ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Zero Shadow Day : ನೆರಳೇ ಕಾಣಿಸಲ್ಲ: ಏ. 25 ಶೂನ್ಯ ನೆರಳಿನ ದಿನ- ಆಸಕ್ತಿ ಇದ್ದವರಿಗೆ 2 ದಿನ ವರ್ಕ್‌ಶಾಪ್

|
Google Oneindia Kannada News

ಬೆಂಗಳೂರು, ಏ. 23: ನಾಳೆಯಿಂದ ವಿವಿಧ ಸ್ಥಳಗಳಲ್ಲಿ ವಿವಿಧ ದಿನಗಳಂದು ಒಮ್ಮೆ ನೆರಳು ಮರೆಯಾಗಿ ಹೋಗುವ ನೈಸರ್ಗಿಕ ವಿಸ್ಮಯಕ್ಕೆ ನಾವು ಸಾಕ್ಷಿಗಳಾಗಬಹುದು. ಸೂರ್ಯ ನಮ್ಮ ನೆತ್ತಿಯ ಮೇಲೆ ಹಾದುಹೋಗುವಾಗ ಮಧ್ಯಾಹ್ನದ ನಿರ್ದಿಷ್ಟ ಸಮಯವೊಂದರಲ್ಲಿ ನೆರಳು ಶೂನ್ಯವಾಗುತ್ತದೆ. ಇದನ್ನ ಝೀರೋ ಶ್ಯಾಡೋ (Zero Shadow) ಅಥವಾ ಶೂನ್ಯ ನೆರಳು ಎಂದು ಕರೆಯುತ್ತೇವೆ. ಈ ವರ್ಷ 2022ರಲ್ಲಿ ಏಪ್ರಿಲ್ 25 ಅನ್ನು ಶೂನ್ಯ ನೆರಳಿನ ದಿನ (Zero Shadow Day) ಎಂದು ಆಚರಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಏಪ್ರಿಲ್ 25ರಂದು ಮಧ್ಯಾಹ್ನ 12:17ಕ್ಕೆ ನೆರಳು ಮರೆಯಾಗುವುದನ್ನು ಕಾಣಬಹುದು. ಈ ಅಚ್ಚರಿಯನ್ನ ವೀಕ್ಷಿಸಲು ನಿಮಗೆ ಯಾವುದೇ ಗ್ಯಾಜೆಟ್ ಅಗತ್ಯ ಇರುವುದಿಲ್ಲ. ಬರಿಗಣ್ಣಿನಲ್ಲೇ ನೋಡಿ ಬೆರಗಾಗಬಹುದು.

ಮಾಲ್ಡೀವ್ಸ್‌ನಲ್ಲಿ ಇಂಡಿಯಾ ಔಟ್ ಅಭಿಯಾನ; ಅಲ್ಲೂ ನಡೆದಿದೆಯಾ ರಾಜಕಾರಣ!?ಮಾಲ್ಡೀವ್ಸ್‌ನಲ್ಲಿ ಇಂಡಿಯಾ ಔಟ್ ಅಭಿಯಾನ; ಅಲ್ಲೂ ನಡೆದಿದೆಯಾ ರಾಜಕಾರಣ!?

ಸೂರ್ಯ ಉತ್ತರ ದಿಕ್ಕಿನತ್ತ ಚಲಿಸುತ್ತಾ ಜೂನ್ 22ರಂದು ಗರಿಷ್ಠ ದೂರವನ್ನು ಮುಟ್ಟುತ್ತದೆ. ಆಗ ಭೂಮಿಯ ಸಮಭಾಜಕತ್ವ ವೃತ್ತದಿಂದ (Equator) ಕರ್ಕಾಟಕ ಸಂಕ್ರಾಂತಿ ವೃತ್ತದವರೆಗಿನ (Tropic of Cancer) ಪ್ರದೇಶಗಳಲ್ಲಿ ನೆಲದ ಮೇಲಿರುವ ಯಾವುದೇ ವಸ್ತುವಿನ ನೆರಳು ಸರಿಯಾಗಿ ಲಂಬ ಕೋನ ತಲುಪುತ್ತದೆ. ಆಗ ನೆರಳು ಮರೆಯಾದಂತೆ ತೋರುತ್ತದೆ. ನೆರಳು ಕಾಣಿಸದೇ ಹೋಗುವುದರಿಂದ ಶೂನ್ಯ ನೆರಳು ಎಂದು ಬಣ್ಣಿಸುತ್ತಾರೆ.

No Shadow, Know about zero shadow start from April 24 to May 11, online workshops and other details

ಉತ್ತರ ದಿಕ್ಕಿನ ತುದಿಯಿಂದ ಸೂರ್ಯ ವಾಪಸ್ ದಕ್ಷಿಣದತ್ತ ಬರತೊಡಗುತ್ತದೆ. ಇದನ್ನೇ ದಕ್ಷಿಣಾಯನ (Summer Solstice) ಅಂತ ಕರೆಯುವುದು. ದಕ್ಷಿಣದತ್ತ ಬರುವ ಸೂರ್ಯ ಒಂದು ನಿರ್ದಿಷ್ಷ ದಿನದಂದು ಮತ್ತೆ ಸರಿಯಾಗಿ ನೆತ್ತಿಗೆ ಬರುತ್ತದೆ. ಆಗಲೂ ಕೂಡ ನೆರಳು ಶೂನ್ಯಗೊಳ್ಳುತ್ತದೆ. ಇದೂ ಕೂಡ ಈಕ್ವಟರ್ ಮತ್ತು ಟ್ರಾಪಿಕ್ ಆಫ್ ಕ್ಯಾನ್ಸರ್ ನಡುವಿನ ಪ್ರದೇಶಗಳಲ್ಲಿ ಸಂಭವಿಸುತ್ತದೆ.

ಅಂದರೆ ಒಂದು ಸ್ಥಳದಲ್ಲಿ ವರ್ಷಕ್ಕೆ ಎರಡು ದಿನಗಳಂದು ಶೂನ್ಯ ನೆರಳಿಗೆ ನಾವು ಸಾಕ್ಷಿಯಾಗಬಹುದು. ಬೆಂಗಳೂರಿನಲ್ಲಿ ಏ. 25 ಮತ್ತು ಆಗಸ್ಟ್ 19ರಂದು ಎರಡು ದಿನಗಳು ಶೂನ್ಯ ನೆರಳಿರುತ್ತದೆ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಈ ನೈಸರ್ಗಿಕ ಅಚ್ಚರಿಯ ದೃಶ್ಯಗಳನ್ನ ಕಾಣಬಹುದು. ಮಧ್ಯಾಹ್ನ 11:55ರಿಂದ 12:25ರವರೆಗೆ ಒಂದೊಂದು ಸ್ಥಳದಲ್ಲಿ ಒಂದೊಂದು ಸಮಯದಲ್ಲಿ ಶೂನ್ಯ ನೆರಳು ಇರುತ್ತದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಯಾವ್ಯಾವ ದಿನಗಳಂದು ಝೀರೋ ಶ್ಯಾಡೋ ಇರುತ್ತದೆ ಎಂಬ ಮಾಹಿತಿಯ ಪಟ್ಟಿ ಈ ಕೆಳಗಿದೆ.

No Shadow, Know about zero shadow start from April 24 to May 11, online workshops and other details

ಸ್ಥಳ ಮತ್ತು ದಿನಗಳು:
ಬಾಗಲಕೋಟೆ: 5/5, 8/8
ಬೆಂಗಳೂರು: 25/4, 17/4
ಬೆಳಗಾವಿ: 3/5, 9/8
ಬಳ್ಳಾರಿ: 1/5, 11/8
ಬೀದರ್: 11/5, 1/8
ಬಿಜಾಪುರ: 7/5, 5/8
ಚಾಮರಾಜನಗರ: 21/4, 22/8
ಚಿಕ್ಕಬಳ್ಳಾಪುರ: 25/4, 17/8
ಚಿಕ್ಕಮಗಳೂರು: 25/4, 17/8
ಚಿತ್ರದುರ್ಗ: 28/4, 15/8
ದಾವಣಗೆರೆ: 29/4, 13/8
ಧಾರವಾಡ: 2/5, 10/8
ಗದಗ: 2/5, 10/8
ಹಾವೇರಿ: 30/4, 12/8
ಕಲಬುರ್ಗಿ: 9/5, 4/8
ಹಾಸನ: 24/4, 18/8
ಕಾರವಾರ: 30/4, 13/8
ಕೋಲಾರ: 24/4, 18/8
ಕೊಪ್ಪಳ: 2/5, 11/8
ಮಡಿಕೇರಿ: 22/4, 20/8
ಮಂಡ್ಯ: 23/4, 19/8
ಮೈಸೂರು: 22/4, 20/8
ರಾಯಚೂರು: 5/5, 8/8
ಶಿವಮೊಗ್ಗ: 27/4, 15/8
ತುಮಕೂರು: 25/4, 17/8
ಉಡುಪಿ: 25/4, 17/8

ಗಂಡ ಇರಲಿ; ಅವನೂ ಬರಲಿ: ಪತಿಗೆ ವಂಚಿಸುವುದರಲ್ಲಿ ಬೆಂಗಳೂರಿಗರೇ ಟಾಪ್!ಗಂಡ ಇರಲಿ; ಅವನೂ ಬರಲಿ: ಪತಿಗೆ ವಂಚಿಸುವುದರಲ್ಲಿ ಬೆಂಗಳೂರಿಗರೇ ಟಾಪ್!

ಬೆಂಗಳೂರಿನಲ್ಲಿ ವರ್ಕ್‌ಶಾಪ್:
ಶೂನ್ಯ ನೆರಳೆಂಬ ನೈಸರ್ಗಿಕ ವಿಸ್ಮಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸ್ತಿ ಇದ್ದವರಿಗೆ ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದಿಂದ ಎರಡು ದಿನ ಕಾರ್ಯಾಗಾರ ನಡೆಸಲಾಗುತ್ತಿದೆ. ಇಂದು ಮತ್ತು ನಾಳೆ, ಆನ್‌ಲೈನ್‌ನಲ್ಲೇ ನಡೆಯುತ್ತಿರುವ ಈ ಕಾರ್ಯಾಗಾರ ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಇರುತ್ತದೆ.

ಭೂಮಿಯ ತಿರುಗಿವಿಕೆ, ಸಮಭಾಜಕತ್ವ ರೇಖೆ, ಟ್ರಾಪಿಕ್ ಆಫ್ ಕ್ಯಾನ್ಸರ್ ಇತ್ಯಾದಿ ಬಗ್ಗೆ ಸರಳವಾಗಿ ವಿವರಣೆ ಕೊಡಲಾಗುತ್ತದೆ. ಈ ಸುದ್ದಿ ಪ್ರಕಟವಾಗುವಷ್ಟರಲ್ಲಿ ಕಾರ್ಯಾಗಾರ ಆರಂಭವಾಗಿರುತ್ತದೆ. ನೀವು ಕಾರ್ಯಾಗಾರ ಮಿಸ್ ಮಾಡಿಕೊಳ್ಳುತ್ತಿದ್ದಲ್ಲಿ ಆಗಸ್ಟ್ ತಿಂಗಳಲ್ಲಿ ಮತ್ತೆ ಕಾಣಿಸುವ ಶೂನ್ಯ ನೆರಳಿಗೆ ಮೂರ್ನಾಲ್ಕು ದಿನ ಮುನ್ನ ಪ್ಲಾನಿಟೋರಿಯಂನಿಂದ ಕಾರ್ಯಾಗಾರ ಏರ್ಪಡಿಸಲಾಗುತ್ತದೆ.

ನೀವು ಸಿನಿಮಾ ಟಿಕೆಟ್ ಬುಕ್ ಮಾಡುವ ಬುಕ್ ಮೈ ಶೋ ಆ್ಯಪ್‌ನಿಂದಲೇ ಈ ಕಾರ್ಯಾಗಾರಕ್ಕೆ ನೊಂದಾಯಿಸಬಹುದು. ಪ್ರತಿಯೊಬ್ಬ ವ್ಯಕ್ತಿಗೂ 100 ರೂ ಮಾತ್ರ ಶುಲ್ಕ ಇರುತ್ತದೆ. ಕೇವಲ 35 ಮಂದಿಗೆ ಅವಕಾಶ ಇದ್ದು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಅವಕಾಶ ಕೊಡಲಾಗುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Zero shadow occurs when Sun comes at exact top so that shadow falls exact perpendicularly. Bengaluru will see no shadow on April 24th, 12:17pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X