ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ಪರಿಹಾರ ತರಲು ರಾಜ್ಯ ಸರ್ಕಾರ ದಯನೀಯ ವೈಫಲ್ಯ: ಕರವೇ ನಾರಾಯಣ ಗೌಡ

|
Google Oneindia Kannada News

ಬೆಂಗಳೂರು, ನ 14: ಉತ್ತರ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರ ಜತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಗೂಗಲ್ ಹ್ಯಾಂಗ್ ಔಟ್ ಮೂಲಕ ಇಂದು ಸಭೆ ನಡೆಸಿದರು.

"ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಆಗಿರುವ ಬೆಳೆಹಾನಿ, ಜೀವಹಾನಿ, ಜಾನುವಾರುಗಳ ಮರಣ ಇತ್ಯಾದಿಗಳ ಕುರಿತು ತಾವೆಲ್ಲರೂ ಅಂಕಿಅಂಶಗಳ ಸಮೇತ ಮಾಹಿತಿ ನೀಡಿರುತ್ತೀರಿ. ಸುಮಾರು 25ಸಾವಿರ ಕೋಟಿ ರುಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವವಾಗಿ ಅದಕ್ಕಿಂದ ದುಪ್ಪಟ್ಟು, ಮೂರುಪಟ್ಟು ನಷ್ಟ ಸಂಭವಿಸಿದೆ ಎಂಬುದು ನಿಮ್ಮ ಮಾತುಗಳಿಂದ ಅರ್ಥವಾಗುತ್ತಿದೆ" ಎಂದು ನಾರಾಯಣ ಗೌಡ್ರು ಅಭಿಪ್ರಾಯ ಪಟ್ಟರು.

ರಾಜ್ಯೋತ್ಸವದ ದಿನದಂದು ಬಿಎಸ್ವೈ ಸರಕಾರದ ಅಪಚಾರ: ಟ್ವಿಟ್ಟರ್ ಅಭಿಯಾನರಾಜ್ಯೋತ್ಸವದ ದಿನದಂದು ಬಿಎಸ್ವೈ ಸರಕಾರದ ಅಪಚಾರ: ಟ್ವಿಟ್ಟರ್ ಅಭಿಯಾನ

"ರಾಜ್ಯ ಸರ್ಕಾರದ ಹೇಳಿಕೆಯ ಪ್ರಕಾರ ಇದುವರೆಗೆ ಕೇವಲ 4.5ಕೋಟಿ ರುಪಾಯಿಗಳಷ್ಟು ಪರಿಹಾರ ವಿತರಿಸಲಾಗಿದೆ. ಆಗಿರುವ ನಷ್ಟಕ್ಕೂ ವಿತರಿಸಲಾಗಿರುವ ಪರಿಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೊಟ್ಟಿರುವ ಪರಿಹಾರದಲ್ಲೂ ರಾಜಕಾರಣಿಗಳು, ಪುಡಾರಿಗಳು ತಾರತಮ್ಯ ಎಸಗಿರುವುದನ್ನು ನೀವು ಗಮನಕ್ಕೆ ತಂದಿರುತ್ತೀರಿ. ಇದೆಲ್ಲವನ್ನೂ ಗಮನಿಸಿದರೆ ರಾಜ್ಯ ಸರ್ಕಾರ ಎಂಬುದು ಅಸ್ತಿತ್ವದಲ್ಲಿ ಇದೆಯೇ ಎಂಬ ಅನುಮಾನ ಮೂಡುತ್ತಿದೆ" ಎಂದು ಗೌಡರು ಹೇಳಿದರು.

North Karnataka Flood Situation And Government Action: Karave President TA Narayana Gowda Hangout Meeting

"ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ತರಲು ರಾಜ್ಯ ಸರ್ಕಾರ ದಯನೀಯವಾಗಿ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ನೆರೆಪರಿಹಾರ ತರುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಕೇಂದ್ರದಲ್ಲೂ ರಾಜ್ಯದಲ್ಲೂ ಒಂದೇ ಪಕ್ಷದ ಅಧಿಕಾರವಿದ್ದರೆ ರಾಜ್ಯ ಉದ್ಧಾರವಾಗುತ್ತದೆ ಎಂದು ಚುನಾವಣೆಗಳಲ್ಲಿ ನಂಬಿಸಲಾಗಿತ್ತು".

"ಆದರೆ ಈಗ ಆಗಿರುವುದೇನು? ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಜನಜಾಗೃತಿ ಮೂಡಿಸಬೇಕಿದ್ದ, ಚಳವಳಿ ರೂಪಿಸಬೇಕಿದ್ದ, ನೊಂದಜನರಿಗೆ ಪರಿಹಾರ ಕೊಡಿಸಬೇಕಿದ್ದ ವಿರೋಧಪಕ್ಷಗಳೂ ಸಹ ಮೌನಕ್ಕೆ ಶರಣಾಗಿವೆ" ಎಂದು ನಾರಾಯಣ ಗೌಡರು ಹೇಳಿದರು.

ಎಲ್ಲ ರಾಜಕೀಯ ಪಕ್ಷಗಳೂ ಉಪಚುನಾವಣೆಗಳ ಅಬ್ಬರದಲ್ಲಿ ಕಳೆದುಹೋಗಿದ್ದಾರೆ. ಸಂತ್ರಸ್ಥರಿಗೆ ಈಗ ಆಡಳಿತ ಪಕ್ಷವೂ ಇಲ್ಲ, ವಿರೋಧಪಕ್ಷವೂ ಇಲ್ಲ ಎಂಬಂತಾಗಿದೆ. ಕರೋನಾ ರೋಗದ ಹೆಸರಿನಲ್ಲಿ ಚಳವಳಿಗಳನ್ನು ಹತ್ತಿಕ್ಕುವ, ಅನುಮತಿಯನ್ನೇ ನೀಡದ ಉದಾಹರಣೆಗಳೂ ಇವೆ.

ಇಂಥ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಿರ್ಣಾಯಕ ಹೋರಾಟವನ್ನು ಸಂಘಟಿಸಬೇಕಿದೆ. ಈ ಹಿನ್ನೆಲೆಯಲ್ಲಿ ನೆರೆಪೀಡಿತ ಜಿಲ್ಲೆಗಳ ಕರವೇ ಜಿಲ್ಲಾಧ್ಯಕ್ಷರುಗಳ ನಿಯೋಗವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಕರೆದೊಯ್ಯಲಿದ್ದೇನೆ ಎಂದು ನಾರಾಯಣ ಗೌಡರು ಹೇಳಿದರು.

North Karnataka Flood Situation And Government Action: Karave President TA Narayana Gowda Hangout Meeting

ಹನುಮಂತ ಅಬ್ಬಿಗೇರಿ, ಗದಗ ಜಿಲ್ಲಾ ಕರವೇ ಜಿಲ್ಲಾಧ್ಯಕ್ಷರು, ಮಹೇಶ್ ಕಾಶಿ, ಕಲ್ಬುರ್ಗಿ ಜಿಲ್ಲಾ ಕರವೇ ಅಧ್ಯಕ್ಷರು, ಸೋಮುನಾಥ ಮುಧೋಳ, ಬೀದರ್ ಜಿಲ್ಲಾ ಕರವೇ ಅಧ್ಯಕ್ಷರು, ಎಂ.ಸಿ.ಮುಲ್ಲಾ, ಬಿಜಾಪುರ ಜಿಲ್ಲಾ ಕರವೇ ಅಧ್ಯಕ್ಷರು, ಭೀಮೂ ನಾಯಕ್, ಯಾದಗಿರಿ ಜಿಲ್ಲಾ ಕರವೇ ಅಧ್ಯಕ್ಷರು, ವಿನೋದ್ ರೆಡ್ಡಿ, ರಾಯಚೂರು ಜಿಲ್ಲಾ ಕರವೇ ಅಧ್ಯಕ್ಷರು, ರುದ್ರೇಶ್, ಧಾರವಾಡ ಜಿಲ್ಲಾ ಕರವೇ ಅಧ್ಯಕ್ಷರು, ದೀಪಕ್, ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷರು, ರಮೇಶ್ ಬದ್ನೂರ, ಬಾಗಲಕೋಟೆ ಜಿಲ್ಲೆ ಕರವೇ ಜಿಲ್ಲಾಧ್ಯಕ್ಷರು ಈ ಹ್ಯಾಂಗ್ ಔಟ್ ನಲ್ಲಿ ಭಾವಹಿಸಿ, ತಮ್ಮ ತಮ್ಮ ಜಿಲ್ಲೆಗಳ ಸಮಸ್ಯೆಗಳನ್ನು ಹಂಚಿಕೊಂಡರು.

ಈ ಹ್ಯಾಂಗ್ ಔಟ್ ನಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವನ ಗೌಡ ಪಾಟೀಲ್ (ಕೊಪ್ಪಳ), ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜಾವಗಲ್, ಕರವೇ ಸಾಮಾಜಿಕ ಜಾಲತಾಣ ಘಟಕದ ರಾಜ್ಯ ಪ್ರಧಾನ ಸಂಚಾಲಕ ದಿನೇಶ್ ಕುಮಾರ್ ಎಸ್.ಸಿ ಉಪಸ್ಥಿತರಿದ್ದರು.

English summary
North Karnataka Flood Situation And Government Action: Karave President TA Narayana Gowda Hangout Meeting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X