ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡುಕರಿಗೆ ನಿರಾಸೆ ಮೂಡಿಸಿದ ಸಿಎಂ! ಮದ್ಯದಂಗಡಿಗಳ ಬಗ್ಗೆ ಹೇಳಿದ್ದೇನು?

|
Google Oneindia Kannada News

Recommended Video

ಮದ್ಯದಂಗಡಿ ಮಾಲೀಕರಿಗೆ ನಿರಾಸೆ ಮೂಡಿಸಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಸೆಪ್ಟೆಂಬರ್ 26: ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗುತ್ತಿದೆ ಎಂಬ ಸುದ್ದಿಯನ್ನು ಸಿಎಂ ಕುಮಾರಸ್ವಾಮಿ ಅವರು ತಳ್ಳಿ ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತನಾಡಿದ ಅವರು, ಹೊಸ ಮದ್ಯದಂಗಡಿಗಳ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ನಿಜವಲ್ಲ ಎಂದರು.

ಜನತಾ ದರ್ಶನದ ಅರ್ಜಿದಾರರಿಗೆಂದೇ ವಿಶೇಷ ಉದ್ಯೋಗ ಮೇಳಜನತಾ ದರ್ಶನದ ಅರ್ಜಿದಾರರಿಗೆಂದೇ ವಿಶೇಷ ಉದ್ಯೋಗ ಮೇಳ

ಅಬಕಾರಿ ಖಾತೆಯು ನನ್ನ ಬಳಿಯೇ ಇದೆ. ಈವರೆಗೆ ಯಾವುದೇ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಕಾರ್ಯ ಆಗಿಲ್ಲ. ಆ ಬಗ್ಗೆ ಪ್ರಸ್ತಾವ ಸಹ ಸರ್ಕಾರದ ಮುಂದೆ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

No new liquor shops in Karnataka : HD Kumaraswamy

ಇನ್ನೂ ಕೆಲವು ವಿಷಯಗಳ ಬಗ್ಗೆ ಮಾತನಾಡಿದ ಅವರು, ಬಸ್ ದರವನ್ನು ಹೆಚ್ಚಳವನ್ನು ನಾನೇ ತಡೆ ಹಿಡಿದಿದ್ದೇನೆ, ಪ್ರಯಾಣಿಕರಿಗೆ ಹೊರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದೇನೆ ಎಂದರು.

ಅಲುಗಾಡುತ್ತಿದ್ದ ಕುಮಾರಸ್ವಾಮಿ ಸರ್ಕಾರಕ್ಕೆ ಟಾನಿಕ್ ಆದ ದೇವೇಗೌಡರ ಟೆಕ್ನಿಕ್ಅಲುಗಾಡುತ್ತಿದ್ದ ಕುಮಾರಸ್ವಾಮಿ ಸರ್ಕಾರಕ್ಕೆ ಟಾನಿಕ್ ಆದ ದೇವೇಗೌಡರ ಟೆಕ್ನಿಕ್

ಬಡ್ತಿ ಮೀಸಲಾತಿ ಕುರಿತ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸುತ್ತೇನೆ. ಆದೇಶದ ಪ್ರತಿ ಪಡೆದ ನಂತರ ಸಂಬಂಧಿಸಿದವರ ಬಳಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸಿಎಂ ಮೇಲೆ ದೂರುಗಳ ಸುರಿಮಳೆಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸಿಎಂ ಮೇಲೆ ದೂರುಗಳ ಸುರಿಮಳೆ

ಎಲ್ಲದಕ್ಕೂ ಆಧಾರ್ ಕಡ್ಡಾಯ ಎಂಬುದು ಸಡಿಲಿಕೆ ಆಗಿರುವುದು ಸಂತಸ, ತೀರ್ಪಿನ ಪೂರ್ಣ ಮಾಹಿತಿ ಪಡೆದುಕೊಂಡ ನಂತರವಷ್ಟೆ, ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದರು.

English summary
CM HD Kumaraswamy said no new liqueur shop will open in Karnataka. He said no planing or no Proposal is in front of the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X