ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳದ ಸುದ್ದಿ ಬೇಕೆ? ಫೇಸ್‌ಬುಕ್, ಬ್ಲಾಗ್ ನೋಡಿ

|
Google Oneindia Kannada News

ಕೊಪ್ಪಳ, ಜೂ. 18 : ಕೊಪ್ಪಳ ಜಿಲ್ಲಾಡಳಿತ ಆನ್ ಲೈನ್ ಮೂಲಕ ವಿವಿಧ ಸಭೆ, ಸಮಾರಂಭಗಳು, ಇಲಾಖೆಯ ಪ್ರಕಟಣೆಗಳು, ಸುದ್ದಿಗಳನ್ನು ನೀಡಲು ಮುಂದಾಗಿದೆ. ಕೊಪ್ಪಳ ವಾರ್ತಾ ಇಲಾಖೆಯ ಫೇಸ್‌ ಬುಕ್ ಪುಟ ಹಾಗೂ ಬ್ಲಾಗ್ ಮೂಲಕ ಸಾರ್ವಜನಿಕರಿಗೂ ಪ್ರತಿಯೊಂದು ಮಾಹಿತಿಯನ್ನು ನೀಡಲಾಗುತ್ತದೆ.

ಇತ್ತೀಚೆಗೆ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್, ಬ್ಲಾಗ್ ಗಳನ್ನು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಕಂಪ್ಯೂಟರ್, ಮೊಬೈಲ್ ಮೂಲಕ ಮಾಹಿತಿಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ಕೊಪ್ಪಳ ವಾರ್ತಾ ಇಲಾಖೆ ಜನರಿಗೆ ಮಾಹಿತಿಯನ್ನು ಈ ವ್ಯವಸ್ಥೆ ಮೂಲಕ ನೀಡಲು ಮುಂದಾಗಿದೆ.

Koppal

ಕೊಪ್ಪಳ ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದ್ದ ಸುದ್ದಿಗಳು, ಇದುವರೆಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಇವು ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಆದ್ದರಿಂದ ಫೇಸ್ ಬುಕ್ ಮತ್ತು ಬ್ಲಾಗ್ ಗಳ ಮೂಲಕ ಮಾಹಿತಿ ನೀಡಲು ನಿರ್ಧರಿಸಲಾಗಿದೆ. [ಕೊಪ್ಪಳ ವಾರ್ತೆ ಫೇಸ್ ಬುಕ್ ಪುಟ]

ಇದೀಗ ಕೊಪ್ಪಳ ವಾರ್ತಾ ಇಲಾಖೆಯು ವಾರ್ತೆ ಕೊಪ್ಪಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದಿದೆ. ಹಾಗೂ ಬ್ಲಾಗ್ ಅನ್ನು ಆರಂಭಿಸಿದೆ. ಫೇಸ್ ಬುಕ್ ಖಾತೆ ಪ್ರಾರಂಭವಾದ ಕೇವಲ ಒಂದು ವಾರದಲ್ಲಿಯೇ ಸುಮಾರು 350ಕ್ಕೂ ಹೆಚ್ಚು ಜನರು ಈ ಖಾತೆಗೆ ಸೇರ್ಪಡೆಗೊಂಡಿದ್ದಾರೆ. [ವಾರ್ತಾ ಇಲಾಖೆ ಮಾಹಿತಿ ಸಂಸ್ಥೆಯಾಗಬೇಕು - ಶಾಮ್‌]

ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಲಾಗುವ ಸುದ್ದಿಗಳನ್ನು ಯೂನಿಕೋಡ್‌ನಲ್ಲಿ ಫೇಸ್ ಬುಕ್ ಮತ್ತು ಬ್ಲಾಗ್ ನಲ್ಲಿ ಅಪ್‌ಲೋಡ್ ಮಾಡುತ್ತಿರುವುದರಿಂದ, ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೂ ಇವುಗಳನ್ನು ಓದಬಹುದಾಗಿದೆ. ಅಲ್ಲದೆ ಸುದ್ದಿ ಮತ್ತು ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ವಾರ್ತಾ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪ್ರಕಟಣೆಗಳು, ನೇಮಕಾತಿಗಳು, ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಆಹ್ವಾನ, ವಸತಿ ಯೋಜನೆಗಳು, ಹಾಸ್ಟೆಲ್‌ ಗಳಿಗೆ ಅರ್ಜಿ ಆಹ್ವಾನ, ವಿವಿಧ ಪ್ರಮುಖ ಸಭೆಗಳಿಗೆ ಸಂಬಂಧಿಸಿದ ಸುದ್ದಿಗಳು, ಸಚಿವರು, ಪ್ರಮುಖ ಗಣ್ಯರ ಪ್ರವಾಸದ ಮಾಹಿತಿ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತದೆ.

English summary
The Koppal district information office now on Facebook and Blog to share district news. We do hope the other districts ( 31) in Karnataka join the band wagon- Kannada news Online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X