಿ ಮೆಲ್ಲೋ ಅವರ ದೇಹ ತೂಕ 181 ಕೆಜಿಗೆ ತಲುಪಿತ್ತು. ಅವರೀಗ 92 ಕೆಜಿ ಕರಗಿದ್ದು, ಬೇರೆಯವರಂತೆ ಸಾಮಾನ್ಯ ಜೀವನ ನಡೆಸಲು ಆರಂಭಿಸಿದ್ದಾರೆ. bariatric bypass surgery ಮೂಲಕ ವೈದ್ಯರು ಸುನಿಲ್ ಡಿ ಮೆಲ್ಲೋಗೆ ಆಸರೆಯಾಗಿದ್ದಾರೆ.
( ರಾಜಾಜ್ಞೆಗೆ ಬೆದರಿ 320 ಕೆಜಿ ತೂಕ ಇಳಿಸಿದ ಶಾಯರಿ )

ಶಸ್ತ್ರಚಿಕಿತ್ಸೆಗೆ ಮುಂಚೆ ಸುನಿಲ್ ಡಿ ಮೆಲ್ಲೋ ಆರೋಗ್ಯ ಗಂಭೀರವಾಗುತ್ತಾ ಸಾಗಿತ್ತು. ಅವರ ದೇಹದಲ್ಲಿ ಒಂದೇ ಸಮನೆ ಕೊಬ್ಬು ಶೇಖರಣೆಯಾಗುತ್ತಾ ಸಾಗಿತ್ತು. ಸುನಿಲ್ ಡಿ ಮೆಲ್ಲೋಗೆ ಬಾಲ್ಯಾವಸ್ಥೆಯಿಂದಲೂ ಈ ಅವಸ್ಥೆ ಒದಗಿಬಂದಿತ್ತು. ಶಸ್ತ್ರಚಿಕಿತ್ಸೆ ನಂತರ ಸುನಿಲ್ ಡಿ ಮೆಲ್ಲೋ ಈಗ 89 ಕೆಜಿ ತೂಗುತ್ತಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಂದಹಾಸ ಬೀರಿದ್ದಾರೆ.

ಸುನಿಲ್ ಡಿ ಮೆಲ್ಲೋ 15 ವರ್ಷದವರಾಗಿದ್ದಾಗಲೇ 102 ಕೆಜಿ ದೇಹವನ್ನು ಹೊತ್ತುಕೊಳ್ಳುವಂತಾದರರು. 2005ರಲ್ಲಿ ಅವರಿಗೆ ಬೆನ್ನುನೋವು ತೀವ್ರವಾಗಿ ಬಾಧಿಸತೊಡಗಿತು. ಆಗ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಚಿಕಿತ್ಸೆ ಪಡೆದರು.

ಅದರಂತೆ 6 ತಿಂಗಳಲ್ಲಿ 30 ಕೆಜಿ ದೇಹ ತೂಕ ಕಡಿಮೆಯಾಯಿತಾದರೂ ಮತ್ತೆ 3 ತಿಂಗಳಲ್ಲಿ 45 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ನ್ಯಾಚುರೋಪತಿ, ಡಯಟ್ ಅಂತೆಲ್ಲಾ ಟ್ರೈ ಮಾಡಿದರು. ಆದರೆ ಯಾವುದೂ ಮೈಗೆ ಹತ್ತಲಿಲ್ಲ.

ಆದರೆ 2010ರಲ್ಲಿ ಮಗ ಹುಟ್ಟಿದಾಗ ಸುನಿಲ್ ಡಿ ಮೆಲ್ಲೋ ಮೈಕೊಡವಿಕೊಂಡು ಎದ್ದುಕುಳಿತರು. ಇನ್ನು ಹೀಗೇ ಇರಲು ಸಾಧ್ಯವಿಲ್ಲ ಎಂದು ಸೀದಾ Kasturba Medical College Hospitalನಲ್ಲಿ ತಪಾಸಣೆಗೆ ಒಳಗಾದರು. 2011ರಲ್ಲಿ ವೈದ್ಯರು bariatric bypass surgeryಗೆ ತಾವು ಸಿದ್ಧವೆಂದರು.

ನೋಡನೋಡುತ್ತಿದ್ದಂತೆ ಸುನಿಲ್ ಡಿ ಮೆಲ್ಲೋ ದೇಹಸಿರಿ ಕರಗುತ್ತಾ ಬಂದಿತು. ಆಹಾರ ಪದ್ಧತಿ ಬದಲಾಯಿಸಿಕೊಳ್ಳುವುದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವಂತೆ ವೈದ್ಯ ಸಲಹೆ ನೀಡಲಾಗಿದೆ. ಸುನಿಲ್ ಎಲ್ಲರಂತೆ ಮಾಮೂಲಿ ಮನುಷ್ಯರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.

English summary
Sunil D’Mello, from Mangalore loses 92 kgs. The obese Sunil, weighing a staggering 181 kgs, has shed 91 kgs after the bariatric bypass surgery at Kasturba Medical College Hospital. D’Mello (35) weighed 181 kg till two years back. Because of excessive weight, his health had deteriorated. D’Mello had been facing the problem of accumulation of body fat and increasing weight since childhood. With the reduction of weight consequent to surgery, D’Mello now weighs a far healthier 89 kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X