ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹ ಮಂಡಳಿ ಮನೆ ಪಡೆಯಲು ಇದ್ದ ನಿಯಮಾವಳಿ ಸಡಿಲಿಕೆ

By Gururaj
|
Google Oneindia Kannada News

ಬೆಂಗಳೂರು, ಜೂನ್ 12 : ಕರ್ನಾಟಕ ಸರ್ಕಾರ ಗೃಹ ಮಂಡಳಿ ಮನೆಗಳನ್ನು ಪಡೆಯಲು ಇದ್ದ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ. 50 ಸಾವಿರ ರೂ. ಠೇವಣಿ ಹಣವನ್ನು ಇಟ್ಟು ಜನರು ಮನೆಗಳನ್ನು ಖರೀದಿ ಮಾಡಬಹುದಾಗಿದೆ.

ವಸತಿ ಸಚಿವ ಯು.ಟಿ.ಖಾದರ್ ಮಂಗಳವಾರ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಸಚಿವರು, 'ಗೃಹ ಮಂಡಳಿ ಫ್ಲಾಟ್‌ಗಳನ್ನು ಜನರು ಖರೀದಿ ಮಾಡುವುದಿಲ್ಲ ಎಂಬ ಅಪವಾದವಿದೆ. ಇದನ್ನು ತೊಡೆದು ಹಾಕಲು ನಿಯಮಾವಳಿಗಳನ್ನು ಸಡಿಲಿಸಲಾಗಿದೆ' ಎಂದರು.

'ವಸತಿ ಯೋಜನೆ ಕಂತು ಸಹಕಾರ ಸಂಘದಿಂದಲೇ ಭರಿಸಲು ಚಿಂತನೆ' 'ವಸತಿ ಯೋಜನೆ ಕಂತು ಸಹಕಾರ ಸಂಘದಿಂದಲೇ ಭರಿಸಲು ಚಿಂತನೆ'

'5 ವರ್ಷ ಬೆಂಗಳೂರಿನಲ್ಲಿ ವಾಸವಾಗಿರಬೇಕು. 90 ಸಾವಿರ ಠೇವಣಿ ಇಡಬೇಕು. ಆದಾಯ ತೆರಿಗೆ ಮಿತಿಗೆ ಒಳಪಟ್ಟಿರಬೇಕು ಮುಂತಾದ ನಿಯಮಾವಳಿಗಳನ್ನು ಸಡಿಲಿಸಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು.

Now its easy to buy KHB house

'50 ಸಾವಿರ ರೂ. ಠೇವಣಿ ಇಟ್ಟು ಸ್ಥಳದಲ್ಲಿಯೇ ಗೃಹ ಮಂಡಳಿಯ ಮನೆಗಳನ್ನು ಪಡೆಯಬಹುದಾಗಿದೆ. ಸುಲಭವಾಗಿ ಜನರಿಗೆ ಮನೆಗಳು ಸಿಗುವಂತಾಗಲು ಹಲವು ಬದಲಾವಣೆ ಮಾಡಲಾಗಿದೆ' ಎಂದು ಸಚಿವರು ವಿವರಣೆ ನೀಡಿದರು.

'ಗೃಹ ಮಂಡಳಿಯ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಲಾಗುತ್ತದೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ' ಎಂದು ಸಚಿವರು ಹೇಳಿದರು.

English summary
Karnataka Government changed guidelines of buying Karnataka Housing Board (KHB) house. Now it's easy to by KHB house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X