ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರಸಭೆ ಚುನಾವಣೆಯಲ್ಲೂ ನೋಟಾ ಬಳಕೆಗೆ ಸಂಪುಟದ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಮೇ 28 : ನಗರಸಭೆ ಚುನಾವಣೆಯಲ್ಲಿಯೂ ಜನರು ನೋಟಾ ಮತ ಚಲಾಯಿಸಬಹುದಾಗಿದೆ. ಕರ್ನಾಟಕ ಸರ್ಕಾರ ಈ ಕುರಿತು ಕಾನೂನಿಗೆ ತಿದ್ದುಪಡಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೋಟಾ ಮತ ಚಲಾವಣೆ ಮಾಡುವ ಕುರಿತು ಚರ್ಚೆ ನಡೆಯಿತು. ಈ ಕುರಿತು ಕಾನೂನಿಗೆ ತಿದ್ದುಪಡಿ ತರಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ನೋಟಾ ಬಗ್ಗೆ ತಿಳಿದುಕೊಳ್ಳಿನೋಟಾ ಬಗ್ಗೆ ತಿಳಿದುಕೊಳ್ಳಿ

ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ನೋಟಾ ಮತದಾನ ಮಾಡಲು ಅವಕಾಶವಿಲ್ಲ. ಈಗ ಕರ್ನಾಟಕ ಸರ್ಕಾರ ಈ ಕುರಿತ ಕಾನೂನಿಗೆ ತಿದ್ದುಪಡಿ ತರಲಿದೆ. ಇನ್ನು ಮುಂದೆ ನಗರಸಭೆ ಚುನಾವಣೆಯಲ್ಲಿಯೂ ಜನರು ನೋಟಾ ಮತ ಚಲಾಯಿಸಬಹುದು.

63 ಸ್ಥಳೀಯ ಸಂಸ್ಥೆಗಳ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕ63 ಸ್ಥಳೀಯ ಸಂಸ್ಥೆಗಳ ಚುನಾವಣೆ : ಅಂಕಿ-ಸಂಖ್ಯೆಗಳ ಲೆಕ್ಕ

NOTA

ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ (ನೋಟಾ) ಎಂಬುದು ನೋಟಾದ ವಿಸ್ತ್ರತ ರೂಪವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ದೇಶದಲ್ಲಿ ನೋಟಾ ಬಳಕೆಗೆ ಅವಕಾಶ ನೀಡಲಾಯಿತು. ಬಳಿಕ ವಿಧಾನಸಭೆ ಚುನಾವಣೆಯಲ್ಲಿಯೂ ನೋಟಾ ಬಳಸಲಾಗುತ್ತಿದೆ.

63 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟ63 ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟ

ನೋಟಾ ಜಾರಿಗೊಳಿಸಲು ಅವಕಾಶ ನೀಡಬೇಕು ಎಂದು 2009ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಬಹುತೇಕ ರಾಜಕೀಯ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

English summary
In a cabinet meeting Karnataka govt approved for select None of The Above (NOTA) button in town municipal council election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X