ಹಿಂದುಳಿದ ವರ್ಗಕ್ಕೆ ಆಲೆಮಾರಿಗಳ 46 ಜಾತಿಗಳು ಸೇರ್ಪಡೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26: ಪ್ರತ್ಯೇಕ ಲಿಂಗಾಯತ ಧರ್ಮ ಭಾಗ್ಯ ನೀಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದರ ಜತೆಗೆ 46 ಜಾತಿಗಳನ್ನು ಅಧಿಕೃತವಾಗಿ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿದೆ.

ರಾಜ್ಯ ಸರ್ಕಾರದ ಆದೇಶದ ಪ್ರಕಾರ, 46 ಜಾತಿಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ, ಅರೆ-ಅಲೆಮಾರಿ ಜನಾಂಗಗಳೆಂದು ಗುರುತಿಸಲಾಗಿದೆ.

ಹಿಂದುಳಿದ ವರ್ಗಕ್ಕೆ ಆಲೆಮಾರಿಗಳ 46 ಜಾತಿಗಳು ಸೇರ್ಪಡೆ

ಬೈರಾಗಿ (ಬಾವ) ಬಾಲಸಂತೋಷ-ಜೋಷ, ಬಾಜ್ಗರ್, ಭರಡಿ, ಬುಡಬುಡಕ್-ಜೋಷ-ಗೊಂಧಳಿ, ಚಾರ, ಚಿತರೂಕರ್-ಜೋಷ, ಧೋಲಿ, ಡವೇರಿ, ದೊಂಬರಿ, ಘಿಸಾಡಿ, ಗಾರುಡಿ, ಗೋಪಾಲ್, ಗೊಂದಳಿ, ಹೆಳವ, ಜೋಗಿ, ಕೇಲಕಿರಿ, ಕೋಲ್ಹಟಿ, ನಂದಿವಾಲ-ಜೋಷ-ಗೊಂದಳಿ ಪುಲ್ಮಾಲಿ, ನಾಥಪಂರ್ ಡೌರಿಗೋಸಾವಿ, ನಶಿ್ಕಕಾರಿ, ಪಾಂಗುಯಾಯಲ್, ಜೋಷ (ಸಾದಾಜೋಷ), ಸಾನಸ್ಯ ಸರಾನಯ, ತ್ರುಮಲಿ, ವಾಯು್ಡ, ವಾಸುದೇವ, ವಾಡಿ, ವಾಗಿರೂ, ವೀರ್, ಬಜನಯ, ಶಿಕಕಿಲಿಗರ್, ಗೊಲಲಿ, ಕ್ಲಿಲಿಕಾಯಾತ, ಸರೋಡಿ, ದುಗ್ಕ-ಮುಗ್ಕ (ಬುರ್ಬುರ್ಚ), ಹಾವ್ಗಾರ್ (ಹಾವಾಡಿಗಾರ್), ಪಿಚಿಗುಂಟಲ, ಮಸಣಿಯ
ಯೕಗಿ, (ಬೆಸ್ತರ್) ಬುಂಡಬೆಸ್ತ, ಕಟಬು, ದವೆ್ಕಶ್, ಕಾಶಿಕಪಾಡಿ, ದೊಂಬಿದಾಸ, ಬೈಲಪತ್ತಾರ್ ಎಂಬ ಈ 46 ಜಾತಿಗಳನ್ನು ಅಧಿಕೃತವಾಗಿ ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ- ಅರೆ ಅಲೆಮಾರಿ ಜನಾಂಗಗಳೆಂದು ಗುರುತಿಸಲಾಗಿದೆ.

OBC Department seeks informataion from Alemari community

ಈ ಅಲೆಮಾರಿ- ಅರೆಅಲೆಮಾರಿ ಜನಾಂಗಗಳ ಪ್ರಸ್ತುತಿ ಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಪ್ರಮುಖ ಹಾಗೂ ನಿಖರ ಮಾಹಿತಿಗಳನ್ನು ನೀಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಒಂದು ಪುಸ್ತಕವನ್ನು ಹೊರ ತರಲಾಗುತ್ತಿದೆ.

ಒಬಿಸಿ ಕೆನೆ ಪದರ ಆದಾಯ ಮಿತಿ 8 ಲಕ್ಷಕ್ಕೆ ಏರಿಕೆ

ಈ ನಿಟ್ಟಿನಲ್ಲಿ ಈ ಮೇಲಿನ ಅಲೆಮಾರಿ-ಅರೆ ಅಲೆಮಾರಿ ಜಾತಿಗಳ/ ಸಮುದಾಯಗಳ ಪ್ರತಿನಿಧಿಗಳು ಅಥವಾ ಆ ಸಮುದಾಯದ ಸಂಘಗಳಿದ್ದಲ್ಲಿ ಅವುಗಳ ಮುಖ್ಯಸ್ಥರು, ಆಯೋಗದ ಕಚೇರಿಗೆ ಬಂದು ತಮ್ಮ ಜಾತ್ಯ ಬಗ್ಗೆ ನಿಖರವಾದ ಮಾಹಿತಿಗಳನ್ನು ನೀಡಬಹುದಾಗಿದೆ.

ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?

ಲಿಖಿತವಾಗಿ ಅಥವಾ ಮುದ್ದಾಮ್ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16-ಡಿ, 2ನೇ ಮರಡಿ, ಡಿ.ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು- 560052 ಗೆ ಇಲ್ಲಿಗೆ ಕಳಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Other Backward Class Department has asked Alemari community to provide information about their community. Siddaramaiah led Congress government decided include 46 caste into OBC category

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ