ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿರೋಧಿಗಳಿಗೆ ಗೌಡ್ರ ಕೇರಂ ಆಟ ಅರ್ಥವೇ ಆಗುವುದಿಲ್ಲ: ವೈ ಎಸ್ ವಿ ದತ್ತ

|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ಚಾಣಾಕ್ಷತನ ಯಾರಿಂದಲೂ ಅಳಿಯಲು ಸಾಧ್ಯವಿಲ್ಲ | Oneindia Kannada

ಬೆಂಗಳೂರು, ಜೂನ್ 21: ದೇವೇಗೌಡ್ರು ತಮ್ಮ ರಾಜಕೀಯ ಜೀವನದಲ್ಲಿ ಎಷ್ಟೋ ಚುನಾವಣೆಯನ್ನು ಎದುರಿಸಿದ್ದಾರೆ, ತುಮಕೂರಿನ ಒಂದು ಸೋಲಿನಿಂದ ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ, ವಕ್ತಾರ ವೈ ಎಸ್ ವಿ ದತ್ತ ಹೇಳಿದರು.

ನಗರದಲ್ಲಿ ಮಾತನಾಡುತ್ತಿದ್ದ ದತ್ತ, ನಮ್ಮ ನಾಯಕ ದೇವೇಗೌಡರ ಕೇರಂ ಬೋರ್ಡ್ ಆಟ ನಮ್ಮ ಪಕ್ಷದವರಿಗೇ ಗೊತ್ತಾಗುವುದಿಲ್ಲ. ಇನ್ನು ಅವರು ಆಡುವ ಚದುರಂಗದ ಆಟ ಎದುರಾಳಿಗಳಿಗೆ ಅರ್ಥವಾಗುತ್ತದಾ ಎಂದು ಪ್ರಶ್ನಿಸಿದ್ದಾರೆ.

ನಿಖಿಲ್-ಪ್ರಜ್ವಲ್ ಮಿಂಚಿದ್ದು ಸಾಕು: ಜೆಡಿಎಸ್ ಟಾಪ್ ಲೀಡರ್ ಅಸಮಾಧಾನನಿಖಿಲ್-ಪ್ರಜ್ವಲ್ ಮಿಂಚಿದ್ದು ಸಾಕು: ಜೆಡಿಎಸ್ ಟಾಪ್ ಲೀಡರ್ ಅಸಮಾಧಾನ

ಈ ಹಿಂದೆಯೂ ಗೌಡ್ರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ರಾಜಕೀಯದಲ್ಲಿ ಇದೆಲ್ಲಾ ಸಾಮಾನ್ಯ. ಇದಕ್ಕೆಲ್ಲಾ ಗೌಡ್ರು ಧೃತಿಗೆಡುವುದಿಲ್ಲ ಎಂದು ದತ್ತ ಹೇಳಿದರು.

No one will understand Deve Gowda political carrom game: YSV Datta

ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನವನ್ನು ಶುರು ಮಾಡಿದ್ದೇ ಜೆಡಿಎಸ್. ಈಗ, ಇದರ ಬಗ್ಗೆ ವ್ಯಂಗ್ಯವಾಡುತ್ತಿರುವ ಬಿಜೆಪಿಯವರು ಇದನ್ನು ಮೊದಲು ಅರಿತುಕೊಳ್ಳಲಿ ಎಂದು ದತ್ತ, ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದರು.

ಎಲ್ಲಿ ಕಳೆದುಕೊಳ್ಳುತ್ತೀವೋ ಅಲ್ಲೇ ಗಳಿಸಿಕೊಳ್ಳಬೇಕು ಎನ್ನುವುದು ದೇವೇಗೌಡರ ಹಠ. ಇವರು ಏನಾದರೂ ಹೇಳಿದರೆ, ಅದರ ಹಿಂದೆ ಬೇರೇನೋ ವಿಷಯವಿದೆ ಎಂದು ತಿಳಿದುಕೊಳ್ಳಬೇಕು ಎಂದು ದತ್ತ ಹೇಳಿದರು.

ಜೆಡಿಎಸ್ ಯುವಮೋರ್ಚಾ ಅಧ್ಯಕ್ಷ ಪಟ್ಟವನ್ನು ದೇವೇಗೌಡ ಅವರ ಕುಟುಂಬದ ಹೊರಗಿನವರಿಗೆ ಕೊಡಬೇಕು ಎಂದು ಬಹಿರಂಗವಾಗಿ ದತ್ತ ಎರಡು ದಿನದ ಹಿಂದೆ ಒತ್ತಾಯಿಸಿದ್ದರು.

ಪಕ್ಷ ಸಂಘಟನೆಗಾಗಿ ಮಹತ್ವದ ತೀರ್ಮಾನ ಕೈಗೊಂಡ ಕರ್ನಾಟಕ ಜೆಡಿಎಸ್‌ ಪಕ್ಷ ಸಂಘಟನೆಗಾಗಿ ಮಹತ್ವದ ತೀರ್ಮಾನ ಕೈಗೊಂಡ ಕರ್ನಾಟಕ ಜೆಡಿಎಸ್‌

ದೇವೇಗೌಡ ಅವರ ಮೊಮ್ಮಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಸಾಕಷ್ಟು ಪ್ರಜ್ವಲಿಸಿದ್ದಾರೆ, ಅವರು ಇನ್ನು ಮುಂದೆ ತೆರೆ ಮರೆಯಲ್ಲಿ ನಿಂತು ಪಕ್ಷವನ್ನು ಕಟ್ಟಲಿ ಎಂದು ದತ್ತ ಅಸಮಾಧಾನದಿಂದಲೇ ಹೇಳಿದ್ದರು.

English summary
No one will understand Deve Gowda political carrom game, so how opponent will understand his chess game: YSV Datta
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X