ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಜೇಬಿನಲ್ಲೊಂದು ಬಾಂಬ್ ಇದೆ; ರಮೇಶ್ ಜಾರಕಿಹೊಳಿ

|
Google Oneindia Kannada News

ಬೆಂಗಳೂರು, ಮಾರ್ಚ್ 25; "ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ಯ ನಡೆದಿರುವುದು ಈಗ ಖಚಿತವಾಗಿದೆ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

Recommended Video

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೊಬೈಲ್‌ ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ಎಸ್‌ಐಟಿ | Oneindia Kannada

ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ದೂರು ಕೊಟ್ಟ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆ ಆಗುತ್ತದೆ. ಇದು ಎಷ್ಟು ದೊಡ್ಡ ಷಡ್ಯಂತ್ಯ ಎಂಬುದು ಈಗ ತಿಳಿಯುತ್ತಿದೆ" ಎಂದರು.

ಸಿಡಿ ಪ್ರಕರಣ; ಸಂತ್ರಸ್ತ ಯುವತಿ 2ನೇ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ ಸಿಡಿ ಪ್ರಕರಣ; ಸಂತ್ರಸ್ತ ಯುವತಿ 2ನೇ ವಿಡಿಯೋ ಮೂಲಕ ಮತ್ತೆ ಪ್ರತ್ಯಕ್ಷ

"ಇನ್ನೂ 10 ಸಿಡಿ ಬರಲಿ ಎದುರಿಸಲು ನಾನು ಸಿದ್ಧವಾಗಿದ್ದೇನೆ. ನನ್ನ ವಿರುದ್ಧ ಷಡ್ಯಂತ್ರ ನಡೆದಿರುವುದು ಸ್ಪಷ್ಟವಾಗಿದೆ. ನಾನು ಆರೋಪ ಮುಕ್ತನಾಗುವ ವಿಶ್ವಾಸವಿದೆ. ದೇವರ ಆಶೀರ್ವಾದದಿಂದ ನಾನು ಇದರಿಂದ ಮುಕ್ತನಾಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಎಂದರೆ ಸಿಡಿ ತಯಾರು ಮಾಡುವ ಗ್ಯಾಂಗ್; ಎಂಪಿಆರ್‌ ಕಾಂಗ್ರೆಸ್ ಎಂದರೆ ಸಿಡಿ ತಯಾರು ಮಾಡುವ ಗ್ಯಾಂಗ್; ಎಂಪಿಆರ್‌

Now Its Clear Conspiracy Against Me Says Ramesh Jarkiholi

"ನನ್ನ ಜೇಬಿನಲ್ಲೊಂದು ಬಾಂಬ್ ಇದೆ. ಆ ಬಾಂಬ್ ಬಿಟ್ಟರೆ ನಿವೇ ಶಾಕ್ ಆಗುತ್ತೀರಿ. ಶಾಕ್ ಆಗುವಂತಹ ಅನೇಕ ವಿಚಾರಗಳು ನನ್ನ ಬಳಿ ಇವೆ. ತಪ್ಪು ಮಾಡಿದವರನ್ನು ಜೈಲಿನಲ್ಲಿ ಕೂರಿಸದೇ ಬಿಡುವುದಿಲ್ಲ" ಎಂದು ತಿಳಿಸಿದರು.

ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಬೇಗ ಮುಗಿಯಲಿ: ಬಾಲಚಂದ್ರ ಜಾರಕಿ ಹೋಳಿ ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಬೇಗ ಮುಗಿಯಲಿ: ಬಾಲಚಂದ್ರ ಜಾರಕಿ ಹೋಳಿ

ಗುರುವಾರ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. 2ನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾಳೆ. "ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದು, ತಂದೆ-ತಾಯಿಯ ರಕ್ಷಣೆ ನನಗೆ ಮುಖ್ಯ" ಎಂದು ಹೇಳಿದ್ದಾಳೆ.

2ನೇ ವಿಡಿಯೋದಲ್ಲಿ ಎಸ್‌ಐಟಿ ವಿರುದ್ಧ ಯುವತಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು ಎಂದು ವಿಪಕ್ಷ ನಾಯಕರು, ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ. ಈ ವಿಡಿಯೋ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ರಮೇಶ್ ಜಾರಕಿಹೊಳಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

English summary
CD case big is the big conspiracy against me said former minister Ramesh Jarkiholi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X