• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉ.ಕರ್ನಾಟಕ ಪ್ರತ್ಯೇಕ ರಾಜ್ಯ: ಯಡಿಯೂರಪ್ಪ ವಿರೋಧ, ಶ್ರೀರಾಮುಲು ಬೆಂಬಲ?

By Manjunatha
|
   ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ವಿಷಯವನ್ನ ಯಾರು ಮಾತನಾಡಬಾರದು | ಯಡಿಯೂರಪ್ಪ ವಾರ್ನಿಂಗ್ | Oneindia Kannada

   ಬೆಂಗಳೂರು, ಜುಲೈ 18: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಬಗ್ಗೆ ಬಿಜೆಪಿಯಲ್ಲಿದ್ದ ಗೊಂದಲವನ್ನು ಯಡಿಯೂರಪ್ಪ ಹೋಗಲಾಡಿಸಿದ್ದಾರೆ. ಪ್ರತ್ಯೇಕ ರಾಜ್ಯ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

   ಇತ್ತೀಚೆಗಷ್ಟೆ ಬಜೆಟ್ ಅಧಿವೇಶನದಲ್ಲಿ ಬಿಜೆಪಿಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಶ್ರೀರಾಮುಲು ಅವರು ಉ.ಕರ್ನಾಟಕ ಅಭಿವೃದ್ಧಿ ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯ ಕೂಗಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದರು. ಹಾಗಾಗಿ ಈ ಸೂಕ್ಷ್ಮ ವಿಷಯದ ಬಗ್ಗೆ ಬಿಜೆಪಿ ನಿಲವಿನ ಬಗ್ಗೆ ಗೊಂದಲ ಏರ್ಪಟ್ಟಿತ್ತು.

   ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಶ್ರೀರಾಮುಲು ಬೆಂಬಲ

   ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ ಎಂಬುದಾದರೆ ಅದರ ಅಭಿವೃದ್ಧಿಗೆ ಒಟ್ಟುಗೂಡಿ ಕಾರ್ಯ ಮಾಡಬೇಕೆ ವಿನಃ ಪ್ರತ್ಯೇಕ ರಾಜ್ಯ ಮಾಡಲು ಹೊರಡುವುದು ಸರಿಯಲ್ಲ ಎಂದು ಇಂದು ಯಡಿಯೂರಪ್ಪ ಹೇಳಿದ್ದಾರೆ.

   ಶವಿಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಬೇಡಿಕೆಯೇ ತಪ್ಪು ಎಂದಿರುವ ಅವರು ಯಾವುದೇ ರಾಜಕೀಯ ಪಕ್ಷಗಳು ಅದರ ಪರವಾಗಿ ನಿಲ್ಲಕೂಡದು ಎಂದು ಹೇಳಿದ್ದಾರೆ.

   ಪ್ರತ್ಯೇಕ ರಾಜ್ಯ ಕೂಗು ಏಕೆ?

   ಪ್ರತ್ಯೇಕ ರಾಜ್ಯ ಕೂಗು ಏಕೆ?

   ವರ್ಷಾನುಗಟ್ಟಲೆಯಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂಬುದು ಆ ಭಾಗದ ಜನರ ಆಕ್ರೋಶ ಅಲ್ಲದೆ ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೆಲವು ಉತ್ತರ ಕರ್ನಾಟಕದ ಮುಖಂಡರು ಉತ್ತರ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಬೇಕು ಎಂದು ಬೇಡಿಕೆ ಇಟ್ಟಿದ್ದರು.

   ಬೆಂಗಳೂರು ಬಿಟ್ಟು ಹೊರಟರೆ ಎಚ್ಡಿಕೆಗೆ ಸಿಎಂ ಸ್ಥಾನ ಹೋಗುತ್ತಾ?

   ಬಿಜೆಪಿಯ ಶ್ರೀರಾಮುಲು ಬೆಂಬಲ

   ಬಿಜೆಪಿಯ ಶ್ರೀರಾಮುಲು ಬೆಂಬಲ

   ಇತ್ತೀಚೆಗಷ್ಟೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಶ್ರೀರಾಮುಲು, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲ ನೀಡಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದರು.

   ತೃತೀಯ ರಂಗ ಮಳೆಗಾಲದ ಅಣಬೆ : ಶ್ರೀರಾಮುಲು ಅಣಕ

   ಸಾಹಿತಿ ಪಾಟೀಲ ಪುಟ್ಟಪ್ಪ ಬೆಂಬಲ

   ಸಾಹಿತಿ ಪಾಟೀಲ ಪುಟ್ಟಪ್ಪ ಬೆಂಬಲ

   ನಾಡಿನ ಹಿರಿಯ ಸಾಹಿತಿ ಪಾಟೀಲ ಪುಟ್ಟಪ್ಪ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಒತ್ತಾಯಿಸಿದ್ದರು. ಹಲವು ವರ್ಷಗಳಿಂದಲೂ ಸರ್ಕಾರಗಳು ಉ.ಕರ್ನಾಟಕವನ್ನು ನಿರ್ಲಕ್ಷಿಸಿದ್ದು, ಈಗಿರುವ ಸರ್ಕಾರ ಸಹ ಹಳೆ ಮೈಸೂರು ಸರ್ಕಾರ ಹಾಗಾಗಿ ನಮ್ಮ ಅಭಿವೃಧ್ಧಿಯನ್ನು ನಾವೇ ಮಾಡಿಕೊಳ್ಳಲು ಪ್ರತ್ಯೇಕ ರಾಜ್ಯ ಅವಶ್ಯಕತೆ ಇದೆ ಎಂದು ಅವರು ಪ್ರತಿಪಾದಿಸಿದ್ದರು.

   ಮಹದಾಯಿ ಹೋರಾಟದ ಅವಧಿಯ ಕೂಗು

   ಮಹದಾಯಿ ಹೋರಾಟದ ಅವಧಿಯ ಕೂಗು

   ಮಹದಾಯಿ ಹೋರಾಟ ಪ್ರಾರಂಭವಾದ ಸಮಯದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗಿಗೆ ಧನಿ ಬರಲು ಪ್ರಾರಂಭವಾಯಿತು. ಇತ್ತೀಚಿಗೆ ಕುಮಾರಸ್ವಾಮಿ ಬಜೆಟ್‌ ಮಂಡಿಸಿದ ನಂತರ ಈ ಕೂಗಿಗೆ ಇನ್ನಷ್ಟು ಬಲ ಬಂದಿದ್ದು, ಹಲವು ಮುಖಂಡರುಗಳು ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ.

   ಎಲ್ಲಾ ರಾಜಕೀಯ ಪಕ್ಷಗಳ ವಿರೋಧ

   ಎಲ್ಲಾ ರಾಜಕೀಯ ಪಕ್ಷಗಳ ವಿರೋಧ

   ರಾಜ್ಯದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಸಹ ಇದೊಂದು ತಪ್ಪಾದ ಬೇಡಿಕೆ ಎಂದಿತ್ತು. ಜೆಡಿಎಸ್‌ನ ವರಿಷ್ಠ ದೇವೇಗೌಡರು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

   ಸುಬ್ರಹ್ಮಣ್ಯಸ್ವಾಮಿ ಬೆಂಬಲ

   ಸುಬ್ರಹ್ಮಣ್ಯಸ್ವಾಮಿ ಬೆಂಬಲ

   ಕೊಡವರೂ ಸಹ ಹಲವು ವರ್ಷಗಳಿಂದ ಪ್ರತ್ಯೇಕ ಕೊಡವನಾಡು ಬೇಡಿಕೆಯನ್ನು ಇಡುತ್ತಲೇ ಬಂದಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ, ನೇರ ಮತ್ತು ನಿಷ್ಠುರ ಮಾತುಗಾರಿಕೆಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆಗೆ ಬೆಂಬಲ ನೀಡಿ ಬಿಜೆಪಿಗರಲ್ಲಿ ಮುಜುಗರ ಉಂಟು ಮಾಡಿದ್ದರು.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   BJP state president said that There is no consensus on the separate state issue. Nobody should talk about a separate state. If there is no development, work for the development of North Karnataka but separate state is not a solution.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more