ಏಪ್ರಿಲ್‌ನಲ್ಲಿ ಸರ್ಕಾರದಿಂದ ಸಕ್ಕರೆ ಭಾಗ್ಯವಿಲ್ಲ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07 : ಯುಗಾದಿ ಹಬ್ಬದ ಹಿಂದಿನ ದಿನ ಸರ್ಕಾರ ಜನರಿಗೆ ಕಹಿ ಸುದ್ದಿ ನೀಡಿದೆ. ಏಪ್ರಿಲ್ ತಿಂಗಳಿನಲ್ಲಿ ಪಡಿತರ ವಿತರಣೆ ಮಾಡುವಾಗ ಸಕ್ಕೆರೆಯನ್ನು ನೀಡಲಾಗುವುದಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಏಪ್ರಿಲ್ ತಿಂಗಳಿಗಾಗಿ ಸರ್ಕಾರ ಸಕ್ಕರೆ ಖರೀದಿ ಮಾಡಿಲ್ಲ. ಆದ್ದರಿಂದ ರಾಜ್ಯಾದ್ಯಂತ ಏಪ್ರಿಲ್ ತಿಂಗಳ ಪಡಿತರ ವಿತರಣೆ ಮಾಡುವಾಗ ಸಕ್ಕರೆ ನೀಡಲಾಗುವುದಿಲ್ಲ ಎಂದು ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. [ಜನರ ಪಾಲಿಗೆ ಕಹಿಯಾಗಲಿದೆ ಸಕ್ಕರೆ]

sugar

ಮೇ ತಿಂಗಳ ಪಡಿತರ ವಿತರಣೆ ಮಾಡುವಾಗ ಏಪ್ರಿಲ್ ತಿಂಗಳ ಸಕ್ಕರೆಯನ್ನು ಜೊತೆಗೆ ನೀಡಲಾಗುತ್ತದೆ ಎಂದು ಇಲಾಖೆ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ, ಈ ತಿಂಗಳು ಪಡಿತರ ಸಕ್ಕರೆಗಾಗಿ ಕಾಯುವ ಬದಲು ಅಂಗಡಿಯಲ್ಲಿ ಖರೀದಿ ಮಾಡುವುದು ಅನಿವಾರ್ಯವಾಗಿದೆ. [ಪಡಿತರದ ಜೊತೆ ಸಿಗಲಿದೆ ಬೇಳೆ, ತಾಳೆ ಎಣ್ಣೆ, ಉಪ್ಪು]

ಕೊರತೆ ಏಕೆ? : ಏಪ್ರಿಲ್ ತಿಂಗಳಲ್ಲಿ ಸಕ್ಕರೆ ವಿತರಣೆ ಮಾಡಲು ಸರ್ಕಾರ ಇ-ಹರಾಜು ಕರೆದಿತ್ತು. ಒಬ್ಬರು ಪೂರೈಕೆದಾರರು ಮಾತ್ರ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಅವರು, ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಬೆಲೆ ನಮೂದಿಸಿದ್ದರು. ಆದ್ದರಿಂದ ಖರೀದಿ ನಡೆದಿಲ್ಲ. [ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]

ಬಿಪಿಎಲ್‌, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಸುಮಾರು 1.8 ಕೋಟಿ ಕುಟುಂಬಗಳಿಗೆ ಸರ್ಕಾರ ಪ್ರತಿ ತಿಂಗಳು ಪಡಿತರ ವಿತರಣೆ ಮಾಡುವಾಗ ಸಕ್ಕರೆ ನೀಡುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sugar will not be sold through the public distribution system (PDS) in April, 2016 throughout Karnataka.
Please Wait while comments are loading...