ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಷಾಢದ ಕೊನೆಯ ದಿನದ ಮುನ್ನಾ ದೇವೇಗೌಡರಿಂದ ಕಾಂಗ್ರೆಸ್ಸಿಗೆ ಸ್ಪಷ್ಟ ಸಂದೇಶ

|
Google Oneindia Kannada News

Recommended Video

ಆಷಾಢದ ಕೊನೆಯ ದಿನದ ಮುನ್ನಾ ದೇವೇಗೌಡರಿಂದ ಕಾಂಗ್ರೆಸ್ಸಿಗೆ ಸ್ಪಷ್ಟ ಸಂದೇಶ | Oneindia Kannada

ಬೆಂಗಳೂರು, ಆ 1: ಭೀಮನ ಅಮಾವಾಸ್ಯೆಯ ಮುನ್ನಾದಿನ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು, ಕರ್ನಾಟಕ ಕಾಂಗ್ರೆಸ್ಸಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಕಾಂಗ್ರೆಸ್ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂದಿರುವ ದೇವೇಗೌಡ್ರು, ಭವಿಷ್ಯದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇರುವುದಿಲ್ಲ ಎಂದು ಕಾರ್ಯಕರ್ತರ ಸಭೆಯ ನಂತರ ಹೇಳಿದ್ದಾರೆ.

ರಾಜ್ಯ ಪ್ರವಾಸ ಮಾಡುವಂತೆ ಜೆಡಿಎಸ್ ನಾಯಕರಿಗೆ ದೇವೇಗೌಡ ಸೂಚನೆರಾಜ್ಯ ಪ್ರವಾಸ ಮಾಡುವಂತೆ ಜೆಡಿಎಸ್ ನಾಯಕರಿಗೆ ದೇವೇಗೌಡ ಸೂಚನೆ

ಪಕ್ಷದ ಕೇಂದ್ರ ಕಚೇರಿ, ಜೆ ಪಿ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಗೌಡ್ರು, ರಾಜ್ಯದಲ್ಲಿ ಚುನಾವಣೆ ಯಾವಾಗಲಾದರೂ ಎದುರಾಗಬಹುದು, ಕಾರ್ಯಕರ್ತರು ಮತ್ತು ಮುಖಂಡರು ಸಜ್ಜಾಗಿರುವಂತೆ ಸೂಚಿಸಿದ್ದಾರೆ.

No More Alliance With Congress, JDS Supremo Deve Gowda Confirms In Karyakartas Meet

ಕಾಂಗ್ರೆಸ್ ಸೇರಿದಂತೆ, ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಬಾರದು ಎನ್ನುವುದು ಒಕ್ಕೂರಿಲಿನ ಕೂಗಾಗಿತ್ತು. ಜೆಡಿಎಸ್ ಪಕ್ಷದ ಬಲವೃದ್ದನೆಗೆ ಏಕಾಂಗಿಯಾಗಿ ಸ್ಪರ್ಧಿಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ಗೌಡ್ರು ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿದಿದ್ದರಿಂದ, ಅದರ ಲಾಭನಷ್ಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದಿರುವ ಗೌಡ್ರು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಒಲವು ವ್ಯಕ್ತವಾಗಿದ್ದು, ಮೈತ್ರಿ ಮಾಡಿಕೊಳ್ಳದ ತೀರ್ಮಾನಕ್ಕೆ ಬರಲಾಗಿದೆ ಎಂದು ಗೌಡ್ರು ಹೇಳಿದ್ದಾರೆ.

ಕುಮಾರಸ್ವಾಮಿಗೆ ಕೈ ಕೊಟ್ಟವರನ್ನು ಪಕ್ಷದಿಂದ ಹೊರ ದಬ್ಬಿದ ದೇವೇಗೌಡಕುಮಾರಸ್ವಾಮಿಗೆ ಕೈ ಕೊಟ್ಟವರನ್ನು ಪಕ್ಷದಿಂದ ಹೊರ ದಬ್ಬಿದ ದೇವೇಗೌಡ

ರಾಜ್ಯಾದ್ಯಂತ ಪ್ರವಾಸ ನಡೆಸಿ ಕುಮಾರಸ್ವಾಮಿ ನೇತೃತ್ವದ ಸರಕಾರದ ಹದಿನಾಲ್ಕು ತಿಂಗಳ ಸಾಧನೆಗಳನ್ನು ಮನೆಮನೆಗೆ ತಲುಪಿಸುವಂತೆ ದೇವೇಗೌಡ್ರು ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ.

English summary
No More Alliance With Congress, JDS Supremo HD Deve Gowda Confirms In Karyakartas Meet at J P Bhavan on Wednesday, July 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X