ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿಕೆ ಸುಲಭ: ನೂತನ ಇ-ಕನ್ನಡ ಪೋರ್ಟಲ್ ಲೋಕಾರ್ಪಣೆ

|
Google Oneindia Kannada News

ಬೆಂಗಳೂರು ಮೇ 18: ಕರ್ನಾಟಕದಲ್ಲಿ ನೆಲೆಸಿದ್ದು, ಕನ್ನಡ ಭಾಷೆ ಬರದವರು ಇನ್ನೂ ಮುಂದೆ ರಾಜ್ಯ ಸರಕಾರದ ಇ-ಕನ್ನಡ ಪೋರ್ಟಲ್ ಮೂಲಕ ಸುಲಭವಾಗಿ ಕನ್ನಡ ಕಲಿಯಬಹುದಾಗಿದೆ. e.kannada.gov.in ವೆಬ್ ಸೈಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು. ಈ ವೆಬ್ ಸೈಟ್‌ನಲ್ಲಿ ಕನ್ನಡ ತರಗತಿಗಳು ಪ್ರಿಂಟ್, ಆಡಿಯೊ ಮತ್ತು ವಿಡಿಯೊ ಫಾರ್ಮೆಟ್ ನಲ್ಲಿ ಲಭ್ಯವಿದೆ.

ಈ ತರಗತಿಗಳ ಸಹಾಯದಿಂದ ಪ್ರಾಥಮಿಕ ಹಂತದ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಶುಭಾಶಯ ವಿನಿಮಯ ಸೇರಿದಂತೆ ದಿನಂಪ್ರತಿ ಬಳಸುವ ವಾಕ್ಯಗಳನ್ನು ಕಲಿಯಬಹುದಾಗಿದೆ. ಪ್ರಾಥಮಿಕ ಹಂತದ ಕನ್ನಡ ಪದಗಳು, ವಾಕ್ಯಗಳು ಮತ್ತು ವ್ಯಾಕರಣವನ್ನು ಬಳಸಿ ಕಲಿಕಾ ತರಗತಿಗಳನ್ನು ಸಿದ್ಧಪಡಿಸಲಾಗಿದೆ. ಈ ತರಗತಿಗಳ ಅಂತಿಮ ಹಂತವು ಅಭ್ಯಾಸ ಕ್ರಮವನ್ನು ಒಳಗೊಂಡಿದೆ. ಈ ತರಗತಿಗಳು ಸಂಪೂರ್ಣ ಉಚಿತವಾಗಿದೆ ಹಾಗೂ ಸ್ವಯಂ ಕಲಿಯಬಹುದಾಗಿದೆ.
ಇ-ಕನ್ನಡ ವೆಬ್ ಸೈಟ್ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಜ್ಯದ ಎಲ್ಲಾ ಇಲಾಖೆಗಳ ಆಡಳಿತ ಸಾಫ್ಟ್‌ವೇರ್ ನಲ್ಲಿ ಕನ್ನಡವನ್ನು ಬೇಸಿಕ್ ಟೆಂಪ್ಲೇಟ್ ಆಗಿ ಬಳಸುವಂತೆ ಆದೇಶ ಹೊರಡಿಸಲಾಗುವುದು," ಎಂದು ತಿಳಿಸಿದರು.

"ಪ್ರತಿಯೊಬ್ಬ ಸಚಿವರು ಈ ನೂತನ ಕ್ರಮವನ್ನು ಅಳವಡಿಸಿಕೊಳ್ಳಬೇಕು. ಎಲ್ಲ ಸಚಿವರ ಇ-ಮೇಲ್‌ ವಿಳಾಸ ಕನ್ನಡದಲ್ಲಿ ಲಭ್ಯವಿರಲಿದೆ. ಅಲ್ಲದೇ ಈ ಪೋಟರ್ಲ್ ಆಡಳಿತದಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ,'' ಎಂದು ಇದೇ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಹೇಳಿದರು. ನೂತನ ಕನ್ನಡ ಇ-ಪೋರ್ಟಲ್ ನಲ್ಲಿ 59 ಶಬ್ದಕೋಶಗಳನ್ನು ಒಳಗೊಂಡ ಡಿಜಿಟಲ್ 'ಪದ ಕಣಜ' ಹೊಂದಿದ್ದು, ಇಲ್ಲಿ 6 ಲಕ್ಷ ಪದಗಳು, ಅದರ ಅರ್ಥಗಳು ಲಭ್ಯವಿದೆ.

Now learn Kannada online on government website

"ಕೆಲವು ಬಾರಿ ಅಧಿಕಾರಿಗಳು ನಿರ್ದಿಷ್ಟ ಸಂದರ್ಭದಲ್ಲಿ ತಪ್ಪಾದ ಪದಗಳನ್ನು ಬಳಕೆ ಮಾಡುತ್ತಾರೆ. ಪದ ಕಣಜವು ಸರಿಯಾದ ಪದ ಬಳಕೆಗೆ ಸಹಕಾರಿಯಾಗಲಿದೆ. ಅಲ್ಲದೇ ಪೋಟರ್ಲ್ ನಲ್ಲಿ 'ಡಿಜಿಟಲ್‌ ಜಗಲಿ' ಎಂಬ ಉಪಕ್ರಮ ಲಭ್ಯವಿದ್ದು, ಇಲ್ಲಿ ಸಾರ್ವಜನಿಕರು ಸಂವಾದ ನಡೆಸಬಹುದು ಹಾಗೂ ಸರಕಾರದ ಯೋಜನೆಗಳ ಬಗ್ಗೆ ಸಲಹೆ, ಸೂಚನೆಗಳನ್ನು ನೀಡಬಹುದು,'' ಎಂದು ಇ-ಆಡಳಿತ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

Now learn Kannada online on government website

Recommended Video

ಬೆಂಗಳೂರಲ್ಲಿ‌ ಮಹಾಮಳೆ:ಮನೆಗಳಿಗೆ ನುಗ್ಗಿದ‌ ನೀರು,ಜನಜೀವನ ಅಸ್ತವ್ಯಸ್ತ | Oneindia Kannada

English summary
Karnataka government has launched new website inorder to help non-kannadigas to learn kannada,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X