ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ವಿವಿಗಳಲ್ಲಿ ಶುಲ್ಕ ವಸೂಲಿ ವಿಭಿನ್ನ: ಏನಿದು ಸಮಸ್ಯೆ?

By Nayana
|
Google Oneindia Kannada News

ಬೆಂಗಳೂರು, ಜುಲೈ 2: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಏಕರೂಪ ಶುಲ್ಕ ನಿಗದಿಗೆ ವಿವಿಗಳು ಒಪ್ಪಿಗೆ ನೀಡುತ್ತಿಲ್ಲ. ಉನ್ನತ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏಕರೂಪ ಶೈಕ್ಷಣಿಕ ದಿನಚರಿ ಮತ್ತು ಶುಲ್ಕ ನಿಗದಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಆ ಸೂಚನೆ ಕುರಿತು ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿಲ್ಲ.

ರಾಜ್ಯದಲ್ಲಿ 27 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು, ಅನುಕೂಲಕ್ಕೆ ತಕ್ಕಂತೆ ಪ್ರವೇಶ, ಪರೀಕ್ಷೆ ಮೌಲ್ಯಮಾಪನ ನಡೆಸುತ್ತಿದೆ. ಏಕರೂಪ ದಿನಚರಿ ಪ್ರಕಾರ ರಾಜ್ಯದ ಎಲ್ಲಾ ಪದವಿ ಕಾಲೇಜುಗಳು ಮೊದಲು ದ್ವಿತೀಯ ಮತ್ತು ತೃತೀಯ ವರ್ಷದ ತರಗತಿಗಳನ್ನು ಜೂ.15ರಿಂದ 30ರೊಳಗೆ ಆರಂಭಿಸಬೇಕು ಆದರೆ ಬಹುತೇಕ ವಿವಿಗಳು ಇದನ್ನು ಉಲ್ಲಂಘಿಸಿದೆ.

ಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ ನಡೆದಿಲ್ಲಮೈಸೂರು ವಿವಿ ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಅಕ್ರಮ ನಡೆದಿಲ್ಲ

ಬೆಂಗಳೂರು ವಿವಿ 1,3,5ನೇ ಸೆಮಿಸ್ಟರ್‌ ತರಗತಿಗಳನ್ನು ಜು.2ರಿಂದ ಆರಂಭಿಸಲು ಅಧಿಸೂಚನೆ ಹೊರಡಿಸಿದೆ. 15 ದಿನಗಳು ವಿಳಂಬವಾಗಿ ಪ್ರಾರಂಭಿಸುತ್ತಿದೆ. ಇದರಿಂದ ಇತರೆ ಎಲ್ಲ ಶೈಕ್ಷಣಿಕ ಕಾರ್ಯಗಳು ಮುಂದಕ್ಕೆ ಹೋಗಲಿದೆ.

No uniform fees structure and calender of events in states Universities

ವಿವಿಗಳು ತಮ್ಮ ಮನಸ್ಸಿಗೆ ಬಂದಂತೆ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಬಿಡ ಪದವಿಗಳ ಪರೀಕ್ಷಾ ಶುಲ್ಕ 650 ಇದ್ದರೆ ತುಮಕೂರು ವಿಶ್ವವಿದ್ಯಾಲಯದಲ್ಲಿ 900 ಇದೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮರು ಮೌಲ್ಯಮಾಪನಕ್ಕೆ 1 ಸಾವಿರ ರೂ.. ನಿಗದಿ ಪಡಿಸಿದರೆ ಕರ್ನಾಟಕ ವಿವಿಯಲ್ಲಿ 485 ರೂ. ಇದೆ.

English summary
Even though the act regarding fees structure and calendar of events in the state's universities was accepted in state assembly, the same was not implemented in the universities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X