ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೋಲು ಬಡಿಯುವ ಮುಂಚೆ ಕೋಲು ಇದೆಯೇ ನೋಡಿಕೊಳ್ಳಬೇಕು ಕಣ್ರೀ!

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಭಾರೀ ಮೈಲೇಜ್ ಅನ್ನು ಪಡೆದುಕೊಂಡಿದ್ದ ಪ್ರಧಾನಿ ಮೋದಿಯವರ ಹದಿನೆಂಟು ವರ್ಷ ಮೇಲ್ಪಟ್ಟವರಿಗೆ ಮೇ ಒಂದರಿಂದ ಲಸಿಕೆ ಅಭಿಯಾನ ಠುಸ್ ಆಗಿದೆ. ಯುವ ಸಮುದಾಯದಿಂದ ಲಸಿಕೆ ಹಾಕಿಸಿಕೊಳ್ಳಲು ಉತ್ತಮ ಸ್ಪಂದನೆ ಸಿಕ್ಕಿತ್ತು.

"ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನ ಅಧಿಕೃತವಾಗಿ ನಾವೇ ತಿಳಿಸುತ್ತೇವೆ"ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಆ ಮೂಲಕ, ಈ ಅಭಿಯಾನ ನಾಳೆಯಿಂದ ರಾಜ್ಯದಲ್ಲಿ ಆರಂಭವಾಗುತ್ತಿಲ್ಲ.

ಒನ್ಇಂಡಿಯಾ ಫಲಶ್ರುತಿ: ಸುಧಾಕರ್‌ರಿಂದ ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್ಒನ್ಇಂಡಿಯಾ ಫಲಶ್ರುತಿ: ಸುಧಾಕರ್‌ರಿಂದ ಕೊರೊನಾ ಸೋಂಕಿತರಿಗೆ ಗುಡ್ ನ್ಯೂಸ್

ಸರಕಾರದ ನಿರ್ಧಾರವನ್ನು ಕೆಪಿಸಿಸಿ ಕಟು ಶಬ್ದಗಳಿಂದ ಟೀಕಿಸಿದೆ. ಈ ಬಗ್ಗೆ ಕೆಪಿಸಿಸಿ ಮಾಡಿದ ಟ್ವೀಟ್ ಹೀಗಿದೆ, " @mla_sudhakar ಅವರೇ, ಡೋಲು ಬಡಿಯುವ ಮುಂಚೆ ಕೋಲು ಇದೆಯೇ ನೋಡಿಕೊಳ್ಳಬೇಕು ಕಣ್ರೀ!" ಎಂದು ಲೇವಡಿ ಮಾಡಿದೆ.

No Vaccination From May 1st For Above 18 Years: KPCC Tweet

"ಕಂಪೆನಿಗಳು ಆರ್ಡರ್ ಪೂರೈಸುವ ಭರವಸೆ ನೀಡಿಲ್ಲ, ನೀವು ದಾಸ್ತಾನು ಇಟ್ಟಿಲ್ಲ, ಕೇಂದ್ರವೂ ಕೊಟ್ಟಿಲ್ಲ, ಲಸಿಕೆ ಎಷ್ಟು ಸಿಗುತ್ತದೆ ಎನ್ನುವ ಅಂದಾಜು ನಿಮಗಿಲ್ಲ, ಹೀಗಿರುವಾಗ ಯಾವ ಆಧಾರದಲ್ಲಿ ಅಭಿಯಾನದ ಬಡಾಯಿ ಕೊಚ್ಚಿದಿರಿ, ಲಸಿಕೆ ಪಡೆಯಲು ಕರೆ ಕೊಟ್ಟಿರಿ?"ಎಂದು ಕೆಪಿಸಿಸಿ ಟ್ವೀಟ್ ಮೂಲಕ ಆರೋಗ್ಯ ಸಚಿವರನ್ನು ಪ್ರಶ್ನಿಸಿದೆ.

"ಮೂರ್ಖರ ಸರ್ಕಾರದ ಲಸಿಕೆ ಅಭಿಯಾನವೋ, ಲಸಿಕೆ ಅಧ್ವಾನವೋ?! ಲಸಿಕೆ ನೀಡಲು ಮಾಡಿಕೊಂಡ ತಯಾರಿ ಏನೆಂದು ನಾವು ಮೊದಲಿಂದಲೂ ಕೇಳುತ್ತಾ ಬಂದಿದ್ದೇವೆ. ಸರ್ಕಾರ ತಯಾರಿ ಇಲ್ಲದೆ ರಾಜ್ಯದ ಜನರನ್ನು ಮೂರ್ಖರನಾಗಿಸುತ್ತಿದೆ, ರಾಜ್ಯಗಳ ಮೇಲೆ ಹೊರೆ ಹೊರಿಸಿ ಕೇಂದ್ರ ಜಾರಿಕೊಂಡಿದೆ @BJP4Karnataka ನಿಮ್ಮದು ಕೈಲಾಗದ ಸರ್ಕಾರವೆನ್ನಲು ಈ ವೈಫಲ್ಯವೇ ಸಾಕು"ಎಂದು ಕೆಪಿಸಿಸಿ ಟ್ವೀಟ್ ಮೂಲಕ ಲೇವಡಿ ಮಾಡಿದೆ.

ಕೂರೊನಾ ಸಾವಿನಲ್ಲಿ ತಪ್ಪು ಲೆಕ್ಕ: ಬಿಬಿಎಂಪಿ ಆಯುಕ್ತರ ಸ್ಪಷ್ಟನೆಕೂರೊನಾ ಸಾವಿನಲ್ಲಿ ತಪ್ಪು ಲೆಕ್ಕ: ಬಿಬಿಎಂಪಿ ಆಯುಕ್ತರ ಸ್ಪಷ್ಟನೆ

Recommended Video

ExitPolls : ಪಂಚರಾಜ್ಯಗಳ ಕದನದ ಚುನಾವಣೋತ್ತರ ಸಮೀಕ್ಷೆ ಬಹಿರಂಗ..! | Oneindia Kannada

"ಜನರ ಜೀವನಕ್ಕೆ ಮಣ್ಣು, ಜೀವಕ್ಕೆ ಬೆಂಕಿ' ಇದೇ ಈ ಸರ್ಕಾರದ ಸಾಧನೆ. @BSYBJP ಅವರೇ ಹಸಿವು ಕೊಲ್ಲುತ್ತಿದೆ ಕೂಡಲೇ ಅನ್ನಭಾಗ್ಯದ ಅಕ್ಕಿ 10 ಕೆಜಿಗೆ ಏರಿಸಿ, ಇಲ್ಲದೆ ಹೋದಲ್ಲಿ ಸೋಂಕಿತರ ಸಾವುಗಳೊಂದಿಗೆ ಹಸಿದವರ ಸಾವೂ ಸೇರಲಿದೆ, ನಿಮ್ಮ ಮಸಣಗಳು ಸಾಲುವುದಿಲ್ಲ. ಈ ಮನಕಲುಕುವ ಘಟನೆ ಕಂಡೂ ಸುಮ್ಮನಿದ್ದರೆ ಕ್ಷಮೆ ಇರುವುದಿಲ್ಲ" ಎಂದು ಕೆಪಿಸಿಸಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದೆ.

English summary
No Vaccination From May 1st For Above 18 Years, Health Minister Dr. Sudhakar Confirmed: KPCC Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X