ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರೈವಿಂಗ್ ಲೈಸೆನ್ಸ್‌ ಪಡೆಯಲು ಇನ್ನು 90 ದಿನ ಕಾಯಬೇಕು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 22 : ಆನ್‌ಲೈನ್ ಮೂಲಕ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಜನರು ಅರ್ಜಿ ಸಲ್ಲಿಸಿದ್ದರೆ ಇನ್ನು ಮುಂದೆ 90 ದಿನ ಕಾಯಬೇಕಿದೆ. ಮೊದಲು 30 ದಿನಗಳ ಕಾಲ ಕಾಯಬೇಕಾಗಿತ್ತು.

ಸಾರಿಗೆ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದೆ. ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರ ಪಡೆಯಲು ಆನ್‌ಲೈನ್ ಮೂಲಕ ಸ್ಲಾಟ್ ಬುಕ್ ಮಾಡಬಹುದಾಗಿದೆ. ಹೀಗೆ ಬುಕ್ ಮಾಡಿದರೆ 30 ದಿನ ಕಾಯಬೇಕಿತ್ತು.

ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ ಹೆಲ್ಮೆಟ್ ಧರಿಸದಿದ್ದರೆ 3 ತಿಂಗಳ ಕಾಲ ಲೈಸೆನ್ಸ್ ರದ್ದು; ತಕ್ಷಣದಿಂದ ಜಾರಿ

ಕೋವಿಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಹಿಂದಿನ ಕಲಿಕಾ ಮತ್ತು ಚಾಲನಾ ಅನುಜ್ಞಾಪತ್ರದ ಸಾವಿರಾರು ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ವಿಲೇವಾರಿ ಮಾಡಲು, ಅಭ್ಯರ್ಥಿಗಳು ಒಮ್ಮಯೇ ಬರುವುದನ್ನು ತಡೆಯಲು 90 ದಿನಗಳಿಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

12 ಸಾವಿರ ಖಾಸಗಿ ಬಸ್‌ ಸಾರಿಗೆ ಇಲಾಖೆಗೆ ಒಪ್ಪಿಸಿದ ಮಾಲೀಕರು 12 ಸಾವಿರ ಖಾಸಗಿ ಬಸ್‌ ಸಾರಿಗೆ ಇಲಾಖೆಗೆ ಒಪ್ಪಿಸಿದ ಮಾಲೀಕರು

Now People To Wait For 90 Days To Get Driving Lenience

ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಅಧಿಕಾರಿಗಳು ಆನ್‌ಲೈನ್ ಮೂಲಕ ಬುಕ್ ಮಾಡಿದ ಅಭ್ಯರ್ಥಿಗಳಿಗೆ 90 ದಿನಗಳ ಅವಧಿ ಮೀರದಂತೆ ಸೇವೆಯನ್ನು ಒದಗಿಸಬೇಕು ಎಂದು ಸಾರಿಗೆ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಮತ್ತೆ ರಸ್ತೆಗಿಳಿಯಲಿದೆ ಮಲೆನಾಡ ಜೀವನಾಡಿ ಸಹಕಾರ ಸಾರಿಗೆ ಬಸ್ ಮತ್ತೆ ರಸ್ತೆಗಿಳಿಯಲಿದೆ ಮಲೆನಾಡ ಜೀವನಾಡಿ ಸಹಕಾರ ಸಾರಿಗೆ ಬಸ್

Recommended Video

Mohammed Siraj ಬೆಳೆದು ಬಂದ ಹಾದಿ , ಹಾಗು IPLಗೆ ಪ್ರವೇಶ ಹೇಗಿತ್ತು | Oneindia Kannada

ಕೋವಿಡ್ ಸಂದರ್ಭದಲ್ಲಿ ಮೂರು ತಿಂಗಳು ಇಲಾಖೆಗಳ ಕಾರ್ಯ ನಿರ್ವಹಣೆ ಸ್ಥಗಿತವಾಗಿತ್ತು. ಆಗ ಬಾಕಿ ಇದ್ದ ಅರ್ಜಿಗಳನ್ನು ವಿಲೇವಾರಿ ಮಾಡಲು ಇಲಾಖೆ ಪ್ರಯತ್ನ ನಡೆಸುತ್ತಿದೆ. ಆದ್ದರಿಂದ, ಹೊಸ ಅರ್ಜಿ ಸಲ್ಲಿಕೆ ಮಾಡಿದರೆ 90 ದಿನ ಕಾಯಬೇಕಾಗಿದೆ.

English summary
People who booked for driving license though online now wait for 90 days. Transport department raised 30 days waiting time to 90 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X