ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 15ರಿಂದ ಕರ್ನಾಟಕದಲ್ಲಿ ಎನ್‌ಪಿಆರ್‌ ನೋಂದಣಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 26 : ಕರ್ನಾಟಕದಲ್ಲಿ ಏಪ್ರಿಲ್ 15 ರಿಂದ ಎನ್‌ಪಿಆರ್‌ ನೋಂದಣಿ ಆರಂಭವಾಗಲಿದೆ. ಕೇಂದ್ರ ಸರ್ಕಾರ ಎನ್‌ಪಿಆರ್‌ ಜಾರಿಗೆ ಒಪ್ಪಿಗೆ ನೀಡಿದ್ದು, 3941 ಕೋಟಿ ರೂ.ಗಳನ್ನು ಇದಕ್ಕಾಗಿ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಜಾರಿ ಮಾಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 2020ರ ಏಪ್ರಿಲ್‌ನಿಂದ ಸೆಪ್ಟೆಂಬರ್ ತನಕ ದೇಶಾದ್ಯಂತ ಎನ್‌ಪಿಆರ್ ನೋಂದಣಿ ಪ್ರಕ್ರಿಯೆ ನಡೆಯಲಿದೆ.

ಅಕ್ರಮ ವಲಸಿಗರನ್ನು ಹೊರಹಾಕಲು ರಾಜ್ಯದಲ್ಲೂ ಎನ್‌ಆರ್‌ಸಿ ಜಾರಿ: ಬೊಮ್ಮಾಯಿಅಕ್ರಮ ವಲಸಿಗರನ್ನು ಹೊರಹಾಕಲು ರಾಜ್ಯದಲ್ಲೂ ಎನ್‌ಆರ್‌ಸಿ ಜಾರಿ: ಬೊಮ್ಮಾಯಿ

ಜನಗಣತಿ ಕಾರ್ಯಾಚರಣೆ ನಿರ್ದೇಶಕ ಎಸ್. ಬಿ. ವಿಜಯ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, "ಕರ್ನಾಟಕದಲ್ಲಿ ಏಪ್ರಿಲ್ 15ರಿಂದ ಜನಗಣತಿ ಮತ್ತು ಎನ್‌ಪಿಎಆರ್ ನೋಂದಣಿ ಆರಂಭವಾಗಲಿದೆ" ಎಂದು ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ನರೇಂದ್ರ ಮೋದಿ ಸರಣಿ ಟ್ವೀಟ್ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ನರೇಂದ್ರ ಮೋದಿ ಸರಣಿ ಟ್ವೀಟ್

NPR Registration In Karnataka From April 15

ಜನಗಣತಿ ಮತ್ತು ಎನ್‌ಪಿಆರ್‌ ನೋಂದಣಿ ಬಗ್ಗೆ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ನೋಂದಣಿಗಾಗಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿಯಿಂದ ಜನ ಜಾಗೃತಿ; ವಿವಿಧ ಕಾರ್ಯಕ್ರಮಪೌರತ್ವ ಕಾಯ್ದೆ ಬಗ್ಗೆ ಬಿಜೆಪಿಯಿಂದ ಜನ ಜಾಗೃತಿ; ವಿವಿಧ ಕಾರ್ಯಕ್ರಮ

ಎನ್‌ಪಿಆರ್‌ ಎಂದರೆ ದೇಶದ ಸಾಮಾನ್ಯ ನಿವಾಸಿಗಳ ಪಟ್ಟಿ. 2010ರಲ್ಲಿ ಈ ಕುರಿತು ದತ್ತಾಂಶಗಳನ್ನು ಮನೆ-ಮನೆ ಸಮೀಕ್ಷೆ ಮೂಲಕ ಪರಿಷ್ಕರಣೆ ಮಾಡಲಾಗಿತ್ತು. 2015ರಲ್ಲಿ ಇದನ್ನು ಡಿಜಿಟಲ್ ದಾಖಲೀಕರಣ ಮಾಡುವ ಪ್ರಕ್ರಿಯೆಯೂ ಆಗಿದೆ.

2021ರ ಜನಗಣತಿ ಜೊತೆಗೆ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನ್‌ಪಿಆರ್ ಸಹ ಸಿದ್ಧವಾಗಲಿದೆ. ಆದರೆ, ಅಸ್ಸಾಂನಲ್ಲಿ ಎನ್ಆರ್‌ಸಿ ಪ್ರಕ್ರಿಯೆ ನಡೆಯುವುದರಿಂದ ಅಲ್ಲಿ ಎನ್‌ಪಿಆರ್‌ ಇರುವುದಿಲ್ಲ.

ದೇಶದ ಸಾಮಾನ್ಯ ನಿವಾಸಿಗಳು ಎನ್‌ಪಿಆರ್‌ ಅಡಿ ನೋಂದಣಿಯಾಗುವುದು ಕಡ್ಡಾಯವಾಗಿದೆ. ಗ್ರಾಮ, ಉಪ ಪಟ್ಟಣ, ಜಿಲ್ಲೆ ಹೀಗೆ ಸ್ಥಳೀಯ ಮಟ್ಟದಲ್ಲಿ ತಯಾರಾಗುವ ನಿವಾಸಿಗಳ ನೋಂದಣಿ ಪಟ್ಟಿ ಇದಾಗಿದೆ. 1955ರ ನಾಗರಿಕ ಕಾಯ್ದೆ ಮತ್ತು ಪೌರತ್ವ ಕಾಯ್ದೆ 2003ರ ಅಡಿಯಲ್ಲಿ ಇದು ಬರಲಿದೆ.

ವ್ಯತ್ಯಾಸವೇನು?: ಜನಗಣತಿ ಮತ್ತು ಎನ್‌ಪಿಆರ್‌ ನಡುವೆ ವ್ಯತ್ಯಾಸಗಳಿವೆ. ಜನಗಣತಿಯಲ್ಲಿ ಒಬ್ಬ ಸದಸ್ಯ 29 ಅಂಶಗಳಿಗೆ ಉತ್ತರ ಕೊಡಬೇಕಿದೆ. ಆದರೆ, ಎನ್‌ಪಿಆರ್‌ನಲ್ಲಿ ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ 6 ತಿಂಗಳು ಅಥವ ಅದಕ್ಕಿಂತಲೂ ಹೆಚ್ಚು ಸಮಯದಿಂದ ಇದ್ದಾನೆಯೇ?, ಮುಂದೆ ಆರು ತಿಂಗಳು ಅಥವ ಅದಕ್ಕಿಂತ ಹೆಚ್ಚಿನ ಸಮಯ ಇರಲು ಇಚ್ಚಿಸಿದ್ದಾನೆಯೇ? ಎಂಬ ಮಾಹಿತಿಯನ್ನು ಮಾತ್ರ ಸಂಗ್ರಹ ಮಾಡಲಾಗುತ್ತದೆ.

2010ರಲ್ಲಿ ಎನ್‌ಪಿಆರ್ ನಡೆದಾಗ 15 ಅಂಶಗಳ ಆಧಾರದ ಮೇಲೆ ರಾಷ್ಟ್ರೀಯ ಸಾಮಾನ್ಯ ನಿವಾಸಿ ದತ್ತಾಂಶವನ್ನು ಸಂಗ್ರಹ ಮಾಡಲಾಗಿತ್ತು. ಎನ್‌ಪಿಆರ್ ಸಾಮಾನ್ಯ ನಿವಾಸಿಗಳ ದಾಖಲೆಯಾಗಿದೆ ಹೊರತು ಪೌರತ್ವದ ದಾಖಲೆ ಅಲ್ಲ.

English summary
National Population Register (NPR) registration in Karnataka from April 15, 2020. NPR is to create a comprehensive identity database of every usual resident in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X