• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತರ ಬಗ್ಗೆ ಭಾಷಣ ಬಿಗಿಯುವ ಶಾಸಕರಿಗೆ ಕೃಷಿ, ನೀರಾವರಿ ಬೇಡ್ವಾ, PWDನೇ ಬೇಕಾ?

|
   ಕಾಂಗ್ರೆಸ್ - ಜೆಡಿಎಸ್ ಮತ್ರಿ ಸರ್ಕಾರದ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇಲ್ವಾ? | Oneindia Kannada

   ರೈತರ ಬಗ್ಗೆ ಇಷ್ಟುದ್ದ ಭಾಷಣ ಬಿಗಿಯುವ, ರೈತರ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ, ತಮ್ಮ ಬೇಳೆ ಬೇಯಬೇಕಾದರೆ, ರೈತರ ವಿಚಾರದಲ್ಲೂ ರಾಜಕೀಯ ಮಾಡುವ ನಮ್ಮ ಜನಪ್ರತಿನಿಧಿಗಳು, ರೈತಾಪಿ ವರ್ಗದ ಸಮಸ್ಯೆಗಳನ್ನು ಸ್ಪಂದಿಸಲು ತೀರಾ ಹತ್ತಿರವಾಗಿರುವ ಖಾತೆಗೆ ಡಿಮಾಂಡ್ ಮಾಡಿದ ಉದಾಹರಣೆಗಳೇ ಕಮ್ಮಿಯಾಗುತ್ತಿರುವುದು ವಿಷಾದನೀಯ.

   ಈಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳೋಣ, ಇತ್ತಂಡಗಳಲ್ಲಿ ಯಾರಾದರೂ ನಮಗೆ ಕೃಷಿ, ನೀರಾವರಿ,ಪಶು ಸಂಗೋಪನೆ ಖಾತೆ ಬೇಕೆಂದು ಹಠ ಹಿಡಿದಿದ್ದಾರಾ? ಪ್ರಭಾವಿ ಖಾತೆಯ ಹಿಂದೆಯೇ ಬಿದ್ದಿರುವ ಇವರನ್ನು ರೈತರ ಪರ ಎಂದು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯ?

   ಜಿ.ಟಿ.ದೇವೇಗೌಡ ಬೇಡಿಕೆ ಇಟ್ಟ ಎರಡು ಖಾತೆಗಳು!

   ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುವುದಾರೆ, ಜೆಡಿಎಸ್ - ಕಾಂಗ್ರೆಸ್ ನಡುವೆ ಯಾವ ಖಾತೆಗಾಗಿ ಚೌಕಾಸಿ ನಡೆಯುತ್ತಿತ್ತು? ಎಲ್ಲಾದರೂ, ಯಾರಾದರೂ ಕೃಷಿ ಖಾತೆಗಾಗಿ ಪೈಪೋಟಿ ನಡೆಸಿದ ಸುದ್ದಿ ಬಂದಿದೆಯಾ? ಸಾಮಾಜಿಕ ತಾಣದಲ್ಲೂ "ಮಣ್ಣಿನ ಮಕ್ಕಳಿಗೆ ಕೃಷಿ, ನೀರಾವರಿ ಬೇಡ್ವಾ" ಎನ್ನುವ ಚರ್ಚೆ ಕೂಡಾ ನಡೆಯುತ್ತಿದೆ.

   ಹಣಕಾಸು, ಲೋಕೋಪಯೋಗಿ, ಇಂಧನ, ಬೆಂಗಳೂರು ನಗರಾಭಿವೃದ್ದಿ, ಕಂದಾಯ, ಅಬಕಾರಿ, ಸಾರಿಗೆ ಖಾತೆಗಳಿಗಾಗಿ ಎರಡು ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿತ್ತೇ ಹೊರತು, ಕೃಷಿ, ನೀರಾವರಿ,ಪಶು ಸಂಗೋಪನೆ ಖಾತೆಗಾಗಿ ಅಲ್ಲ.

   ದೇವೇಗೌಡರ ಮಾನಸ ಪುತ್ರ ಶರವಣಗೆ ಒಲಿಯುತ್ತಾ ಸಚಿವ ಸ್ಥಾನ?

   ಲೋಕೋಪಯೋಗಿ ಖಾತೆ ರೇವಣ್ಣನವರಿಗೆ ಎಂದು ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಲೇ ಗ್ಯಾರಂಟಿಯಾಗಿತ್ತು. ಇದಾದ ನಂತರ ಹಣಕಾಸು ಖಾತೆಗಾಗಿ ಎರಡೂ ಪಕ್ಷಗಳು ಜಿದ್ದಿಗೆ ಬಿದ್ದವು, ಕೊನೆಗೆ ಅದು ಜೆಡಿಎಸ್ ಪಾಲಾಯಿತು. ಇದಾದ ನಂತರ ರೇವಣ್ಣ ನನಗೆ ಇನ್ನೊಂದು ಖಾತೆ ಬೇಕೆಂದು ಹಠ ಹಿಡಿಯಲಾರಂಭಿಸಿದರು. ಪ್ರಭಾವಿ ಖಾತೆಯ ಸುತ್ತ ಗಿರಿಗಿಟ್ಲೆ ಹೊಡೆಯುತ್ತಿರುವ ಸಮ್ಮಿಶ್ರ ಸರಕಾರ, ಮುಂದೆ ಓದಿ..

   ಎರಡೆರಡು ಖಾತೆ ಬೇಕೆಂದ ಎಚ್ ಡಿ ರೇವಣ್ಣ

   ಡಿ ಕೆ ಶಿವಕುಮಾರ್ ಬಯಸಿದ್ದ ಇಂಧನ ಖಾತೆಯ ಮೇಲೆ ರೇವಣ್ಣನವರ ಕಣ್ಣುಬಿತ್ತು, ನನಗೆ PWDನೂ ಬೇಕು, ಇಂಧನ ಖಾತೆಯೂ ಬೇಕೆಂದು ಪಟ್ಟು ಹಿಡಿದರು. ಈ ನಡುವೆ, ಇಂಧನ ಖಾತೆಯನ್ನು ರೇವಣ್ಣ ಅವರಿಗೆ ಕೊಡುವುದಾದರೆ, ಲೋಕೋಪಯೋಗಿ ನನಗೆ ಬೇಕೆಂದು ಸಿ ಎಸ್ ಪುಟ್ಟರಾಜು, ಗೌಡ್ರ ಹಿಂದೆ ಬಿದ್ದರು. ಇದು ಎರಡೂ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿತು. ಅವರನ್ನೂ ಬಿಡುವಂತಿಲ್ಲಾ.. ಯಾರನ್ನೂ ಬಿಡುವಂತಿಲ್ಲಾ..

   ಮುಜರಾಯಿ ಖಾತೆ ಕೊಡಿ.. ದೇವಸ್ಥಾನ ಸುತ್ತಿಕೊಂಡು ಇರುತ್ತೇನೆ

   ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸುತ್ತಿದ್ದ ಡಿ ಕೆ ಶಿವಕುಮಾರ್, ಮುಜರಾಯಿ ಖಾತೆ ಕೊಡಿ.. ದೇವಸ್ಥಾನ ಸುತ್ತಿಕೊಂಡು ಇರುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದರು. ಡಿಕೆಶಿ ನಮ್ಮ ಪಕ್ಷದ ಶಿಸ್ತಿನ ಸಿಪಾಯಿ ಎಂದು ಪರಮೇಶ್ವರ್ ಹೇಳಿದ್ರು, ಸಿದ್ದರಾಮಯ್ಯನವರು ಡಿಕೆಶಿಯವರನ್ನು ಮನೆಗೆ ಕರೆಸಿಕೊಂಡು ಸಮಾಧಾನ ಪಡಿಸಿದರು. ಡಿಸಿಎಂ ಸ್ಥಾನ ನಿರೀಕ್ಷಿಸಿದ್ದ ಡಿಕೆಶಿಗೆ ಅದು ಸಿಗದೇ ಇದ್ದಾಗ, ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎನ್ನುವ ಸುದ್ದಿ ಬಂತು, ಅದೂ ಕಷ್ಟ ಎಂದಾದಾಗ, ಇಂಧನ ಖಾತೆಯ ಮೇಲೆ ಟವೆಲ್ ಹಾಕಿದ್ರು. ಅದಕ್ಕೂ ರೇವಣ್ಣ ಕಣ್ಣಿಟ್ಟಾಗ, ಡಿಕೆಶಿ ತೀವ್ರ ಭ್ರಮನಿರಸನಗೊಂಡರು.

   ಡಿಕೆ ಶಿವಕುಮಾರ್‌ಗೆ ಯಾವ ಖಾತೆಯೂ ಇಲ್ಲ, ಉಡುಗೊರೆಯೂ ಇಲ್ಲ?

   ಸಿ ಎಸ್ ಪುಟ್ಟರಾಜು ಮತ್ತು ಡಿ ಸಿ ತಮ್ಮಣ್ಣ

   ಎರಡೆರಡು ಖಾತೆ (ಇಂಧನ, PWD) ಬೇಕೆಂದು ಪಟ್ಟು ಹಿಡಿದಿದ್ದ ರೇವಣ್ಣ ಅವರನ್ನು ಸಮಾಧಾನ ಪಡಿಸಲು ದೇವೇಗೌಡ್ರು ಮೂರು ತಾಸು ಮೀಟಿಂಗ್ ಮಾಡಬೇಕಾಯಿತು ಎನ್ನುವ ಸುದ್ದಿಯಿದೆ. ಮಂಡ್ಯ ಜಿಲ್ಲೆಯ ಪುಟ್ಟರಾಜು ಮತ್ತು ಡಿ ಸಿ ತಮ್ಮಣ್ಣ ಅವರ ಸಿಟ್ಟನ್ನು ಹಾಗೂಹೀಗೂ ಗೌಡ್ರು ಸದ್ಯಕ್ಕೆ ಸಾಗಹಾಕಿದ್ದಾರೆ ಎನ್ನಲಾಗುತ್ತಿದೆ. ಪುಟ್ಟರಾಜು ಅವರು ಲೋಕೋಪಯೋಗಿ ನನಗೆ ಬೇಕೆಂದು, ಗೌಡ್ರ ಸಂಬಂಧಿ ಡಿ ಸಿ ತಮ್ಮಣ್ಣ, ಮಂಡ್ಯ ಉಸ್ತುವಾರಿ ನನಗೆ ಬೇಕೆಂದು ಪಟ್ಟುಹಿಡಿದಿದ್ದರಂತೆ..

   ಇಸ್ರೇಲ್ ಮಾದರಿ ಕೃಷಿ ಪದ್ದತಿ ಜಾರಿಗೆ ತರಲು ಉತ್ಸುಕರಾಗಿರುವ ಸಿಎಂ

   ಈ ಎಲ್ಲ ವಿದ್ಯಮಾನಗಳನ್ನು ಗಮನಿಸುವುದಾದರೆ, ಎರಡು ಪಕ್ಷಗಳಿಗೆ ಮತ್ತು ಎರಡು ಪಕ್ಷಗಳ ಶಾಸಕರು, ಇಂಧನ-ಲೋಕೋಪಯೋಗಿ ಖಾತೆಗಾಗಿಯೇ ಪೈಪೋಟಿ ನಡೆಸುತ್ತಿದ್ದಾರೆಯೇ ಹೊರತು, ರೈತರ ಬಾಳಿಗೆ ಹತ್ತಿರವಾಗಿರುವ ಕೃಷಿ, ನೀರಾವರಿ ಖಾತೆಗಾಗಿ ಅಲ್ಲ.. ಇಸ್ರೇಲ್ ಮಾದರಿ ಕೃಷಿ ಪದ್ದತಿ ಜಾರಿಗೆ ತರಲು ಉತ್ಸುಕರಾಗಿರುವ ಸಿಎಂ ಕುಮಾರಣ್ಣ, ಖುದ್ದು ಈ ಎರಡು ಖಾತೆಯನ್ನು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಳ್ಳಬಹುದಿತ್ತಲ್ಲವೇ?

   ಎಷ್ಟಾದರೂ ಅವರದ್ದು ಮಣ್ಣಿನ ಮಕ್ಕಳ ಕುಟುಂಬ

   ಕಳೆದ ಹತ್ತು ದಿನಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಸಾಲದ ಹೊರೆಯಿಂದಲೇ ಹೆಚ್ಚಿನ ಸಾವು ಆಗಿರುವಂತದ್ದು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ,, ಹೊಸ ಸರಕಾರ ನಮ್ಮ ಕಷ್ಟಕ್ಕೆ ಆಸರೆಯಾಗಬಹುದು ಎನ್ನುವ ಆಶಾಕಿರಣದಿಂದ ನೋಡುವ ರೈತಾಪಿ ವರ್ಗಕ್ಕೆ ಕುಮಾರಸ್ವಾಮಿಯವರ ಸರಕಾರದಿಂದಾದರೂ ಒಳ್ಳೆಯದಾಗಲಿ. ಯಾಕೆಂದರೆ, ಅವರೇ ಹೇಳಿಕೊಳ್ಳುವಂತೆ ಎಷ್ಟಾದರೂ ಅವರದ್ದು ಮಣ್ಣಿನ ಮಕ್ಕಳ ಕುಟುಂಬ..

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   MLAs taking oath on farmers, are they really worried about farmers issues? If so, why they are demanding only key portfolio like PWD, Finance, Power ministry, why not Agriculture, Irrigation, Animal Husbandry Veterinary ministry?

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more