ಎಪಿಎಂಸಿಯಲ್ಲಿ 130 ರೂ.ಗಳಿಗೆ ತೊಗರಿ ಬೇಳೆ ಲಭ್ಯ

Posted By:
Subscribe to Oneindia Kannada

ಬೆಂಗಳೂರು, ಜುಲೈ 07 : ಗಗನಮುಖಿಯಾಗಿರುವ ತೊಗರಿ ಬೇಳೆ ಬೆಲೆ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಜುಲೈ 8ರಿಂದ ಎಪಿಎಂಸಿಗಳಲ್ಲಿ 130 ರೂ.ಗಳಿಗೆ ತೊಗರಿ ಬೇಳೆ ದೊರೆಯಲಿದೆ. ಮೂರು ತಿಂಗಳ ತನಕ ಇದೇ ಬೆಲೆಯಲ್ಲಿ ಬೇಳೆ ಗ್ರಾಹಕರಿಗೆ ಲಭ್ಯವಾಗಲಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಆಹಾರ ಧಾನ್ಯಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದರಿಂದ ಬೆಲೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ' ಎಂದು ಅವರು ಹೇಳಿದ್ದಾರೆ. [ಗಮನಿಸಿ, 120 ರು.ಗಿಂತ ಹೆಚ್ಚಿನ ದರಕ್ಕೆ ಬೇಳೆಕಾಳು ಮಾರುವಂತಿಲ್ಲ]

toor dal

ರಾಜ್ಯದ 144 ಎಪಿಎಂಸಿಗಳಲ್ಲಿ ಗ್ರೇಡ್ - 1 ಬೇಳೆ ಪ್ರತಿ ಕೆಜಿಗೆ ರೂ. 145 ಮತ್ತು ಗ್ರೇಡ್ -2 ಬೇಳೆ ಪ್ರತಿ ಕೆಜಿಗೆ ರೂ. 130 ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ದರದಲ್ಲೇ ಮುಂದಿನ ಮೂರು ತಿಂಗಳ ಕಾಲ ತೊಗರಿ ಬೇಳೆ ಮಾರಾಟ ಮಾಡುತ್ತದೆ. ಜುಲೈ 8ರಿಂದ ಎಪಿಎಂಸಿಗಳಲ್ಲಿ ಈ ಬೆಲೆಯಲ್ಲಿ ಬೇಳೆ ಖರೀದಿ ಮಾಡಬಹುದು. [ಬೇಳೆಕಾಳು ಖರೀದಿಗೆ ಟೆಂಡರ್ ಆಹ್ವಾನಿಸಿದ ರಾಜ್ಯ ಸರ್ಕಾರ]

ಮೋರ್ ಮೇಲೆ ದಾಳಿ ನಡೆದಿತ್ತು : ಕಳೆದ ವಾರ ಬೆಂಗಳೂರು ನಗರದಲ್ಲಿನ ಹಲವು ಮೋರ್ ಮಳಿಗೆಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿತ್ತು. 300 ಮತ್ತು 315 ರೂ.ಗಳಿಗೆ ಬೇಳೆಯನ್ನು ಮಾರಾಟ ಮಾಡುತ್ತಿರುವುದು ಈ ಸಮಯದಲ್ಲಿ ಬೆಳಕಿಗೆ ಬಂದಿತ್ತು. ಇಂತಹ ಮಳಿಗೆಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. [ಅಬ್ಬಾ...ದ್ವಿಶತಕದ ಗಡಿಬಿಟ್ಟು ಕೆಳಗಿಳಿದ ಬೇಳೆ ಕಾಳು]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In view of the skyrocketing prices of Toor dal Karnataka government will supply Toor dal at Rs 130 per Kg at agricultural produce market committee (APMC). Toor dal available in APMC from July 8, 2016.
Please Wait while comments are loading...