ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನ ಚಾಲನೆ ಮುನ್ನ ಈ ತಿದ್ದುಪಡಿ ನಿಯಮ ಓದಿ

By Nayana
|
Google Oneindia Kannada News

ಬೆಂಗಳೂರು, ಜು.18: ಮೋಟಾರು ವಾಹನ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನು ತರಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ನಿರ್ಧರಿಸಿದೆ.

ಹೊಸದಾಗಿ ಖರೀದಿಸಿದ ಸಾರಿಗೆ ವಾಹನಗಳಿಗೆ ನೋಂದಣಿಯಾದ ದಿನದಿಂದ 2 ವರ್ಷ ಸದೃಢತಾ ಪ್ರಮಾಣ ಪತ್ರ ಎಂಬ ತಿದ್ದುಪಡಿ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಚಾರ್ಸಿ ಬಾಡಿ ಹೊಂದಿರುವ ಹೊಸ ವಾಹನಗಳಿಗೆ 2 ವರ್ಷ ಎಫ್‌ಸಿ ಮಾಡಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಸುರಕ್ಷತಾ ನಿಯಮ ಪಾಲಿಸದ 4,947 ಶಾಲಾ ವಾಹನಗಳ ಮೇಲೆ ಕೇಸ್‌ಸುರಕ್ಷತಾ ನಿಯಮ ಪಾಲಿಸದ 4,947 ಶಾಲಾ ವಾಹನಗಳ ಮೇಲೆ ಕೇಸ್‌

ಈಗಿರುವ ಎಲ್ಲಾ ಹೊಸ ವಾಹನದಿಂದ ಹಿಡಿದು ಎಲ್ಲಾ ಸಾರಿಗೆ ವಾಹನಗಳು ಪ್ರತಿ ವರ್ಷ ಕಡ್ಡಾಯವಾಗಿ ಎಫ್‌ಸಿ ಮಾಡಿಸಬೇಕು. ತಪಾಸಣೆ ಸಂದರ್ಭದಲ್ಲಿ ಈ ದಾಖಲೆಯನ್ನು ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಾರೆ.

No need of vehicle fitness certificate for starting 2 year

ಕರ್ನಾಟಕದಲ್ಲಿ ಎಫ್‌ಸಿ ಮಾಡಿಸಲು ಲಘು ಮೋಟಾರು ವಾಹನಕ್ಕೆ 400ರಿಂದ 600 ರೂ ಹಾಗೂ ಮಾಧ್ಯಮ ಮತ್ತು ಭಾರಿ ಗಾತ್ರದ ವಾಹನಕ್ಕೆ 600ರಿಂದ ಸಾವಿರ ರೂ.ವರೆಗೆ ಶುಲ್ಕವಿದೆ.
ಎಫ್‌ಸಿ ಮಾಡಿಸಿಕೊಳ್ಳುವುದು ತಡವಾದಲ್ಲಿ ಪ್ರತಿ ದಿನಕ್ಕೆ 50 ರೂ ನಂತೆ ದಂಡಸಹಿತ ಶುಲ್ಕ ಪಾವತಿಸಬೇಕು.

ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?ಯಮ ಬರ್ತಾನೆ, ನಿಮ್ಮ ಬೈಕ್‌ ಹಿಂದೆ ಕೂರ್ತಾನೆ, ಹೆಲ್ಮೆಟ್‌ ಹಾಕ್ತೀರಾ ಇಲ್ವಾ?

ಚಾಲನಾ ಪರವಾನಗಿ ನೋಂದಣಿ ಪ್ರಮಾಣ ಪತ್ರ ಹೊಂದಿರುವ ಡಿಜಿಲಾಕರ್‌ ಅಪ್ಲಿಕೇಷನ್‌ಗೆ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಈಗಾಗಲೇ ಮಾನ್ಯತೆ ನೀಡಿದೆ. ಇದಕ್ಕೆ ಪೂರಕವಾಗಿ ಡಿಜಿಟಲ್‌ ಮಾದರಿಯಲ್ಲಿರುವ ವಾಯುಮಾಲಿನ್ಯ ಪ್ರಮಾಣಪತ್ರವೂ ಮಾನ್ಯವಾಗಲಿದೆ. ಈ ಕುರಿತು ಕರಡು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

English summary
Central Government is introducing new law that buyer no need to have vehicle fitness certificate for starting 2 year. There are few more amendments in motor vehicle act too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X