• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವಮನಸ್ಸುಗಳಿಗಾಗಿ ಇರುವ ಪತ್ರಿಕೆ ಓ ಮನಸೇ

By Mahesh
|

'ಓ ಮನಸೇ' ಭಾವಭೂಮಿಕೆಯನ್ನು ಯುವ ಜನರಲ್ಲಿ ನಿರ್ಮಿಸಿರುವ ಪತ್ರಿಕೆ. ಎಲ್ಲೋ ಬಸ್ಸಲ್ಲಿ ಸಿಕ್ಕಿದೋರು, ಸ್ಕೂಲ್‌ನಲ್ಲಿ ಪಕ್ಕದಲ್ಲಿ ಕೂತ್ಕೊಂಡು ಡಬ್ಬಿ ಹಂಚಿಕೊಂಡವರು, ಕೆಲಸವಿಲ್ಲದಿದ್ದಾಗ ಮನೆಯಲ್ಲಿ ಇಟ್ಕೊಂಡೋರು ಆ ತರಹ ನಮ್ಮ ಜೀವನದಲ್ಲಿ ಸಾವಿರಾರು ಜನ ಬಂದ್ಹೋಗಿರ್ತಾರೆ. ಅವರ ಮುಖ ಚಹರೆ ಎಲ್ಲಾ ಮರೀತೀವಿ ನಾವು.

ಆದರೆ ರವಿ ಬೆಳಗೆರೆಯವರ 'ಖಾಸ್ ಬಾತ್'ನಲ್ಲಿ ಅವರಿಗೆಲ್ಲಾ ಮುಖ, ಚಹರೆ ಕೊಡುವಂಥ ಒಂದು ರೀತಿ ಕಥನವೇ ಅದು. ಆ 'ಖಾಸ್ ಬಾತ್'ನಲ್ಲಿ ಒಂದು ಎಲಿಮೆಂಟ್ ಇತ್ತಲ್ಲಾ? ಯವಜನರ ಜೊತೆ ಮುಕ್ತವಾದ ಸಂವಾದ, ಒಂದು ಸಲಿಗೆಯಿಂದ ಬೈಯೋದು, ಬುದ್ಧಿವಾದ ಹೇಳೋದು ಆ ತರಹದ್ದು, ಅದರ ವಿಸ್ತಾರವಾದ ರೂಪ 'ಓ ಮನಸೇ..' ಅಂತ ನನಗೆ ಅನ್ನಿಸುತ್ತದೆ. 'ಓ ಮನಸೇ'ಗೆ ಅದರದೇ ಆದ ಭಾವನಾತ್ಮಕವಾದ ಮತ್ತು ಅಷ್ಟೇ ಜವಾಬ್ದಾರಿಯುತವಾದ ವಾಚಕವೃಂದ ಇದೆ. ನೂರನೇ ಸಂಚಿಕೆ ಬರ್ತಾ ಇರೋದು ಬಹಳ ಖುಷಿ.

ಎಲ್ಲರೂ ಫೇಸ್‌ಬುಕ್‌ಗಳಲ್ಲಿ, ಸೆಲ್ಫಿಗಳಲ್ಲಿ ಆತ್ಮರಥರಾಗಿ ಹೋಗ್ತಿದ್ದಾರೆ ಎನ್ನುವ ಭಯದಲ್ಲಿರುವಾಗ ಈಗಲೂ ಅಂಗಡಿ ಹೋಗಿ 20 ರುಪಾಯಿ ಕೊಟ್ಟು ಓ ಮನಸೇ..' ತಗೊಂಡು ಬಸ್ಸಲ್ಲಿ, ಮನೆ ಟೇಬಲ್ ಮೇಲಿಟ್ಕೊಂಡು ಓದುತ್ತಾರೆಂದರೆ ಹೃದಯಂಗಮವಾದ ಸಂಗತಿ-ಜಯಂತ್ ಕಾಯ್ಕಿಣಿ. [50 ವರ್ಷ ತುಂಬಿದ ಸುಧಾ ವಾರಪತ್ರಿಕೆ]

ಜಯಂತ್ ಮಾತಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಎಪ್ಪತ್ತೈದರ ಅಜ್ಜಂದಿರು ‘ಓ ಮನಸೇ'ಯನ್ನು ಮನೆ ಟೇಬಲ್ ಇಟ್ಟುಕೊಂಡು ಓದುತ್ತಾರೆ, ಕೆಲವೊಮ್ಮೆ ಮೊಮ್ಮಗನಿಂದ ಓದಿಸುತ್ತಾರೆ. ಬಸ್ಸಲ್ಲಿ ಯುವಕರು ತಮ್ಮ ತೊಡೆಯ ಮೇಲಿಟ್ಟುಕೊಂಡು ಪತ್ರಿಕೆಯನ್ನು ಶ್ರದ್ಧೆಯಿಂದ ಓದುತ್ತಾರೆ. ನಿಮಗೇ ಗೊತ್ತಿರುವ ಹಾಗೆ ‘ಓ ಮನಸೇ' ಆರಂಭಗೊಂಡು ಇಂದಿಗೆ ಹನ್ನೊಂದು ವರ್ಷಗಳೇ ಕಳೆದುಹೋಗಿವೆ.

ನಮ್ಮ ಓದುಗರ ಪೈಕಿ ಹಲವಾರು ಮಂದಿ ‘ಓ ಮನಸೇ'ಯ ಅಷ್ಟೂ ಸಂಚಿಕೆಗಳನ್ನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವರ ಪಾಲಿಗೆ ಅದೊಂದು ಅಮೂಲ್ಯ ಆಸ್ತಿ. ಈ ಹಿಂದೆ ‘ರೀಡರ್ಸ್ ಡೈಜೆಸ್ಟ್' ಪತ್ರಿಕೆಯ ಸಂಚಿಕೆಗಳನ್ನು ಇದೇ ಥರ ಕಾಪಿಟ್ಟುಕೊಳ್ಳುವ ಜನರಿದ್ದರು, ಆಮೇಲೆ ‘ಕಸ್ತೂರಿ' ಪತ್ರಿಕೆಗೂ ಅಂಥಾದ್ದೇ ರಾಜಮರ್ಯಾದೆ ಸಂದಾಯವಾಗಿತ್ತು. ಈಗ ‘ಓ ಮನಸೇ..'ಯ ಸರದಿ. ಹದಿನೈದೇ ರುಪಾಯಿಗೆ ಇದಕ್ಕಿಂತ ಜಾಸ್ತಿ ಪುಟಗಳನ್ನು ಬಣ್ಣದಲ್ಲಿ ನೀಡುವ ಪತ್ರಿಕೆಗಳಿವೆ, ಹಾಗಿರುವಾಗ ಐವತ್ತು ಪುಟಗಳ ‘ಓ ಮನಸೇ'ಗೆ ಇಪ್ಪತ್ತು ರುಪಾಯಿ ದುಬಾರಿಯಾಯಿತಲ್ಲವೇ ಎಂದು ಕೆಲವರು ತಕರಾರು ಎತ್ತಿದ್ದುಂಟು.[ಕಾಮಿನಿಯೆಂದರೆ ಹೆಣ್ಣು ; ಕಾಮಿಯೆಂದರೆ ಹೆಣ್ಣುಬೆಕ್ಕು!]

ಅವರಿಗೆ ನಾನು ಹೇಳುವುದಿಷ್ಟೆಃ ಮಿಕ್ಕ ಪತ್ರಿಕೆಗಳಲ್ಲಿ ಜಾಹಿರಾತಿಗೆ ಮೀಸಲಾಗಿರುವ ಪುಟಗಳನ್ನು ಕಳೆದು ನೋಡಿ, ಆಗ ಕಂಟೆಂಟ್ ಸಲುವಾಗಿ ಉಳಿಯುವುದು ಐವತ್ತು ಪುಟಗಳೇ. ಕಲರ್ ಪುಟಗಳ ವಿಷಯಕ್ಕೆ ಬಂದರೆ ಅಂದಚಂದಕ್ಕೋಸ್ಕರ ಈಗ ಯಾರೂ ಪತ್ರಿಕೆಗಳನ್ನು ಓದುವುದಿಲ್ಲ. ಟೀವಿಯಲ್ಲಿ ನ್ಯಾಷನಲ್ ಜಿಯಾಗ್ರಫಿ ಚಾನೆಲ್ಲು ನೋಡಿ, ಅದು high definition ಗುಣಮಟ್ಟದಲ್ಲಿರುತ್ತವೆ.

ಅದರ ಜೊತೆಗೆ ಯಾರಾದರೂ ಪೈಪೋಟಿಗೆ ಬೀಳುವುದಕ್ಕಾಗುತ್ತದೆಯೇ? ಅಂದದ ಮನೆಗೊಂದು ಚಂದದ ಪತ್ರಿಕೆ ಅನ್ನುವ ಕಾಲ ಹೊರಟುಹೋಯಿತು. ಟೀಪಾಯ್ ಮೇಲಿಟ್ಟುಕೊಳ್ಳುವ ಪತ್ರಿಕೆಯ ಒಳಗೇನಿದೆ ಅನ್ನುವುದೇ ಮುಖ್ಯ. ಬಹುಶಃ ‘ಸಮಾಧಾನ'ದಂಥ ವಿಶಿಷ್ಟ, ವಿಭಿನ್ನ ಅಂಕಣ ಬೇರೆ ಯಾವ ಪತ್ರಿಕೆಯಲ್ಲೂ ಇಲ್ಲ. ಸೆಕ್ಸು, ಕ್ರೌರ್ಯ, ರಾಜಕೀಯ ನಮಗಲ್ಲ.

ಪತ್ರಿಕೆ ತನ್ನ ಸುದೀರ್ಘ ಪಯಣದಲ್ಲಿ ನಾನಾ ಅವತಾರಗಳನ್ನು ಎತ್ತಬೇಕಾಗುತ್ತದೆ. ಒಮ್ಮೆ ಗೆಳೆಯನಂತೆ, ಮತ್ತೊಮ್ಮೆ ಹಿರಿಯನಂತೆ, ಮಗದೊಮ್ಮೆ ಪ್ರೇಮಿಯಂತೆ...ಹೀಗೆ ಓದುಗರನ್ನು ಆವರಿಸುತ್ತಾ, ನೇವರಿಸುತ್ತಾ, ಅವರ ದೈನಿಕದಲ್ಲಿ ಒಂದಾಗುವುದು ಕಷ್ಟದ ಕೆಲಸ. ಅದನ್ನು ಸಾಧಿಸುವ ಹಾದಿಯಲ್ಲಿ ನಾವಿದ್ದೇವೆ ಅನ್ನುವುದೇ ನನ್ನ ಸಂತಸ.

ಜೊತೆಗೆ ನೀವಿಲ್ಲದೇ ಇದ್ದರೆ ಇದು ಸಾಧ್ಯವಾಗುವುದಿಲ್ಲ ಅನ್ನುವುದು ವಾಸ್ತವ. ಕೆಲವು ಓದುಗರು ಪದೇಪದೇ ಪತ್ರ ಬರೆದು ವಿನಂತಿಸಿಕೊಳ್ಳುತ್ತಿದ್ದಾರೆ - ಯಾವುದೇ ಕಾರಣಕ್ಕೂ ‘ಓ ಮನಸೇ'ಯನ್ನು ಮತ್ತೆ ಸ್ತಗಿತಗೊಳಿಸಬೇಡಿ. ಆ ಪ್ರಶ್ನೆಯೇ ಇಲ್ಲ, ಯಾಕೆಂದರೆ ಅಂಬೆಗಾಲಿಡುತ್ತಿದ್ದ ಮಗು ಈಗ ಹರಯಕ್ಕೆ ಬಂದಿದೆ. ನಿಮ್ಮ ಹರಕೆ, ಹಾರೈಕೆಯಿದ್ದರೆ ಇದು ದ್ವಿಶತಕ ಬಾರಿಸುವುದು ದೊಡ್ಡ ಸಂಗತಿಯೇನಲ್ಲ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನೂರು ಸಾರಿ ಥ್ಯಾಂಕ್ಸ್ ಹೇಳುತ್ತಾ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
O Manase 100th edition Editorial by Ravi Belagere. Popular Kannada Magazine O Manase re launched on Dec.14 at Belagere Books and Coffee shop, Gandhi Bazar, Bangalore.O Manase Kannada magazine editor is Udaya Marakini
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more