ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಕಾರ್ಯಕ್ರಮದಲ್ಲಿ ರಾರಾಜಿಸಿದ 'ಹಿಂದಿ': ಕನ್ನಡ ಕಡೆಗಣನೆಗೆ ಆಕ್ರೋಶ

|
Google Oneindia Kannada News

ಬೆಂಗಳೂರು ಆಗಸ್ಟ್ 04: ಕರ್ನಾಟಕದ ಬೆಂಗಳೂರಿನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಭಾರತೀಯ ಕೈಗಾರಿಕೆ ಒಕ್ಕೂಟ (ಸಿಐಐ)ದಿಂದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ 'ಸಂಕಲ್ಪದಿಂದ ಸಿದ್ಧಿ' ಕಾರ್ಯಕ್ರಮದಲ್ಲಿ ಸ್ಥಳೀಯ ಭಾಷೆ ಕನ್ನಡವೇ ಮಾಯವಾಗಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡಿದ್ದರು. ಇಡೀ ಕಾರ್ಯಕ್ರಮವೇ ಹಿಂದಿಮಯವಾಗಿದ್ದು, ಅಲ್ಲಿ ಕನ್ನಡ ಸಂಪೂರ್ಣವಾಗಿ ಕಡೆಗಣಿಸಲ್ಪಿಟ್ಟಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸೇರಿದಂತೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರು ಇರುವುದು ಕರ್ನಾಟಕದಲ್ಲಿ ಹೊರತು ದೆಹಲಿಯಲ್ಲಿ ಅಲ್ಲ ಎಂದು ಲೇವಡಿ ಮಾಡಿದ್ದಾರೆ.

ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ. ವೇದಿಕೆ ಮೇಲಿನ ಬೋರ್ಡ್‌ನಲ್ಲಿ ಒಂದೇ ಒಂದು ಕನ್ನಡ ಅಕ್ಷರ ಹಾಕಿಲ್ಲ. ಎಲ್ಲೆಡೆ ಹಿಂದಿ ರಾರಾಜಿಸುತ್ತಿರುವ ಪೋಟೋಗಳನ್ನು ಮುಖ್ಯಮಂತ್ರಿ ಟ್ವಿಟ್ ನಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಅನ್ನು ಶೇರ್ ಮಾಡುವ ಮೂಲಕ ಕನ್ನಡಿಗರು ಹಿಂದಿ ಹೇರಿಕೆ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

No Kannada at conference of the Confederation of the Indian Industries held in Bengaluru

ಕನ್ನಡ ಕಡೆಗಣನೆ: ಆಯೋಜಕರಿಗೆ ನೋಟಿಸ್ ನೀಡಿ

ವರ್ಷಗಳಿಂದಲೇ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕೇಂದ್ರ ನಾಯಕರು ರಾಜ್ಯಕ್ಕೆ ಬಂದಾಗ ಕನ್ನಡ ಕಡೆಗಣಿಸುವ ಯಡವಟ್ಟುಗಳು ಮರುಕಳಿಸುತ್ತಲೇ. ಇದೀಗ ಆಸಾಲಿಗೆ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮವು ಸೇರಿದಂತಾಗಿದೆ. ಕನ್ನಡ ನೆಲದಲ್ಲಿ ಕನ್ನಡ ಕಡೆಗಣಿಸಿರುವ ಸರ್ಕಾರ ಧೋರಣೆ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ. ಈ ಘಟನೆ ಸಂಬಂಧ ಸಂಬಂಧಿತ ಪ್ರಾಧಿಕಾರಗಳು ಆಯೋಜಕರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

No Kannada at conference of the Confederation of the Indian Industries held in Bengaluru

2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಈ ಸಂಕಲ್ಪ ಸಿದ್ಧಿ ಯೋಜನೆ ಐದು ವರ್ಷ ಯೋಜನೆ ಆಗಿದೆ. ಯೋಜನೆಯಡಿ ಸಾಮಾಜಿಕ ಚಟುವಟಿಕೆ ಆಯೋಜಿಸಲಾಗುತ್ತಿದೆ. ಅಧಿಕಾರಿಗಳು ಭಾರತದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಯೋಜನೆಯು ದೇಶದ ಪ್ರಮುಖ ಆರೇಳು ವಲಯಗಳ ಮೇಲೆ ತನ್ನ ದೃಷ್ಟಿ ಕೇಂದ್ರಿಕರಿಸಿದೆ.

English summary
No Kannada at conference of the Confederation of the Indian Industries held in Bengaluru. No Kannada in the Sankalpa Siddhi conference attended by Chief Minister Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X