ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತಂಕ ಬೇಡ: ಶತಮಾನದ ಹಿಂದೆಯೂ ಬೆಂಗಳೂರಿನಲ್ಲಿ ಜಾರಿಯಾಗಿತ್ತು ಲಾಕ್‌ಡೌನ್!

|
Google Oneindia Kannada News

ಬೆಂಗಳೂರು, ಜು. 06: ಕೊರೊನ ವೈರಸ್ ಅಥವಾ ಕೋವಿಡ್-19 ಸೃಷ್ಟಿಸಿರುವ ಆತಂಕ ಒಂದೆರಡಲ್ಲ. ಕೊರೊನಾ ವೈರಸ್‌ನಿಂದ ಜೀವನ ರೀತಿಯೇ ಬದಲಾಗಿದೆ. ಹಿಂದೆ ಕೇಳದೇ ಇದ್ದ ಹಲವು ಶಬ್ದಗಳು ಈಗ ನಿತ್ಯ ಪಾಲಿಸಬೇಕಾದ ಕ್ರಮಗಳಾಗಿವೆ. ಕ್ವಾರಂಟೈನ್, ಸಾಮಾಜಿಕ ಅಂತರ, ಕಂಟೇನ್ಮೆಂಟ್ ಝೋನ್, ಲಾಕ್‌ಡೌನ್‌, ಸೀಲ್‌ಡೌನ್ ಎಂಬ ಶಬ್ದಗಳು ಈಗ ಎಲ್ಲರಿಗೂ ತೀರಾ ಪರಿಚಿತ. ಕೆಲವರಿಗಂತೂ ಈ ಶಬ್ದಗಳು ಸಾವಿನ ಭಯವನ್ನು ತರುವ ಶಬ್ದಗಳಾಗಿವೆ. ಇನ್ನೇನೂ ಜೀವನ ಮುಗಿಯಿತು ಎಂಬಂತಹ ಮಾನಸಿಕ ಯಾತನೆಯನ್ನು ಅಂಥವರು ಅನುಭವಿಸುತ್ತಿದ್ದಾರೆ.

Recommended Video

ಚಿತ್ರದುರ್ಗ ರೈತನ ಬದುಕನ್ನು ನಾಶ ಮಾಡಿದ ಕೊರೊನ | Chitradurga | Oneindia Kannada

ಆದರೆ ಇವೇನೂ ಹೊಸ ಶಬ್ದಗಳಲ್ಲ. ಇದಕ್ಕಿಂತ ಭೀಕರವಾದ ಪರಿಸ್ಥಿತಿಯನ್ನು ನಮ್ಮ ರಾಜ್ಯ ಅದರಲ್ಲೂ ಬೆಂಗಳೂರಿನ ಜನರು ನೂರು ವರ್ಷಗಳ ಹಿಂದೆಯೆ ಜಯಿಸಿದ್ದಾರೆ. ಜೊತೆಗೆ ಆಗಲೂ ಕೂಡ ಸಿನಿಮಾ, ನಾಟಕ ಪ್ರದರ್ಶನವನ್ನು ನಿಷೇಧ ಮಾಡಲಾಗಿತ್ತು. ಆಗಲೇ ಸಂಪೂರ್ಣ ಲಾಕ್‌ಡೌನ್‌ ಬೆಂಗಳೂರಿನಲ್ಲಿ ಜಾರಿಯಲ್ಲಿತ್ತು. ಹೀಗಾಗಿ ಈಗಿನ ಪರಿಸ್ಥಿತಿಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂಬುದಕ್ಕೆ ಆಗ ಜಾರಿಯಾಗಿದ್ದ ಆ ಒಂದು ನೋಟಿಸ್ ಸಾಕು. ಹಿಂದಿನ ಇನ್‌ಫ್ಲೂಯಂಜಾ ಲಕ್ಷಣಗಳೇ ಈಗಿನ ಕೊರೊನಾ ವೈರಸ್‌ ಸೋಂಕಿನಲ್ಲಿ ಕಾಣುತ್ತಿವೆ ಎಂಬುದನ್ನೂ ಗಮನಿಸಬಹುದು.

ಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಮತ್ತೆ ಬದಲಾವಣೆಕರ್ನಾಟಕದಲ್ಲಿ ಹೋಂ ಕ್ವಾರಂಟೈನ್ ನಿಯಮ ಮತ್ತೆ ಬದಲಾವಣೆ

ಬೆಂಗಳೂರಿನಲ್ಲಿ ಇನ್‌ಫ್ಲೂಯಂಜಾ

ಬೆಂಗಳೂರಿನಲ್ಲಿ ಇನ್‌ಫ್ಲೂಯಂಜಾ

ಹಿಂದೆ 1918ರಲ್ಲಿ ಇನ್‌ಫ್ಲೂಯಂಜಾ ಸೋಂಕು ಇಡೀ ಜಗತ್ತನ್ನು ಕಾಡಿತ್ತು. ಅದಾಗಿ 10 ವರ್ಷಗಳ ಬಳಿಕವೂ ಮತ್ತೊಮ್ಮೆ ಅದೇ ರೀತೀಯ ಸೋಂಕು ಬೆಂಗಳೂರಿನಲ್ಲಿ ಕಾಣಸಿಕೊಂಡಿತ್ತು. ಆಗ ಮತ್ತೆ ಸಾಮಾಜಿಕ ಅಂತರ, ಮುಂತಾದ ಕ್ರಮಗಳಿಂದ ಆ ರೋಗವನ್ನು ಬೆಂಗಳೂರು ಜಯಿಸಿತ್ತು ಎಂಬುದು ಈಗ ನೆಮ್ಮದಿ ತರುವ ಅಂಶವಾಗಿದೆ.

ಆಗಿನ ಬೆಂಗಳೂರು ಸಿಟಿ ಮುನಿಸಿಪಲ್ ಕೌನ್ಸಿಲ್‌ನ ಆರೋಗ್ಯ ಇಲಾಖೆಯ ನೋಟಿಸ್ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದ್ದು, ಆಗಿನ ಕಾಲದಲ್ಲಿ ಸೋಂಕನ್ನು ಹೇಗೆ ಎದುರಿಸಲಾಗಿತ್ತು ಎಂಬುದು ಕೂಡ ನೋಟಿಸ್‌ನಲ್ಲಿ ದಾಖಲಾಗಿದೆ.

ಹೆಲ್ತ್‌ ನೋಟೀಸ್ 1928

ಹೆಲ್ತ್‌ ನೋಟೀಸ್ 1928

1918ರಲ್ಲಿ ಕಾಣಿಸಿಕೊಂಡಿದ್ದ ಇನ್‌ಫ್ಲೂಯಂಜಾ ಸೋಂಕು ಹೋಲುವ ನೆಗಡಿ ಜ್ವರದ ಲಕ್ಷಣಗಳು ಸಿಟಿಯಲ್ಲಿ ಕಾಣಿಸಿಕೊಂಡಿವೆ ಎಂದು ಆಗಿನ ಬೆಂಗಳೂರು ಸಿಟಿ ಮ್ಯೂನಿಸಿಪಲ್ ಕೌನ್‌ಸಿಲ್‌ನ ಆರೋಗ್ಯ ಇಲಾಖೆ 1928ರಲ್ಲಿ ನೋಟೀಸ್ ಜಾರಿ ಮಾಡಿತ್ತು. ನೋಟೀಸ್ ಹೀಗಿದೆ.

1918ನೇ ಇಸವಿಯಲ್ಲಿ ಪ್ರಾಪ್ತವಾಗಿದ್ದ ಇನ್‌ಫ್ಲೂಯಂಜಾ ಜಾಡ(ಸೋಂಕು)ದಂತೆಯೆ ಈಚೆಗೆ ಕೆಲವು ದಿನಗಳಿಂದ ಜನರು ನೆಗಡಿ, ಕೆಮ್ಮು ಇವುಗಳಿಂದ ನರಳುತ್ತಿರುವಂತೆ ಕಾಣುತ್ತಿದೆ.

ಅಲ್ಲಲ್ಲಿ ದೊಡ್ಡವರಿಗೂ ಮಕ್ಕಳಿಗೂ ನ್ಯೂಮೊನಿಯಾ ವ್ಯಾಧಿ ಉಂಟಾಗುತ್ತಿದೆ. ದೇಹಾರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾದ್ದರಿಂದ ಇದರಡಿ ನಮೂದಿಸಿರುವ ನಿಯಮಗಳನ್ನು ಆಚರಿಸಿದಲ್ಲಿ ಖಾಯಿಲೆ ಬರದಂತೆ ಮಾಡಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಲಾಗಿದೆ. ಅದು ಆಗಿನ ಲಾಕ್‌ಡೌನ್ ಮಾರ್ಗಸೂಚಿ ಆಗಿದೆ.

ಅತಿ ಕಡಿಮೆ 'ಆಕ್ಟಿವ್ ಕೇಸ್' ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳುಅತಿ ಕಡಿಮೆ 'ಆಕ್ಟಿವ್ ಕೇಸ್' ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳು

ಅಂದಿನ ಲಾಕ್‌ಡೌನ್ ನಿಯಮಗಳು

ಅಂದಿನ ಲಾಕ್‌ಡೌನ್ ನಿಯಮಗಳು

* ಜನರು ಗುಂಪಾಗಿ ಸೇರತಕ್ಕ ಸ್ಥಳಗಳು ಅಂದರೆ ಸಿನಿಮಾ, ನಾಟಕ ಇವುಗಳಿಗೆ ಹೋಗಬಾರದು.

* ಕೆಮ್ಮುತ್ತಿರುವವರ ಸಮೀಪದಲ್ಲಿ ಸೇರಬಾರದು.

* ದಿನಚರಿ (ದಿನವೂ) ಮಲ ವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು.

* ಹಗಲು-ರಾತ್ರಿ ಒಳ್ಳೆ ಗಾಳಿ ಬೀಸುವ ಜಾಗದಲ್ಲಿ ಇರಬೇಕು.

* ದೇಹಕ್ಕೂ ಮನಸ್ಸಿಗೂ ಆಲಸ್ತವಾಗುವಂತೆ ದುಡಿದು ಕೆಲಸ ಮಾಡಬಾರದು.


ಹೀಗೆ 1928ರ ಮಾರ್ಚ್‌ 11 ರಂದು ಬೆಂಗಳೂರು ಸಿಟಿ ಮ್ಯೂನಿಸಿಪಲ್ ಕೌನ್‌ಸಿಲ್‌ನ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿ ಡಾ. ಜೆ.ವಿ. ಮಾಸ್ಕರ್ನೆಹಾಸ್ ಎಂಬುವರು ಆದೇಶ ಮಾಡಿದ್ದಾರೆ.

ಆದರೂ ಕಾಯಿಲೆ ಬಂದರೆ..

ಆದರೂ ಕಾಯಿಲೆ ಬಂದರೆ..

ಒಂದು ವೇಳೆ ಖಾಯಿಲೆ ಬಂದಲ್ಲಿ ಅಂಥವರು ಈ ಕೆಳಗೆ ನಮೂದಿಸಿರತಕ್ಕ ನಿಯಮಗಳನ್ನು ಅನುಸರಿಸುವುದು ಒಳ್ಳೇದು ಎಂದು ಸೂಚಿಸಿದ್ದಾರೆ.

ಜ್ವರದೊಂದಿಗೆ ಕೂಡಿದ ನೆಗಡಿ, ದೇಹಾಲಸ್ಯ ಕಂಡು ಬಂದ ಕೂಡಲೇ ಹಾಸಿಗೆಯಲ್ಲಿ ಮಲಗಿ ಬಿಡಬೇಕು. ಖಾಯಿಲೆ ಆದವರು ಮಲಗುವ ಕೊಠಡಿಯಲ್ಲಿ ಕಿಟಕಿ ಬಾಗಿಲುಗಳು ಯಾವಾಗಲೂ ತೆರೆದಿರಬೇಕು. ಶುದ್ಧವಾದ ಗಾಳಿ, ಬೆಳಕು ಇದ್ದಷ್ಟೂ ಸೋಂಕು ಕಡಿಮೆಯಾಗುತ್ತೆ.

ಖಾಯಿಲೆಯಾವದರು ಶಾಖವಾದ ಹೊದಿಕೆಯನ್ನು ಹೊದ್ದುಕೊಂಡಿರಬೇಕು. ಮಲಬದ್ಧತೆಗೆ ಅವಕಾಶ ಕೊಡಬಾರದು ಇದಕ್ಕಾಗಿ ಭೇದಿ ಉಪ್ಪು (Epsom salt) ಉಪಯೋಗಿಸುವುದು ಒಳ್ಳೇದು.

ಖಾಯಿಲೆಗೆ ಚಿಕಿತ್ಸೆ

ಖಾಯಿಲೆಗೆ ಚಿಕಿತ್ಸೆ

ಸಮೀಪದಲ್ಲಿ ಆಸ್ಪತ್ರೆ ಇದ್ದಲ್ಲಿ ಔಷಧಿಯನ್ನು ತರಿಸಿ ತೆಗೆದುಕೊಳ್ಳಬೇಕು. ಅಲ್ಲದೆ ನೆಗಡಿ ಕಂಡ ಕೂಡಲೇ ಔಷಧಿ ಅಂಗಡಿಗಳಲ್ಲಿ ಸಿಗುವ C.A.Q (Cin Ammoniated Quinine) ಎಂಬ ಔಷಧಿಯನ್ನು ತೆಗೆದುಕೊಳ್ಳುವುದು ಒಳ್ಳೇಯದು. ಜೊತೆಗೆ ಮನೆ ಮದ್ದು ಮಾಡಿಕೊಳ್ಳುವಂತೆಯೂ ಸೂಚಿಸಿದ್ದಾರೆ. ಈಗಿನ H.C.Q. ಮಾತ್ರೆಯಂತೆಯೆ ಆಗ C.A.Q. ಮಾತ್ರೆಯನ್ನು ತೆಗೆದುಕೊಳ್ಳುವಂತೆ ಸೂಚಿಸಿಲಾಗಿತ್ತು.

ಆಸ್ಪತ್ರೆ ಚಿಕಿತ್ಸೆ ಲಭ್ಯವಿಲ್ಲದಲ್ಲಿ ಮನೆ ಮದ್ದು ಮಾಡುವಂತೆ ನೋಟೀಸ್‌ನಲ್ಲಿ ಸೂಚಿಸಿದ್ದಾರೆ. ದಾಲಚಿನ್ನಿ, ಲವಂಗ, ಮೆಣಸು, ಒಣಗಿದ ಶುಂಟಿಯನ್ನು ಪ್ರತಿಯೊಂದನ್ನು ಅರ್ಧ ತೊಲೆ ತೂಕದಷ್ಟು ತೆಗೆದುಕೊಂಡು ಅದಕ್ಕೆ ಎರಡು ಬೆಳ್ಳುಳ್ಳಿ ಹೋಳು ಸೇರಿಸಿ ಕಾಫಿ ಕುಡಿಯುವ ಎರಡು ಬಟ್ಟಲುಗಳಷ್ಟು ನೀರಿನಲ್ಲಿ ಕಷಾಯ ಕಾಯಿಸಿ ಅದು ಒಂದು ಅಥವಾ ಒಂದೂವರೆ ಬಟ್ಟಲಿನಷ್ಟು ಆಗುವ ಕಷಾಯಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ತೆಗೆದುಕೊಳ್ಳುವುದು ಸಹ ಒಳ್ಳೆಯದು ಎಂದು ನೋಟೀಸ್‌ನಲ್ಲಿ ಸಲಹೆ ಕೊಡಲಾಗಿದೆ.

English summary
Previously influenza infection in 1918 hit the entire world. Even after 10 years, in 1923, the same type of infection again appeared in Bengaluru. It is now reassuring that Bangalore has overcome the disease by measures like social gap and again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X