{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/no-where-in-vedic-verses-told-brahmins-ate-beef-pejavara-seer-tell-ura-077830.html" }, "headline": "ಮಹಾಭಾರತದಲ್ಲಿ ಗೋಮಾಂಸದ ಬಗ್ಗೆ ಎಲ್ಲಿ ಹೇಳಿದ್ದಾರೆ?", "url":"http://kannada.oneindia.com/news/karnataka/no-where-in-vedic-verses-told-brahmins-ate-beef-pejavara-seer-tell-ura-077830.html", "image": { "@type": "ImageObject", "url": "http://kannada.oneindia.com/img/1200x60x675/2013/09/28-pejawar1.jpg", "width": "1200", "height":"675" }, "thumbnailUrl":"http://kannada.oneindia.com/img/128x50/2013/09/28-pejawar1.jpg", "datePublished": "2013-09-28T09:14:12+05:30", "dateModified": "2013-09-28T09:53:00+05:30", "author": { "@type": "Person", "name": "Srinath" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Districts", "description": "No where in Vedic verses told Brahmins ate beef- Pejavara Seer tells UR Ananthamurthy, ಗೋಮಾಂಸ: ಮಹಾಭಾರತದಲ್ಲಿ ಎಲ್ಹೇಳಿದ್ದಾರೆ ಮೂರ್ತಿಗಳೇ? ", "keywords": "No where in Vedic verses told Brahmins ate beef- Pejavara Seer tells UR Ananthamurthy, ಗೋಮಾಂಸ: ಮಹಾಭಾರತದಲ್ಲಿ ಎಲ್ಹೇಳಿದ್ದಾರೆ ಮೂರ್ತಿಗಳೇ? ", "articleBody":"ಉಡುಪಿ, ಸೆಪ್ಟೆಂಬರ್ 28: ವೇದಕಾಲದಲ್ಲಿ ಬ್ರಾಹ್ಮಣರು ಮಾಂಸಭಕ್ಷಕರಾಗಿದ್ದರು. ಯಜ್ಞ ಯಾಗಾದಿ ಸಂದರ್ಭಗಳಲ್ಲಿ ಗೋ ಹತ್ಯೆ ಮಾಡಲಾಗುತ್ತಿತ್ತು. ಜತೆಗೆ ಬ್ರಾಹ್ಮಣರು ಕೂಡಾ ಗೋಮಾಂಸ ಭಕ್ಷಕರಾಗಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜ್ಞಾನಪೀಠ ಪುರಸ್ಕೃತ, ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ಅವರು ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮತ್ತೊಂದು ವಿವಾದದ ಜೇನುಗೂಡಿಗೆ ಕಲ್ಲು ಹೊಡೆದಿದ್ದರು.ಆದರೆ ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ಸಾಕ್ಷಿ ಸಮೇತ ಅನಂತಮೂರ್ತಿಗಳ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು,ಮಹಾಭಾರತದಲ್ಲಿ ಎಲ್ಲಿ ಉಲ್ಲೇಖವಾಗಿದೆ ಹೇಳಿ ಮೂರ್ತಿಗಳೇ? ಎಂದು ಪ್ರಶ್ನಿಸಿದ್ದಾರೆ.ವೇದಗಳ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣ ಮಾಡುತ್ತಿದ್ದರು ಎಂದಿರುವ ಅನಂತಮೂರ್ತಿ ಅವರ ಹೇಳಿಕೆ ತಪ್ಪು. ತಮ್ಮ ಈ ಹೇಳಿಕೆಯನ್ನು ಅವರು ಪುನಃ ಪರಿಶೀಲಿಸಬೇಕು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.ಏಕೆಂದರೆ ಮಹಾಭಾರತವನ್ನು ಆಮೂಲಾಗ್ರವಾಗಿ ನಾನು ಅನೇಕ ಬಾರಿ ಓದಿಕೊಂಡಿದ್ದೇನೆ. ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು ಎಂದು ಮಹಾಭಾರತದಲ್ಲಿ ಭೀಷ್ಮ-ಯುಧಿಷ್ಠಿರ ಸಂವಾದದಲ್ಲಾಗಲಿ, ಬೇರೆ ಕಡೆಯಾಗಲಿ ಎಲ್ಲೂ ಹೇಳಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.ಗೋಮಾಂಸ ಭಕ್ಷಣೆ ಸಕಲರಿಗೂ ನಿಷೇಧ: ಅಷ್ಟೇ ಅಲ್ಲ ಮೂರ್ತಿಗಳೇ, ಯಜ್ಞದಲ್ಲಿ ಯಾವುದೇ ಪ್ರಾಣಿಯ ಮಾಂಸ ಉಪಯೋಗಿಸಬಾರದು ಎಂದು ಉಪರಿಚರವಸು ಪ್ರಕರಣದಲ್ಲಿ ಪ್ರತಿಪಾದಿಸಲಾಗಿದೆ. ನಿಮ್ಮ ಆದ್ಯ ಗಮನಕ್ಕಾಗಿ ಇನ್ನೂ ಹೇಳಬೇಕೆಂದರೆ ವೇದಪುರಾಣಗಳಲ್ಲಿ ಜಾತಿ ಭೇದವಿಲ್ಲದೆ ಗೋಮಾಂಸ ಭಕ್ಷಣವನ್ನು ಎಲ್ಲರಿಗೂ ನಿಷೇಧಿಸಲಾಗಿದೆ. ಹಾಗಾಗಿ, ಅನಂತಮೂರ್ತಿ ಅವರು ತಾವು ನೀಡಿರುವ ತಪ್ಪು ಹೇಳಿಕೆಯನ್ನು ಪುನಃ ಪರಿಶೀಲಿಸುವರೆಂದು ನಂಬಿದ್ದೇನೆ ಎಂದೂ ಪೇಜಾವರ ಶ್ರೀಗಳು ಆಶಿಸಿದ್ದಾರೆ.ಅನಂತ ಮೂರ್ತಿ ಹೇಳಿಕೆ ವಾಪಸ್?: ಹಾಗಾದರೆ ಅನಂತಮೂರ್ತಿಯವರು ತಮ್ಮ (ತಪ್ಪು) ಹೇಳಿಕೆಯನ್ನು ಪುನರ್ ಪರಿಶೀಲಿಸಿ, ವಾಪಸ್ ಪಡೆಯುತ್ತಾರಾ? ಮಹಾಭಾರತಕ್ಕೆ ಮತ್ತು ಬ್ರಾಹ್ಮಣರಿಗೆ ಮಾಡಿರುವ ಅಪಚಾರವನ್ನು ಸರಿಪಡಿಸುತ್ತಾರಾ? ಕಾದುನೋಡಬೇಕು." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಭಾರತದಲ್ಲಿ ಗೋಮಾಂಸದ ಬಗ್ಗೆ ಎಲ್ಲಿ ಹೇಳಿದ್ದಾರೆ?

By Srinath
|
Google Oneindia Kannada News

ಉಡುಪಿ, ಸೆಪ್ಟೆಂಬರ್ 28: 'ವೇದಕಾಲದಲ್ಲಿ ಬ್ರಾಹ್ಮಣರು ಮಾಂಸಭಕ್ಷಕರಾಗಿದ್ದರು. ಯಜ್ಞ ಯಾಗಾದಿ ಸಂದರ್ಭಗಳಲ್ಲಿ ಗೋ ಹತ್ಯೆ ಮಾಡಲಾಗುತ್ತಿತ್ತು. ಜತೆಗೆ ಬ್ರಾಹ್ಮಣರು ಕೂಡಾ ಗೋಮಾಂಸ ಭಕ್ಷಕರಾಗಿದ್ದರು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜ್ಞಾನಪೀಠ ಪುರಸ್ಕೃತ, ಹಿರಿಯ ಸಾಹಿತಿ ಡಾ. ಯುಆರ್ ಅನಂತಮೂರ್ತಿ ಅವರು ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮತ್ತೊಂದು ವಿವಾದದ ಜೇನುಗೂಡಿಗೆ ಕಲ್ಲು ಹೊಡೆದಿದ್ದರು.

ಆದರೆ ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ಸಾಕ್ಷಿ ಸಮೇತ ಅನಂತಮೂರ್ತಿಗಳ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು,ಮಹಾಭಾರತದಲ್ಲಿ ಎಲ್ಲಿ ಉಲ್ಲೇಖವಾಗಿದೆ ಹೇಳಿ ಮೂರ್ತಿಗಳೇ? ಎಂದು ಪ್ರಶ್ನಿಸಿದ್ದಾರೆ.

No where in Vedic verses told Brahmins ate beef- Pejavara Seer tells UR Ananthamurthy,

ವೇದಗಳ ಕಾಲದಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣ ಮಾಡುತ್ತಿದ್ದರು ಎಂದಿರುವ ಅನಂತಮೂರ್ತಿ ಅವರ ಹೇಳಿಕೆ ತಪ್ಪು. ತಮ್ಮ ಈ ಹೇಳಿಕೆಯನ್ನು ಅವರು ಪುನಃ ಪರಿಶೀಲಿಸಬೇಕು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದ್ದಾರೆ.

ಏಕೆಂದರೆ 'ಮಹಾಭಾರತವನ್ನು ಆಮೂಲಾಗ್ರವಾಗಿ ನಾನು ಅನೇಕ ಬಾರಿ ಓದಿಕೊಂಡಿದ್ದೇನೆ. ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರು ಎಂದು ಮಹಾಭಾರತದಲ್ಲಿ ಭೀಷ್ಮ-ಯುಧಿಷ್ಠಿರ ಸಂವಾದದಲ್ಲಾಗಲಿ, ಬೇರೆ ಕಡೆಯಾಗಲಿ ಎಲ್ಲೂ ಹೇಳಿಲ್ಲ' ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

ಗೋಮಾಂಸ ಭಕ್ಷಣೆ ಸಕಲರಿಗೂ ನಿಷೇಧ:
'ಅಷ್ಟೇ ಅಲ್ಲ ಮೂರ್ತಿಗಳೇ, ಯಜ್ಞದಲ್ಲಿ ಯಾವುದೇ ಪ್ರಾಣಿಯ ಮಾಂಸ ಉಪಯೋಗಿಸಬಾರದು ಎಂದು ಉಪರಿಚರವಸು ಪ್ರಕರಣದಲ್ಲಿ ಪ್ರತಿಪಾದಿಸಲಾಗಿದೆ. ನಿಮ್ಮ ಆದ್ಯ ಗಮನಕ್ಕಾಗಿ ಇನ್ನೂ ಹೇಳಬೇಕೆಂದರೆ ವೇದಪುರಾಣಗಳಲ್ಲಿ ಜಾತಿ ಭೇದವಿಲ್ಲದೆ ಗೋಮಾಂಸ ಭಕ್ಷಣವನ್ನು ಎಲ್ಲರಿಗೂ ನಿಷೇಧಿಸಲಾಗಿದೆ. ಹಾಗಾಗಿ, ಅನಂತಮೂರ್ತಿ ಅವರು ತಾವು ನೀಡಿರುವ ತಪ್ಪು ಹೇಳಿಕೆಯನ್ನು ಪುನಃ ಪರಿಶೀಲಿಸುವರೆಂದು ನಂಬಿದ್ದೇನೆ' ಎಂದೂ ಪೇಜಾವರ ಶ್ರೀಗಳು ಆಶಿಸಿದ್ದಾರೆ.

ಅನಂತ ಮೂರ್ತಿ ಹೇಳಿಕೆ ವಾಪಸ್?: ಹಾಗಾದರೆ ಅನಂತಮೂರ್ತಿಯವರು ತಮ್ಮ (ತಪ್ಪು) ಹೇಳಿಕೆಯನ್ನು ಪುನರ್ ಪರಿಶೀಲಿಸಿ, ವಾಪಸ್ ಪಡೆಯುತ್ತಾರಾ? ಮಹಾಭಾರತಕ್ಕೆ ಮತ್ತು ಬ್ರಾಹ್ಮಣರಿಗೆ ಮಾಡಿರುವ ಅಪಚಾರವನ್ನು ಸರಿಪಡಿಸುತ್ತಾರಾ? ಕಾದುನೋಡಬೇಕು.

English summary
Udupi Pejavara matt Seer has said that Writer Dr UR Ananthamurthy has misquoted Vedic verses and humiliated Brahmin community. Prof. UR Ananthamurthy had said that Brahmins ate Beef during Vedic period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X