ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗೂ ಇಲ್ಲ 'ರಾಷ್ಟ್ರಕವಿ' ಬಿರುದು

|
Google Oneindia Kannada News

ಬೆಂಗಳೂರು, ಮೇ 7 : 'ರಾಷ್ಟ್ರಕವಿ ಬಿರುದು ಅರಸೊತ್ತಿಗೆಯ ಸಂಕೇತ. ಅದಕ್ಕೆ ಸಂವಿಧಾನದ ಯಾವುದೇ ಮಾನ್ಯತೆ ಇಲ್ಲ. ಆದ್ದರಿಂದ ಪ್ರಶಸ್ತಿ ನೀಡುವ ಸಂಸ್ಕೃತಿ ಕೊನೆಯಾಗಬೇಕು' ಎಂದು ಕೋ.ಚನ್ನಬಸಪ್ಪ ನೇತೃತ್ವದ ಆಯ್ಕೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋ.ಚನ್ನಬಸಪ್ಪ ನೇತೃತ್ವದ ರಾಷ್ಟ್ರಕವಿ ಆಯ್ಕೆ ಸಮಿತಿ 16 ಪುಟಗಳ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ ರಾಷ್ಟ್ರಕವಿ ಬಿರುದನ್ನು ನೀಡಲು ಯಾರ ಹೆಸರನ್ನೂ ಸಮಿತಿ ಶಿಫಾರಸು ಮಾಡಿಲ್ಲ. [ರಾಷ್ಟ್ರಕವಿಗಾಗಿ ಹುಡುಕಾಟ]

Kannada

ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಕೋ.ಚನ್ನಬಸಪ್ಪ ಅವರು, 'ಭಾರತದಲ್ಲಿ ಸಂವಿಧಾನ ಜಾರಿಯಾದ ಮೇಲೆ ರಾಷ್ಟ್ರಕವಿ ಸೇರಿದಂತೆ ಇತರ ಬಿರುದುಗಳನ್ನು ನೀಡಬಾರದು. ಈ ಸಂಸ್ಕೃತಿ ಕೊನೆಯಾಗಬೇಕು ಎಂಬ ಕಾರಣಕ್ಕೆ ಸಮಿತಿ ಯಾರ ಹೆಸರನ್ನೂ ಶಿಫಾರಸು ಮಾಡಿಲ್ಲ' ಎಂದು ಹೇಳಿದರು.[ವೈಚಾರಿಕ ದಿನವಾಗಲಿದೆ ಕುವೆಂಪು ಜನ್ಮದಿನಾಚರಣೆ]

ಆಯ್ಕೆ ಸಮಿತಿ ರಚಿಸಲಾಗಿತ್ತು : 2014ರ ಡಿಸೆಂಬರ್‌ನಲ್ಲಿ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಲು ಅರ್ಹರನ್ನು ಗುರುತಿಸುವಂತೆ ಕೋ.ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಇಂದು ಸಮಿತಿ ವರದಿ ನೀಡಿದ್ದು, ಯಾರನ್ನೂ ಪ್ರಶಸ್ತಿಯಾಗಿ ಶಿಫಾರಸು ಮಾಡಿಲ್ಲ.

ಕೋ.ಚನ್ನಬಸಪ್ಪ ಅವರ ನೇತೃತ್ವದಲ್ಲಿ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪುಂಡಲೀಕ ಹಾಲಂಬಿ, ಡಾ.ಎಚ್‌.ಎಲ್‌.ಪುಷ್ಪಾ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಡಾ.ಕಾಳೇಗೌಡ ನಾಗವಾರ, ಡಾ.ಗಿರಡ್ಡಿ ಗೋವಿಂದರಾಜ ಮುಂತಾದವರು ಸದಸ್ಯರಾಗಿದ್ದರು.

ಸಮಿತಿಯ ಪದನಿಮಿತ್ತ ಸದಸ್ಯರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್‌.ಹನುಮಂತಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಮಾಲತಿ ಪಟ್ಟಣಶೆಟ್ಟಿ ಮುಂತಾದವರಿದ್ದರು.

English summary
'Rashtrakavi' nominate committee chaired by writer Ko Channabasappa submitted report to Chief Minister Siddaramaiah on Thursday. Committee not suggested any name for the Rashtrakavi award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X