ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯುವುದು ಮತ್ತಷ್ಟು ಸುಲಭ

|
Google Oneindia Kannada News

ಬೆಂಗಳೂರು, ಮೇ 14 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೆ, ಸಾರಿಗೆ ಸಂಚಾರ ಆರಂಭವಾಗದ ಕಾರಣ ಅಂತರ ಜಿಲ್ಲಾ ಸಂಚಾರ ನಡೆಸುವುದು ಅಷ್ಟು ಸುಲಭವಾಗಿಲ್ಲ. ಅಲ್ಲದೇ ಸಂಚಾರಕ್ಕೆ ಪಾಸು ಪಡೆಯುವುದು ಕಡ್ಡಾಯವಾಗಿದೆ.

ರಾಜ್ಯದ ವಿವಿಧ ನಗರದಲ್ಲಿ ಸಿಲುಕಿರುವ ಜನರು ಅಂತರ ಜಿಲ್ಲಾ ಸಂಚಾರ ಮಾಡಲು ಪಾಸುಗಳನ್ನು ಪಡೆಯಬೇಕು. ಕರ್ನಾಟಕ ಪೊಲೀಸ್ ಇಲಾಖೆ ಇದಕ್ಕಾಗಿ kspclearpass ನೀಡುತ್ತಿದೆ. ಪಾಸು ಇಲ್ಲದೇ ಸಂಚಾರ ನಡೆಸಿದರೆ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಹಾಕಲಾಗುತ್ತದೆ.

ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ

ಪೊಲೀಸ್ ಇಲಾಖೆ ವೆಬ್ ಸೈಟ್ ಮೂಲಕ ಮಾತ್ರ ಅಂತರ ಜಿಲ್ಲಾ ಸಂಚಾರದ ಪಾಸು ಪಡೆಯಬೇಕಿತ್ತು. ಕರ್ನಾಟಕ ಸರ್ಕಾರ ಈಗ ಪಾಸು ಪಡೆಯುವುದನ್ನು ಮತ್ತಷ್ಟು ಸುಲಭವಾಗಿ ಮಾಡಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿಯೂ ಪಾಸುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಹೇಗೆ? ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಹೇಗೆ?

ಸೇವಾಸಿಂಧು ಪೋರ್ಟಲ್‌ನಲ್ಲಿ ಕೋವಿಡ್ - 19 ಕರ್ನಾಟಕದ ಇತರ ಜಿಲ್ಲೆಗಳಿಗೆ ಪ್ರಯಾಣಿಸಲು ಇಲ್ಲಿ ಅರ್ಜಿ ಸಲ್ಲಿಸಿ ಎಂಬ ವಿಭಾಗವಿದೆ. ಅಲ್ಲಿ ಕ್ಲಿಕ್ ಮಾಡಿ ವಿವರ ಭರ್ತಿ ಮಾಡಿದರೆ ಮೊಬೈಲ್‌ಗೆ ಪಾಸು ಬರುತ್ತದೆ. ವೆಬ್‌ ಸೈಟ್‌ ಮೂಲಕವೂ ಅರ್ಜಿ ಸಲ್ಲಿಸಬಹುದು.

ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸು; ಪೊಲೀಸರ ಮಹತ್ವದ ಆದೇಶ ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸು; ಪೊಲೀಸರ ಮಹತ್ವದ ಆದೇಶ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

ಸೇವಾಸಿಂಧು ಪೋರ್ಟಲ್‌ನಲ್ಲಿ ಮೊದಲು ನೀವು ಹೆಸರು, ಲಿಂಗ, ವಯಸ್ಸು ಮೊಬೈಲ್ ನಂಬರ್, ಆಧಾರ್ ಸಂಖ್ಯೆ, ಪ್ರಯಾಣಕ್ಕೆ ಕಾರಣ ಮುಂತಾದ ವಿವರಗಳನ್ನು ಭರ್ತಿ ಮಾಡಬೇಕು. ಇದು ಪ್ರಯಾಣಿಕರ ವಿವರಗಳಾಗಿವೆ. ನೀವು ವಿದ್ಯಾರ್ಥಿಯೋ, ಕೆಲಸದ ನಿಮಿತ್ತ ಹೋಗುತ್ತಿದ್ದಿರೋ ಎಂಬ ಮಾಹಿತಿಯನ್ನೆಲ್ಲಾ ತುಂಬಬೇಕು.

ವರ್ತಮಾನ ವಿಳಾಸದ ವಿವರಗಳು

ವರ್ತಮಾನ ವಿಳಾಸದ ವಿವರಗಳು

ವರ್ತಮಾನ ವಿಳಾಸದಲ್ಲಿ ಜನರು ಪ್ರಸ್ತುತ ಇರುವ ಜಿಲ್ಲೆ, ತಾಲೂಕು, ದೇಶ, ರಾಜ್ಯ, ಪೋಸ್ಟಲ್ ಕೋಡ್ ಮುಂತಾದ ವಿವರಗಳನ್ನು ದಾಖಲು ಮಾಡಬೇಕು. ಮುಂದಿನ ಭಾಗದಲ್ಲಿ ತಲುಪಬೇಕಾದ ಸ್ಥಳ ಜಿಲ್ಲೆ, ತಾಲೂಕು, ಪಿನ್ ಕೋಡ್ ವಿಳಾಸವನ್ನು ನಮೂದು ಮಾಡಬೇಕು.

ಇತರ ವಿವರಗಳು

ಇತರ ವಿವರಗಳು

ಇತರ ವಿವರಗಳಲ್ಲಿ ಸ್ವಂತ ಅಥವ ಬಾಡಿಗೆ ವಾಹನ, ವಾಹನದ ಪ್ರಕಾರ, ವಾಹನ ಸಂಖ್ಯೆ, ಪ್ರಯಾಣದ ದಿನಾಂಕ, ಗುರುತಿನ ಚೀಟಿ ವಿವರಗಳನ್ನು ಭರ್ತಿ ಮಾಡಬೇಕು. ಬಸ್, ರೈಲು, ವಿಮಾನ ವ್ಯವಸ್ಥೆ ಇಲ್ಲದ ಕಾರಣ ಸ್ವಂತ ಅಥವ ಬಾಡಿಗೆ ವಾಹನದಲ್ಲಿ ಸಂಚಾರ ನಡೆಸಬೇಕಿದೆ.

ಕ್ವಾರಂಟೈನ್ ವಿವರಗಳು

ಕ್ವಾರಂಟೈನ್ ವಿವರಗಳು

ಪಾಸು ಪಡೆಯಲು ಬಯಸುವ ಜನರು ಕೊನೆಯ ಹಂತದಲ್ಲಿ ನೀವು ಅಥವ ನಿಮ್ಮ ಯಾವುದೇ ಸಹ ಪ್ರಯಾಣಿಕರಲ್ಲಿ ಶೀತ/ಕೆಮ್ಮು ಅಥವ ಜ್ವರ ಸಂಬಂಧಿತ ಲಕ್ಷಣಗಳಿವೆಯೇ ಎಂಬುದನ್ನು ಭರ್ತಿ ಮಾಡಬೇಕು.

ಇತ್ತೀಚಿನ ದಿನಗಳಲ್ಲಿಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರಾ? ಎಂಬುದನ್ನು ನಮೂದಿಸ ಬೇಕು. ಇದಕ್ಕೆ ಹೌದು ಅಥವ ಇಲ್ಲ ಎಂಬ ಎರಡು ಆಯ್ಕೆಗಳಿವೆ.

ಎಲ್ಲಾ ವಿವರ ಭರ್ತಿ ಮಾಡಿದ ಒಂದು ದಿನದಲ್ಲಿ ನಮ್ಮ ಮೊಬೈಲ್‌ಗೆ ಪಾಸು ಬರುತ್ತದೆ.

English summary
Now Karnataka government issuing pass for the inter-district movement though Seva Sindhu portal. Here are steps to get pass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X