ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಕ್ಷೇತ್ರದ ಖಾಸಗೀಕರಣವಿಲ್ಲ; ಸಚಿವ ವಿ. ಸುನೀಲ್ ಕುಮಾರ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17; "ವಿದ್ಯುತ್ ಪಂಪ್‌ಸೆಟ್‌ಗಳಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಹಾಗೂ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡುವ ಪ್ರಸ್ತಾಪವಿಲ್ಲ" ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಸಚಿವರು ಕಾಂಗ್ರೆಸ್‌ನ ಯಶವಂತರಾಯ ಗೌಡ ಪಾಟೀಲ ಪ್ರಶ್ನೆಗೆ ಉತ್ತರ ನೀಡಿದರು. "ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ" ಎಂದು ಹೇಳಿದರು.

ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯ: ಇಂಧನ ಸಚಿವ ಭವಿಷ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಅನಿವಾರ್ಯ: ಇಂಧನ ಸಚಿವ

"ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಳ್ಳುತ್ತಿದೆ. ಉಚಿತ ವಿದ್ಯುತ್ ಸಿಗುವುದಿಲ್ಲ ಎಂದು ರೈತರು ಸಹ ಆತಂಕಗೊಂಡಿದ್ದಾರೆ. ಸರ್ಕಾರ ಈ ಕುರಿತು ಉಂಟಾಗಿರುವ ಗೊಂದಲವನ್ನು ನಿವಾರಣೆ ಮಾಡಬೇಕು" ಎಂದು ಯಶವಂತರಾಯ ಗೌಡ ಪಾಟೀಲ ಆಗ್ರಹಿಸಿದರು.

ಕರ್ನಾಟಕ; ಇಡೀ ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ ಕರ್ನಾಟಕ; ಇಡೀ ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ

Sunil Kumar

"ಸರ್ಕಾರಿ ಕಚೇರಿಗಳಲ್ಲಿ ಪ್ರಿಪೇಯ್ಡ್ ಮೀಟರ್ ಅಳವಡಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಕಚೇರಿಗಳಿಂದ 5,792 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಇಷ್ಟು ಮೊತ್ತ ಬಾಕಿ ಉಳಿದರೆ ಇಲಾಖೆ ಸುಧಾರಣೆ ಮಾಡುವುದು ಹೇಗೆ?" ಎಂದು ಸಚಿವರು ಪ್ರಶ್ನಿಸಿದರು.

ಖಾಸಗೀಕರಣ: 8 ಸಚಿವಾಲಯಗಳಿಂದ ಆಸ್ತಿ ಮಾರಾಟಕ್ಕೆ ಪಟ್ಟಿ ಸಿದ್ಧ!ಖಾಸಗೀಕರಣ: 8 ಸಚಿವಾಲಯಗಳಿಂದ ಆಸ್ತಿ ಮಾರಾಟಕ್ಕೆ ಪಟ್ಟಿ ಸಿದ್ಧ!

"27 ಅಮೃತ ನಗರ/ ಪಟ್ಟಣಗಳಲ್ಲಿ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸಹ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಹಾಗೂ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಮಾಡುವ ಪ್ರಸ್ತಾವನೆ ಇಲ್ಲ" ಎಂದು ಸಚಿವ ವಿ. ಸುನೀಲ್ ಕುಮಾರ್ ಉತ್ತರ ನೀಡಿದರು.

ಸಚಿವರು ಉತ್ತರ ನೀಡುವಾಗಲೇ ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಸದಸ್ಯರು ಕಾಫಿ ಬೆಳೆಗಾರರ 10 ಎಚ್. ಡಿ. ವರೆಗಿನ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. "ಈ ಕುರಿತು ಹಣಕಾಸು ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಸಚಿವರ ಭರವಸೆ ಕೊಟ್ಟರು.

ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜಿ. ಕುರುಣಾಕರ ರೆಡ್ಡಿ ಮಾತನಾಡಿ, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಳಾದರೆ ತಕ್ಷಣ ಬದಲಾವಣೆ ಮಾಡಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು. "ವಿದ್ಯುತ್ ಪರಿವರ್ತಕ ಹಾಳಾದರೆ 24 ಗಂಟೆಗಳಲ್ಲಿ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಸಚಿವರು ಉತ್ತರ ನೀಡಿದರು.

ರೈತರಿಂದ ಬೃಹತ್ ಪ್ರತಿಭಟನೆ; ವಿದ್ಯುತ್ ಕ್ಷೇತ್ರದ ವಿವಿಧ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೆಪ್ಟೆಂಬರ್ 20ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ.

ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-5 ಬದಲಾಗಿ, ಎಲ್‌ಟಿ -2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ಕಾನೂನು ಪ್ರಕಾರ 72 ಗಂಟೆಗಳಲ್ಲಿ ಬದಲಾವಣೆ ಮಾಡಿಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಯಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.

ರೈತರ ಒತ್ತಾಯಗಳು

* ಅಡಿಕೆ ಸುಲಿಯುವ ಯಂತ್ರಗಳನ್ನು ಎಲ್‌ಟಿ-5 ಬದಲಾಗಿ ಮನೆಯ ವಿದ್ಯುತ್ ಸಂಪರ್ಕ ಎಲ್‌-2ನಲ್ಲಿ ಉಪಯೋಗಿಸಲು ಅನುಮತಿ ನೀಡಬೇಕು.

* 63ಕೆವಿ ಟಿಸಿಗಳು ದಾಸ್ತಾನು ಇಲ್ಲವೆಂದು ಹೇಳುತ್ತಿದ್ದಾರೆ. ಸುಟ್ಟುಹೋದ ಎಲ್ಲಾ ಟಿಸಿಗಳನ್ನು ಕಾನೂನು ಪ್ರಕಾರ 72 ಗಂಟೆಗಳಲ್ಲಿ ಮರು ಸ್ಥಾಪನೆ ಮಾಡಬೇಕು.

* ಐಪಿ ಸೆಟ್‌ಗಳಿಗೆ ಕನಿಷ್ಠ 10ಗಂಟೆ 3ಫೇಸ್ ನಿರಂತರ ವಿದ್ಯುಚ್ಛಕ್ತಿ ನೀಡಬೇಕು.

* ಐಪಿ ಸೆಟ್‌ಗಳಿಗೆ ಅಕ್ರಮ-ಸಕ್ರಮ 10 ಸಾವಿರ ಠೇವಣಿ 5 ಎಚ್‌ಪಿಗೆ 7,500 ರೂ. ಒಟ್ಟು 17,500 ರೂ. ಮಾತ್ರ ಕಟ್ಟಿಸಿಕೊಳ್ಳಬೇಕು. ಬದಲಾಗಿ ವಿದ್ಯುತ್‌ಚ್ಛಕ್ತಿ ಗುತ್ತಿಗೆದಾರ 25,000 ರೂ. ವರೆಗೆ ಪಡೆಯುತ್ತಿದ್ದಾರೆ. ಇದನ್ನು ತಕ್ಷಣ ನಿಲ್ಲಿಸಬೇಕು.

* ಅಕ್ರಮ ಸಕ್ರಮದಡಿ ಹಣ ಕಟ್ಟಿಸಿಕೊಂಡು 4 ವರ್ಷ ಕಳೆದರೂ ಸಹ ಕಂಬ, ತಂತಿ ಹಾಕಿಲ್ಲ. ಇದನ್ನು ತಕ್ಷಣ ಮಾಡಿಕೊಡಬೇಕು.

Recommended Video

ಕೊಹ್ಲಿ ನಂತರ ರೋಹಿತ್ ಮಾತ್ರ ಅಲ್ಲ ನಾಯಕತ್ವದ ರೇಸ್ ನಲ್ಲಿರೋ ಈ ಮೂವರು ಯಾರು? | Oneindia Kannada

* ಗ್ರಾಮೀಣ ಮಟ್ಟದಲ್ಲಿ ವಿಧಿಸುತ್ತಿರುವ ನಿಗದಿತ ಮಾಸಿಕ ಶುಲ್ಕವನ್ನು ರದ್ದುಗೊಳಿಸಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.

English summary
Energy minister of Karnataka V. Sunil Kumar clarified that there is no proposal to privatisation of power sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X