ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕ ಶೇ.8ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು

By Nayana
|
Google Oneindia Kannada News

ಬೆಂಗಳೂರು, ಜೂನ್ 12: ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್‌ಗಳಿಗೆ ಶುಲ್ಕ ಏರಿಕೆಯಾದ ಬೆನ್ನಲ್ಲೇ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲೂ ಕೂಡ ಶೇ.8ರಷ್ಟು ಹೆಚ್ಚಳವಾಗಿದೆ.

ರಾಜ್ಯ ಸರ್ಕಾರ ನೇಮಕ ಮಾಡಿದ ಜಸ್ಟೀಸ್ ಶೈಲೇಂದ್ರಕುಮಾರ್ ನೇತೃತ್ವದ ಶುಲ್ಕ ಸಲಹಾ ಸಮಿತಿ ಶೇ.8ರಷ್ಟು ಶುಲ್ಕ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಂಡಿದೆ. ಈ ಕುರಿತಂತೆ ಅಧಿಕೃತ ಸೂಚನೆ ಹೊರಬೀಳುವುದು ಮಾತ್ರ ಬಾಕಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.8ರಷ್ಟು ಶುಲ್ಕ ಹೆಚ್ಚಳವಾಗಲಿದ್ದು, ಕಳೆದ 45,900ರಿಂದ 50 ಸಾವಿರದವರೆಗೆ ಶುಲ್ಕವನ್ನು ಖಾಸಗಿ ಜೆನರಿಕ್ ಶಿಕ್ಷಣ ಸಂಸ್ಥೆಗಳಿಗೆ ನಿಗದಿಪಡಿಸಲಾಗಿತ್ತು.

ಬಿಇ ಶುಲ್ಕ ಶೇ.50ರಷ್ಟು ಏರಿಕೆಗೆ ಖಾಸಗಿ ಕಾಲೇಜುಗಳ ಡಿಮ್ಯಾಂಡ್ಬಿಇ ಶುಲ್ಕ ಶೇ.50ರಷ್ಟು ಏರಿಕೆಗೆ ಖಾಸಗಿ ಕಾಲೇಜುಗಳ ಡಿಮ್ಯಾಂಡ್

ಕಾಮೆಡ್‌ ಕೆ ನ ಕೌನ್ಸೆಲಿಂಗ್ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ 1.2ಲಕ್ಷದಿಂದ 1.7 ಲಕ್ಷ ರೂಗಳವರೆಗೆ ಕಳೆದ ವರ್ಷ ಶುಲ್ಕ ನಿಗದಿಮಾಡಲಾಗಿತ್ತು.ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಿರುವ ಶುಲ್ಕದ ಮೇಲೆ ಶೇ.12ರಷ್ಟು ಹೆಚ್ಚಳವನ್ನು ಮಾಡಬಹುದಾಗಿದೆ.

Now, fee hike in pvt engg colleges too capped at 8 percent

ಮೂಲಗಳ ಪ್ರಕಾರ ಖಾಸಗಿ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಶೇ.50ರಿಂದ ಶೇ.400ರವರೆಗೆ ಶುಲ್ಕ ಹೆಚ್ಚಳ ಮಾಡುವಂತೆ 2018-19ನೇ ಸಾಲಿಗೆ ಬೇಡಿಕೆಯನ್ನು ಸಲ್ಲಿಸಿದ್ದವು ಎನ್ನಲಾಗಿದೆ.

ಆದರೆ ಶೇ.50ರಿಂದ ಶೇ.40 ಶುಲ್ಕ ಹೆಚ್ಚಳದ ಬದಲಾಗಿ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿಕೇವಲ ಶೇ.8ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಶುಲ್ಕ ಹೆಚ್ಚಳದ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಯುನೈಟೆಡ್ ಪ್ರೈವೇಟ್‌ ಎಂಜಿನಿಯರಿಂಗ್ ಕಾಲೇಜಸ್ ಅಸೋಸಿಯೇಷನ್ ಪ್ರತಿನಿಧಿಗಳು ರಾಜ್ಯ ಸರ್ಕಾರ ನೇಮಕ ಮಾಡಿರುವ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ನೇತೃತ್ವದ ಸಮಿತಿಯ ಹೆಚ್ಚಳ ಶಿಫಾರಸ್ಸು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಎಂದಿದ್ದರಾದರೂ ಈ ಕುರಿತಂತೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

English summary
After medical and dental courses, the Karnataka Fee Regulatory Committee has capped the hike in engineering fees too. Private engineering colleges in the state are allowed to increase fees by a maximum of eight per cent over the previous year’s amount, the panel headed by Justice D V Shylendra Kumar said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X