ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಪ್ರತ್ಯೇಕತೆ ಕೂಗು: ನಮಗೀಗ ರಾಜ್ಯ ಪುನರ್‌ವಿಂಗಡಣೆ ಆಯೋಗ ಬೇಕಿದೆ

By ಆರ್. ಜಗನ್ನಾಥನ್
|
Google Oneindia Kannada News

ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದ ಕಠೋರ ನಿರ್ಧಾರ ಕಣ್ಣೆದುರೇ ಇದೆ. ಅದರ ಫಲಿತವನ್ನು ನೋಡುತ್ತಿರುವ ಕಾರಣಕ್ಕೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂಬ ಕೂಗನ್ನು ಬೆಂಬಲಿಸಲು ಆಲೋಚಿಸುವಂತೆ ಮಾಡಿದೆ.

ಹಲವು ಮಠಾಧೀಶರು ಈ ಹೋರಾಟದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಪ್ರತ್ಯೇಕ ರಾಜ್ಯದ ಬಾವುಟವನ್ನೇ ಸಿದ್ಧಪಡಿಸಿಟ್ಟು ಕೊಂಡಿದೆ. ಆಡಳಿತ ನಡೆಸುವುದಕ್ಕೆ ವಿಪರೀತ ದೊಡ್ಡದು ಎನಿಸುವ ರಾಜ್ಯಗಳು ಸಣ್ಣಸಣ್ಣದಾಗಿ ತುಂಡಾಗಿರುವುದು ದೇಶಕ್ಕೆ ಹೊಸದಲ್ಲ.

ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗುಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು

ಇನ್ನು ಸಾಂಸ್ಕೃತಿಕವಾಗಿ ಭಿನ್ನ ನೆಲೆಗಳು, ಆರ್ಥಿಕ ಅಸಮಾನತೆಯಂಥ ವಿಚಾರಗಳು ಪ್ರತ್ಯೇಕ ರಾಜ್ಯದಂಥ ಬೇಡಿಕೆಗಳಿಗೆ ಇನ್ನಷ್ಟು ಪುಷ್ಟಿ ನೀಡುತ್ತವೆ. ಈಗ ಕರ್ನಾಟಕದಲ್ಲಿ ಏನಾಗಿದೆ ಅಂದರೆ, ದಕ್ಷಿಣ ಕರ್ನಾಟಕಕ್ಕೆ ಸೇರಿದ- ಆ ಭಾಗದ ಪ್ರಬಲ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ಈ ಸರಕಾರದ ಪಾಲಿಗೆ ದಕ್ಷಿಣ ಕರ್ನಾಟಕದ ಕಡೆಗೇ ಗಮನ ಇರುತ್ತದೆ ಎಂಬ ಆತಂಕ ಶುರುವಾಯಿತು.

North Karnataka Statehood: We Need A New States Reorganisation Commission

ಹೋಗಲಿ, ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಿಂದಾದರೂ ಈ ಆತಂಕ ನಿವಾರಣೆ ಮಾಡಬಹುದಿತ್ತು ಅಥವಾ ಆಗಬಹುದಿತ್ತು. ಆದರೆ ಆ ಕೆಲಸವೂ ಆಗಲಿಲ್ಲ. ಕರ್ನಾಟಕದ ಒಟ್ಟು ಜನಸಂಖ್ಯೆ 6.40 ಕೋಟಿಗಿಂತ ಹೆಚ್ಚು. ಅಂದರೆ ಈಗಿನ ಫ್ರಾನ್ಸ್ ದೇಶದ ಜನಸಂಖ್ಯೆಗೆ ಸಮಾನವಾದದ್ದು.

ಜಗತ್ತಿನ ಕನಿಷ್ಠ ಇನ್ನೂರು ದೇಶಗಳಲ್ಲಿ ದಕ್ಷಿಣ ಭಾರತದ ಈ ಶ್ರೀಮಂತ ರಾಜ್ಯಕ್ಕಿಂತ ಕಡಿಮೆ ಜನಸಂಖ್ಯೆಯಿದೆ. ಇನ್ನು ಈಗ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿರುವ ಹದಿಮೂರು ಜಿಲ್ಲೆಗಳು ಇತಿಹಾಸ ನೋಡಿದರೆ, ಅವುಗಳಿಗೆ ಭಾರತದ ಇತಿಹಾಸದಲ್ಲೇ ವಿಶಿಷ್ಟವಾದ ಸ್ಥಾನವಿದೆ. ಹಳೆ ಮುಂಬೈ, ಹೈದರಾಬಾದ್ ಭಾಗದಲ್ಲಿ ಈ ಜಿಲ್ಲೆಗಳು ಬರುತ್ತವೆ.

ಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿಪ್ರತ್ಯೇಕ ರಾಜ್ಯದ ಕೂಗಿಗೆ ಜಾತಿ, ರಾಜಕೀಯ ಕಾರಣ: ಪದ್ಮರಾಜ ದಂಡಾವತಿ

ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಜತೆಗೆ ನೀರಿನ ಸಮಸ್ಯೆಯಿದೆ. ಈಗಿರುವ ಮುಖ್ಯ ಪ್ರಶ್ನೆ ಏನೆಂದರೆ, ತೆಲಂಗಾಣ ರಾಜ್ಯ ಪ್ರತ್ಯೇಕ ಆದಾಗ ಸಂಪನ್ಮೂಲಕ್ಕೆ ಯಾವುದೇ ಸಮಸ್ಯೆ ಅಂತಿರಲಿಲ್ಲ. ಏಕೆಂದರೆ ಅದರ ಪಾಲಿಗೆ ಹೈದರಾಬಾದ್ ಇತ್ತು. ಆ ಮೂಲಕ ದೊರೆಯುವ ಆದಾಯ ಇತ್ತು.

ಆದರೆ, ಉತ್ತರ ಕರ್ನಾಟಕದ ಪಾಲಿಗೆ ಅನುಕೂಲ ಅಂತಿರುವುದು ಬೆಂಗಳೂರು- ಮೈಸೂರು ಭಾಗದಲ್ಲಿ ಬರುವ ಆದಾಯದಲ್ಲಿ. ಇನ್ನೊಂದು ವಿಷಯ ಏನೆಂದರೆ, ಯಾವುದೇ ಶ್ರೀಮಂತ ರಾಜ್ಯವು ಅದರ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಹಣ ಖರ್ಚು ಮಾಡಿದ ಉದಾಹರಣೆಗಳಿಲ್ಲ. ಆಂಧ್ರಪ್ರದೇಶದಿಂದ ಪ್ರತ್ಯೇಕ ಆಗುವ ಮುಂಚೆ ಹೈದರಾಬಾದ್ ಹೊರತುಪಡಿಸಿ, ತೆಲಂಗಾಣ ಭಾಗದಲ್ಲಿ ಅಂಥ ಅಭಿವೃದ್ಧಿ ಆಗಿರಲಿಲ್ಲ.

ಈಗಿನ ರಾಜಕೀಯ ಸ್ಥಿತಿಯ ಅವಲೋಕನ ಮಾಡಿದರೆ, ನಗರ ಪ್ರದೇಶಗಳ ಅಭಿವೃದ್ಧಿ ಬಹಳ ವೇಗವಾಗಿ ಆಗುತ್ತಿದೆ. ಇನ್ನು ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡದಂಥ ನಗರಗಳಿಗೂ ಇದು ಅನ್ವಯ ಆಗಲಿದೆ. ಇನ್ನು ಬೆಂಗಳೂರು ಬೆಳೆದಂತೆಲ್ಲ ಅದರ ಹೊರೆ ಇಳಿಸುವುದಕ್ಕೆ ರಾಜ್ಯದ ಇತರ ನಗರಗಳನ್ನು ಅಭಿವೃದ್ಧಿ ಮಾಡುವುದು ಅನಿವಾರ್ಯ ಆಗುತ್ತದೆ ಆಗ ಸಹಜವಾಗಿ ಇತರ ಜಿಲ್ಲೆಗಳಿಗೂ ಅನುಕೂಲವಾಗುತ್ತದೆ.

ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?ಏನಿದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು? ಆ.2ರ ಬಂದ್ ಯಾಕಾಗಿ?

ಆದ್ದರಿಂದ ಎರಡು ವಿಚಾರವನ್ನು ಈ ಚರ್ಚೆಯಲ್ಲಿ ತರಬಹುದು.
ಒಂದು, ಆಡಳಿತಾತ್ಮಕ ಕಾರಣಕ್ಕಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡುವುದು.

ಎರಡನೆಯದು, ಪ್ರತ್ಯೇಕತೆಯು ಸೌಹಾರ್ದವಾಗಿರಬೇಕು. ಇದು ಪ್ರಾದೇಶಿಕ ರಾಜಕೀಯ ದ್ವೇಷದ ಕ್ಷೋಭೆಗಳಿಗೆ ಅವಕಾಶ ನೀಡುವಂತಾಗಬಾರದು.

ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರತ್ಯೇಕತೆ ಈಡೇರಿದ ಬಳಿಕವೂ ರಕ್ತದ ಕೋಡಿ ಹರಿಯುತ್ತಿರುವಂತಹ ಸನ್ನಿವೇಶ ನಮಗೆ ಬೇಡ.

ನಮಗೇನಿದ್ದರೂ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರಗಳಿಂದ ಪ್ರತ್ಯೇಕಗೊಂಡು ರಚನೆಯಾದ ಉತ್ತರಾಖಂಡ ಮತ್ತು ಜಾರ್ಖಂಡ್‌ಗಳಂತಹ ಮಾದರಿ ಬೇಕು.

ಪ್ರತ್ಯೇಕ ರಾಜ್ಯದ ಬೇಡಿಕೆಗಳನ್ನು ಪರಿಶೀಲಿಸಲು ಎನ್‌ಡಿಎ ಸರ್ಕಾರ ಹೊಸ ರಾಜ್ಯಗಳ ಪುರ್‌ವಿಂಗಡಣೆ ಆಯೋಗವನ್ನು ರಚಿಸಬೇಕು.

ಆಡಳಿತಾತ್ಮಕ ಹಾಗೂ ವಿವಿಧ ದೃಷ್ಟಿಗಳಿಂದ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳನ್ನು ಎರಡು ಅಥವಾ ಮೂರು ರಾಜ್ಯಗಳಾಗಿ ವಿಂಗಡಿಸಿ ಸುಮಾರು 40-50 ರಾಜ್ಯಗಳನ್ನು ಹೊಂದುವುದು ಭಾರತಕ್ಕೆ ಬಹುಶಃ ಅಗತ್ಯವಿದೆ.

ರಾಜ್ಯವನ್ನು ವಿಭಜಿಸುವುದು ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ ಎಂಬ ಭಾವನೆ ಇದೆ. ಆದರೆ, ಎರಡು ರಾಜ್ಯಗಳನ್ನು ಹೊಂದುವುದರಿಂದ ಕನ್ನಡ ಅಥವಾ ತೆಲುಗು ಕಳೆದುಹೋಗುವುದಿಲ್ಲ.

ಎಂಟು ರಾಜ್ಯಗಳಲ್ಲಿ ಹಂಚಿ ಹೋದರೂ ಹಿಂದಿ ಮಾತನಾಡುವ ರಾಜ್ಯಗಳು ಇರುವಾಗ ಎರಡು ಕನ್ನಡ, ತಮಿಳು, ಮರಾಠಿ ಅಥವಾ ತೆಲುಗು ಮಾತನಾಡುವ ರಾಜ್ಯಗಳು ಸಹ ಇರಬಲ್ಲವು.

ಆದರೆ, ಈ ವಿಷಯವನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಹೊಸ ರಾಜ್ಯಗಳ ಪುನರ್‌ವಿಂಗಡಣಾ ಆಯೋಗದ ರಚನೆಯ ಅಗತ್ಯವು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ.

ಆಧಾರ: ಸ್ವರಾಜ್ಯ ನಿಯತಕಾಲಿಕೆ
ಲೇಖಕ ಆರ್. ಜಗನ್ನಾಥನ್ ಅವರು ಸ್ವರಾಜ್ಯದ ಸಂಪಾದಕೀಯ ನಿರ್ದೇಶಕರು

English summary
Swarajyamag Editorial Director R Jagannathan wrotes, India probably needs to have close to 40-50 states. We need a new states reorganisation commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X