• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈರಲ್ ವಿಡಿಯೋ: ಸುಂದರ ಹಂಪೆ ಸ್ಮಾರಕ ಕಿಡಿಗೇಡಿಗಳಿಂದ ಧ್ವಂಸ

|

ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆಯ ಸಂಕೇತವಾದ ಹಂಪೆ(ಹಂಪಿ)ಯ ಸಾಲು ಕಂಬಗಳನ್ನು ಕಿಡಿಗೇಡಿ ಪ್ರವಾಸಿಗಳು ಕೆಡವುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2019ರಲ್ಲಿ ನೋಡಬೇಕಾದ 52 ಸ್ಥಳಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ

ಪ್ರವಾಸಕ್ಕೆಂದು ಬಂದಿದ್ದ ಉತ್ತರ ಭಾರತ ಮೂಲದ ಮೂವರು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಹಂಪಿಯ ವಿಷ್ಣು ದೇವಾಲಯದ ಹಿಂದಿರುವ ಗಜ ಶಾಲೆಯ ಆನೆ ಸಾಲು, ಒಂಟೆ ಸಾಲುಗಳ ಬಳಿಯ ಸಾಲು ಕಂಬಗಳನ್ನ ಕೆಡವಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಮಧ್ಯಪ್ರದೇಶ ಮೂಲದ ಆಯುಷ್ಯ ಸಾಹು ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಯುನೆಸ್ಕೋ ದಿಂದ ವಿಶ್ವಪಾರಂಪರಿಕ ಸ್ಥಾನಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ, ವಾಸ್ತುಶಿಲ್ಪಗಳ ತವರೂರು ಹಂಪಿಯ ಹಿರಿಮೆ ಗೊತ್ತಿಲ್ಲದವರು ಪ್ರವಾಸಕ್ಕೆ ಬರುವ ಅಗತ್ಯವೇನಿದೆ? 14 ನೇ ಶತಮಾನದಲ್ಲಿ ಹಂಪೆಯ ಮೇಲೆ ಆಕ್ರಮಣ ಮಾಡಿ, ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೊಡಲಿ ಏಟು ನೀಡಿದ ದೆಹಲಿ ಸುಲ್ತಾನರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ತುಂಗಭದ್ರಾ ನದಿಯ ದಡದ ಮೇಲಿರುವ ಹಂಪೆ 14 ರಿಂದ 16 ನೇ ಶತಮಾನದವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.

ಭಾರತದಲ್ಲಿ ಐತಿಹಾಸಿಕ, ಸಾಂಸ್ಕೃತಿಕ, ಪೌರಾಣಿಕ, ಪ್ರಾಕೃತಕ ಸಂಪತ್ತಿನ ಧ್ಯೋತಕವಾದ ಎಷ್ಟೋ ಸುಂದರ ತಾಣಗಳಿವೆ. ಆದರೆ ಅವನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳುವ ಮನಸ್ಥಿತಿಯ ಕೊರತೆ ಇದೆ. ಹಂಪೆಯೂ ಅದಕ್ಕೊಂದು ತಾಜಾ ನಿದರ್ಶನ.

ಎಲ್ಲಕ್ಕೂ ಒಂದು ಮಿತಿ ಇರಬೇಕು

ಇಂಥ ಪ್ರಾಚೀನ ಅನರ್ಘ್ಯ ತಾಣವನ್ನು ನಾಶ ಮಾಡುವುದಕ್ಕೆ ಮನಸ್ಸಾದರೂ ಹೇಗೆ ಬರುತ್ತದೆ? ಈ ವಿಡಿಯೋವನ್ನು ನನಗೆ ಒಬ್ಬರು ಕಳಿಸಿದರು. ಇದನ್ನು ನಿಜಕ್ಕೂ ಖಂಡನೀಯ. ಯಾವ ಮಾಧ್ಯಮಗಳೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಏಕೆ? ಎಲ್ಲಕ್ಕೂ ಒಂದು ಮಿತಿ ಎಂಬುದಿದೆ. ಹೇಗಾದರೂ ಸರಿ, ಈ ಕಿಡಿಗೇಡಿಗಳಿಗೆ ಶಿಕ್ಷೆಯಾಗುವಂತೆ ಮಾಡಿ ಎಂದಿದ್ದಾರೆ ಪ್ರವೀಣ್ ಮೋಹನ್

ಹಂಪಿ ಸೇರಿ ರಾಜ್ಯದ ಐದು ಪ್ರವಾಸಿ ತಾಣಗಳ ಅಭಿವೃದ್ಧಿ

ಆಧುನಿಕ ಔರಂಗಜೇಬರು!

ಶಾಕಿಂಗ್!

ಆಧುನಿಕ ಔರಂಗಜೇಬರು ಕರ್ನಾಟಕದ ಯುನೆಸ್ಕೋ ಪಾರಂಪರಿಕ ತಾಣ ಹಂಪಿಯನ್ನು ಧ್ವಂಸ ಮಾಡುತ್ತಿದ್ದಾರೆ. ಅಸಹ್ಯಕರ!

ಎಚ್ ಡಿ ಕುಮಾರಸ್ವಾಮಿ ಅವರೇ ಏನು ಮಾಡುತ್ತಿದ್ದೀರಾ? ಹಿಂದು ವಿರೋಧಿ ಸಿದ್ದರಾಮಯ್ಯ ಮತ್ತು ನೀವು ಅದರ ಧ್ವಂಸಕ್ಕೆ ದಾರಿ ಮಾಡಿಕೊಟ್ಟಿದ್ದೀರಾ! ಎಂದು ರಿತು ರಾಥೋರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಿಡಿಗೇಡಿಗಳಿಗೆ ಶಿಕ್ಷೆಯಾಗಲೇಬೇಕು

ತಾಳಿಕೋಟೆ ಯುದ್ಧದ ಫಲವೇ ವೈಭವದ ಹಂಪಿ ಹಾಳು ಹಂಪಿಯಾಗಿ ಬದಲಾಗಿದ್ದು. ವಿಜಯನಗರ ಸಾಮ್ರಾಜ್ಯ ನಮ್ಮ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ಸಾಮ್ರಾಜ್ಯವಾಗಿ ಹೆಸರಾಗಿತ್ತು. ಅದನ್ನು ಇನ್ನೂ ಧ್ವಂಸ ಮಾಡುತ್ತಲೇ ಇರುವ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ, ಶಿಕ್ಷೆ ನೀಡಿ ಎಂದಿದ್ದಾರೆ ಕುಮಾರಸ್ವಾಮಿ ಮೂರ್ತಿ.

ಇವರನ್ನು ಇನ್ನೂ ಯಾಕೆ ಬಂಧಿಸಿಲ್ಲ?

ಈ ಕಿಡಿಗೇಡಿಗಳನ್ನು ಇನ್ನೂ ಅಲೆಯಲು ಬಿಟ್ಟಿರುವುದೇಕೆ? ಮೊದಲು ಬಂಧಿಸಿ! ನಮ್ಮ ರಾಷ್ಟ್ರೀಯ ಪಾರಂಪರಿಕ ತಾಣಗಳನ್ನು ಧ್ವಂಸ ಮಾಡಲು ಪ್ರಯತ್ನಿಸುವವರನ್ನು ಶಿಕ್ಷಿಸಲು ಸರ್ಕಾರ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ ಅಭಿರೂಪಿ ಚಕ್ರವರ್ತಿ.

English summary
Some north Indian tourists destroy famous stone pillars of world heritage centre Hampi in Ballari district in Karnataka. The video has become viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X