ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!

|
Google Oneindia Kannada News

ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಗುಣಮುಖರಾಗುತ್ತಿರುವ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ಮತ್ತು ಮರಣದ ಪ್ರಮಾಣವೂ ಇಳಿಕೆಯಾಗುತ್ತಿರುವುದು ನಿಟ್ಟುಸಿರು ಬಿಡುವಂತಹ ವಿಚಾರ.

Recommended Video

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು | Oneindia Kannada

ಮನುಕುಲವನ್ನು ಕಾಡುತ್ತಿರುವ ಈ ವೈರಸಿಗೆ ಆಯುರ್ವೇದದಲ್ಲಿ ಯಶಸ್ವಿ ಕ್ಲಿನಿಕಲ್ ಟೆಸ್ಟ್ ಪ್ರಯೋಗವಾಗಿದ್ದರೂ, ಸರಕಾರದಿಂದ ಈ ಲಸಿಕೆಗೆ ಅಧಿಕೃತ ಅನುಮತಿ ಇನ್ನಷ್ಟೇ ಸಿಗಬೇಕಷ್ಟೇ.

ಸರ್ಕಾರದಿಂದ ಆಯುರ್ವೇದ ಚಿಕಿತ್ಸೆಗೆ ಅನುಮತಿ ಇಲ್ಲದಿದ್ದರೂ, ಸಿಎಂ ತವರು ಜಿಲ್ಲೆಯಲ್ಲಿ ಆಯುರ್ವೇದ ಕಿಟ್ ವಿತರಣೆ!ಸರ್ಕಾರದಿಂದ ಆಯುರ್ವೇದ ಚಿಕಿತ್ಸೆಗೆ ಅನುಮತಿ ಇಲ್ಲದಿದ್ದರೂ, ಸಿಎಂ ತವರು ಜಿಲ್ಲೆಯಲ್ಲಿ ಆಯುರ್ವೇದ ಕಿಟ್ ವಿತರಣೆ!

ಕೊರೊನಾಗೆ ಭಯ ಪಡಬೇಕಾಗಿಲ್ಲ ಎಂದು ಹಲವು ಖ್ಯಾತ ವೈದ್ಯರು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿದ್ದಾಗಿದೆ. ಬಿಂಬಿತವಾಗುತ್ತಿರುವಂತೆ ಇದು ಅಂತಹ ಭಯಾನಕ ವೈರಸ್ ಅಲ್ಲ ಎಂದು ಒತ್ತಿಒತ್ತಿ ಹೇಳುತ್ತಿದ್ದಾರೆ.

ಇವೆಲ್ಲದರ ನಡುವೆ, ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ, ಕೊರೊನಾ ಓಡಿಸುವುದಕ್ಕೆ ಸಿಂಪಲ್ ವಿಧಾನವನ್ನು ತಿಳಿಸಿದ್ದಾರೆ. ಮನೆಯಲ್ಲೇ ಇದನ್ನು ತಯಾರಿಸುವುದು ಹೇಗೆಂದು ಹೇಳಿದ್ದಾರೆ. ಅದು ಹೀಗಿದೆ:

ಕೊರೊನಾ ಸೋಂಕಿನ ಬಗ್ಗೆ ಡಾ.ಗಿರಿಧರ್ ಕಜೆ ಅವರ ಸಲಹೆ ಇಲ್ಲಿದೆಕೊರೊನಾ ಸೋಂಕಿನ ಬಗ್ಗೆ ಡಾ.ಗಿರಿಧರ್ ಕಜೆ ಅವರ ಸಲಹೆ ಇಲ್ಲಿದೆ

ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗ್ಡೆ

ಖ್ಯಾತ ಹೃದ್ರೋಗ ತಜ್ಞ ಡಾ.ಬಿ.ಎಂ.ಹೆಗ್ಡೆ

ಉಡುಪಿ ಮೂಲದ ಡಾ.ಬಿ.ಎಂ.ಹೆಗ್ಡೆ ಖ್ಯಾತ ಹೃದ್ರೋಗ ತಜ್ಞರಲ್ಲೊಬ್ಬರು. ಲಕ್ನೋ ವಿಶ್ವವಿದ್ಯಾಲಯದಲ್ಲಿ ಎಂ.ಡಿ.ಪದವಿ ಪಡೆದ, ಹೆಗ್ಡೆಯವರು ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ತೆರಳಿ, ಅಲ್ಲಿರುವ ಎಲ್ಲಾ ರಾಯಲ್ ಕಾಲೇಜುಗಳ ಫೆಲೋ ಆದ ಪ್ರಪ್ರಥಮ ಕನ್ನಡಿಗ ಹಾಗೂ ಭಾರತೀಯನೆನಿಸಿಕೊಂಡರು. ಕೊರೊನಾಗೆ ಹೆಗ್ಡೆಯವರು ಸಿಂಪಲ್ ಔಷಧಿಯನ್ನು ಹೇಗೆ ಮಾಡುವುದೆಂದು ಹೇಳಿದ್ದಾರೆ.

ಶೀತ, ಜ್ವರ, ನೆಗಡಿ ಮಾತ್ರ ಇದ್ದರೆ ಆಸ್ಪತ್ರೆಗೆ ಹೋಗಬೇಡಿ

ಶೀತ, ಜ್ವರ, ನೆಗಡಿ ಮಾತ್ರ ಇದ್ದರೆ ಆಸ್ಪತ್ರೆಗೆ ಹೋಗಬೇಡಿ

ಬರೀ ಶೀತ, ಜ್ವರ, ನೆಗಡಿ ಮಾತ್ರ ಇದ್ದರೆ ಆಸ್ಪತ್ರೆಗೆ ಹೋಗಬೇಡಿ ಎಂದು ಹೇಳಿರುವ ಡಾ.ಹೆಗ್ಡೆ, "ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ" ಎಂದಿದ್ದಾರೆ. ಜೊತೆಗೆ, ವಿಕ್ಸ್ ಶಾಖವನ್ನು ತೆಗೆದುಕೊಳ್ಳುವುದರಿಂದ ಶ್ವಾಸಕೋಶಕ್ಕೆ ತೊಂದರೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅರಸಿನ, ತುಳಸಿ

ಅರಸಿನ, ತುಳಸಿ

"ಕುದಿಯುತ್ತಿರುವ ನೀರಿಗೆ ಒಂದು ಸಣ್ಣ ಚಮಚದಷ್ಟು ಅರಸಿನ, 8-10 ಬಿಡಿಸಿದ ಬೆಳ್ಳುಳ್ಳಿಯ ಎಸಳು, 25-30 ತುಳಸಿಯ ಎಲೆಯನ್ನು ಚೆನ್ನಾಗಿ ಜಜ್ಜಿ, ಕುದಿಯುವ ನೀರಿಗೆ ಹಾಕಬೇಕು. ಸ್ವಲ್ಪಹೊತ್ತು ಕುದಿದ ನಂತರ, ಟವೆಲ್ ಅನ್ನು ತಲೆಗೆ ಹಾಕಿ, ಅದರ ಆವಿಯ ಶಾಖವನ್ನು ತೆಗೆದುಕೊಳ್ಳಬೇಕು" ಎಂದು ವೈದ್ಯ ಡಾ. ಹೆಗ್ಡೆ ಹೇಳಿದ್ದಾರೆ.

ಸ್ಯಾನಿಟೈಸರ್ ಬಳಸುವುದನ್ನು ಕಮ್ಮಿ ಮಾಡಿ

ಸ್ಯಾನಿಟೈಸರ್ ಬಳಸುವುದನ್ನು ಕಮ್ಮಿ ಮಾಡಿ

ಐದಾರು ಕರಿಮೆಣಸು ಮತ್ತು ಸ್ವಲ್ಪ ಕಲ್ಲು ಉಪ್ಪನ್ನು ಬಾಯಿಗೆ ಹಾಕಿಕೊಂಡು ಜಗಿಯುತ್ತಾ ನಿಧಾನವಾಗಿ ಅದರ ರಸವನ್ನು ಕುಡಿಯಬೇಕು. ಇದಾದ ಒಂದು ಗಂಟೆಯ ನಂತರ, ಊಟವನ್ನು ಸೇವಿಸಬೇಕು. ಇದನ್ನು, ರಾತ್ರಿ ಊಟದ ನಂತರ ಸೇವಿಸಿದರೆ, ಇನ್ನೂ ಒಳ್ಳೆಯದು. ಇನ್ನು ಸ್ಯಾನಿಟೈಸರ್ ಬಳಸುವ ಬದಲು, ಕೊಬ್ಬರಿ ಎಣ್ಣೆಗೆ ಸ್ವಲ್ಪ ಬೆಳ್ಳುಳ್ಳಿಯ ಎಸಳನ್ನು ಜಜ್ಜಿ (ಕುದಿಸಬೇಕಾಗಿಲ್ಲ), ಅದನ್ನು ಕೈಗೆ ಹಚ್ಚಿಕೊಂಡರೆ, ಇದರ ಮುಂದೆ ಯಾವ ಸ್ಯಾನಿಟೈಸರೂ ಇಲ್ಲ ಎಂದು ಡಾ. ಬಿ.ಎಂ.ಹೆಗ್ಡೆ ಹೇಳಿದ್ದಾರೆ.

English summary
Noted Cardiologist B M Hegde Given Simple Home Made Solutions To Corona,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X