ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆ: ಜೆಡಿಎಸ್ ನಾಯಕರ ಮೇಲೆ ಕಾಂಗ್ರೆಸ್ ನಾಯಕರು ಗರಂ

|
Google Oneindia Kannada News

Recommended Video

ಮೈತ್ರಿಯಲ್ಲಿ ಮತ್ತೆ ಎದ್ದ ಅಸಮಾಧಾನ | Oneindia Kannada

ಕುಂದಗೋಳ, ಮೇ 10: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪ-ಚುನಾವಣೆಗಳು ಸರ್ಕಾರದ ಅಳಿವು-ಉಳಿವಿನ ದೃಷ್ಟಿಯಿಂದ ಮಹತ್ವದ್ದು ಎನಿಸಿಕೊಂಡಿವೆ ಆದರೆ ಈ ಉಪಚುನಾವಣೆಯನ್ನು ಸರ್ಕಾರದ ಚಾಲಕ ಕುರ್ಚಿಯಲ್ಲಿರುವ ಜೆಡಿಎಸ್‌ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಾಂಗ್ರೆಸ್ ಗರಂ ಆಗಿದೆ.

ಉಪಚುನಾವಣೆಯಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಯನ್ನು ಮುಂದುವರೆಸಿದೆ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರವೇ ಕಣಕ್ಕೆ ಇಳಿದಿದ್ದಾರೆ, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ, ಆದರೆ ಜೆಡಿಎಸ್‌ನ ಯಾವೊಬ್ಬ ಪ್ರಮುಖ ನಾಯಕರೂ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳದಿರುವುದು ಕಾಂಗ್ರೆಸ್‌ಗೆ ಬೇಸರ ಮೂಡಿಸಿದೆ.

ಭ್ರಷ್ಟಾಚಾರ ಹಣದಿಂದ ಉಪ ಚುನಾವಣೆ ನಡೆಸುತ್ತಿಲ್ಲ ಬಿಎಸ್‌ವೈಗೆ ಶಿವಕುಮಾರ್ ತಿರುಗೇಟು ಭ್ರಷ್ಟಾಚಾರ ಹಣದಿಂದ ಉಪ ಚುನಾವಣೆ ನಡೆಸುತ್ತಿಲ್ಲ ಬಿಎಸ್‌ವೈಗೆ ಶಿವಕುಮಾರ್ ತಿರುಗೇಟು

ಮೈತ್ರಿಧರ್ಮ ಪಾಲನೆಯೆಂದರೆ ತಮ್ಮ ಅಭ್ಯರ್ಥಿ ಇರಲಿ ಇಲ್ಲದಿರಲಿ, ಪ್ರಚಾರಕ್ಕೆ ಬಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ, ಕಾಂಗ್ರೆಸ್‌ಗೆ ಮತಹಾಕುವಂತೆ ಕರೆಯನ್ನು ಜೆಡಿಎಸ್ ನಾಯಕರು ನೀಡಬೇಕಿತ್ತು, ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಎರಡೂ ಪಕ್ಷದ ನಾಯಕರು ಇದನ್ನು ಮಾಡಿದ್ದರು, ಆದರೆ ಉಪಚುನಾವಣೆಯಲ್ಲಿ ಈ ಬಂಧ ಕಾಣುತ್ತಿಲ್ಲ.

ಕಾಂಗ್ರೆಸ್ ನಾಯಕರು ಉಪಚುನಾವಣೆಯಲ್ಲಿ ಭಾಗಿ

ಕಾಂಗ್ರೆಸ್ ನಾಯಕರು ಉಪಚುನಾವಣೆಯಲ್ಲಿ ಭಾಗಿ

ಕಾಂಗ್ರೆಸ್‌ನ ಟಾಪ್ ನಾಯಕರೆಲ್ಲಾ ಉಪಚುನಾವಣೆ ಪ್ರಚಾರದಲ್ಲಿ ಪೂರ್ಣ ತೊಡಗಿಸಿಕೊಂಡಿದ್ದಾರೆ, ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಂಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಇನ್ನೂ ಹಲವು ನಾಯಕರು ಉಪಚುನಾವಣೆಗೆ ದುಡಿಯುತ್ತಿದ್ದಾರೆ ಆದರೆ ಜೆಡಿಎಸ್‌ನ ಯಾವ ಪ್ರಮುಖ ನಾಯಕರೂ ಸಹ ಅತ್ತ ಕಡೆ ಇನ್ನೂ ತಲೆ ಹಾಕಿಲ್ಲ.

ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ?ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ?

ಎಚ್‌ಡಿಕೆ-ಎಚ್‌ಡಿಡಿಯನ್ನು ಕರೆತರಲು ಆಗ್ರಹ

ಎಚ್‌ಡಿಕೆ-ಎಚ್‌ಡಿಡಿಯನ್ನು ಕರೆತರಲು ಆಗ್ರಹ

ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡ ಅವರನ್ನು ಪ್ರಚಾರಕ್ಕೆ ಕರೆತರಬೇಕು ಎಂದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಅಲ್ಲಿ ಒತ್ತಾಯ ಹೇರುತ್ತಿದ್ದಾರೆ. ಜೆಡಿಎಸ್‌ನ ಮುಖಂಡರು ಉಪಚುನಾವಣೆಯನ್ನು ನಿರ್ಲಕ್ಷಿಸಿದರೆ ಅದು ಮೈತ್ರಿಯ ಮೇಲೆ ಪರಿಣಾಮ ಬೀರಿ ಬಿಜೆಪಿಗೆ ಸಹಾಯಕವಾಗುತ್ತದೆ ಎಂದು ಕಾಂಗ್ರೆಸ್‌ ಹಿತಚಿಂತಕರು ಪದೇ-ಪದೇ ಎಚ್ಚರಿಸುತ್ತಿದ್ದಾರೆ.

ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?ಉಪ ಚುನಾವಣೆ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಹಾದಿ ಸುಗಮ?

ಜೆಡಿಎಸ್ ಮುಖಂಡರ ನಿರಾಸಕ್ತಿ ಬಿಜೆಪಿಗೆ ಲಾಭ?

ಜೆಡಿಎಸ್ ಮುಖಂಡರ ನಿರಾಸಕ್ತಿ ಬಿಜೆಪಿಗೆ ಲಾಭ?

ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಸಹ ಜೆಡಿಎಸ್ ಕಾರ್ಯಕರ್ತರು ಉಪಚುನಾವಣೆ ಬಗ್ಗೆ ಅಸಡ್ಡೆ ವಹಿಸಿದ್ದು, ತಮ್ಮ ನಾಯಕರು ಇಲ್ಲದ ಪ್ರಚಾರಗಳಿಗೆ ಆಗಮಿಸುವುದಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ, ಇದು ಪರೋಕ್ಷವಾಗಿ ಬಿಜೆಪಿ ವರವಾಗುವ ಸಂಭವ ಇದೆ, ಇದು ಕಾಂಗ್ರೆಸ್‌ ನಾಯಕರನ್ನು ಆತಂಕಕ್ಕೆ ನೂಕಿದೆ.

ಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕ

ಸಿದ್ದರಾಮಯ್ಯ ಅವರೇ ಎಚ್‌ಡಿಕೆಗೆ ಆಹ್ವಾನಿಸಿದ್ದಾರೆ

ಸಿದ್ದರಾಮಯ್ಯ ಅವರೇ ಎಚ್‌ಡಿಕೆಗೆ ಆಹ್ವಾನಿಸಿದ್ದಾರೆ

ಸಿದ್ದರಾಮಯ್ಯ ಅವರೇ ಸ್ವತಃ ಕುಮಾರಸ್ವಾಮಿ ಅವರನ್ನು ಉಪಚುನಾವಣೆ ಪ್ರಚಾರಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಆದರೂ ಸಹ ಕುಮಾರಸ್ವಾಮಿ ಅವರು ಆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇತ್ತೀಚೆಗೆ ಸ್ವತಃ ಸಿದ್ದರಾಮಯ್ಯ ಸೇರಿದಂತೆ ಕೆಲವು ಕೈ ನಾಯಕರು 'ಸಿಎಂ ಪದವಿ' ಬಗ್ಗೆ ನೀಡಿರುವ ಹೇಳಿಕೆಗಳು ಕುಮಾರಸ್ವಾಮಿ ಅವರನ್ನು ಕೆರಳಿಸಿವೆ ಎನ್ನಲಾಗಿದ್ದು, ಹಾಗಾಗಿಯೇ ಎಚ್‌ಡಿಕೆ ಅವರು ಉಪಚುನಾವಣೆ ಕಡೆ ಮುಖಹಾಕಿಲ್ಲ.

ಎರಡೂ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದ ಜೆಡಿಎಸ್‌

ಎರಡೂ ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದ್ದ ಜೆಡಿಎಸ್‌

ಮತ್ತೊಂದು ದಿಕ್ಕಿನಿಂದ ನೋಡುವುದಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ನ ಪ್ರಭಾವ ಕಡಿಮೆಯೇ, ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಠೇವಣಿ ಕಳೆದುಕೊಂಡಿತ್ತು, ಹಾಗಾಗಿ ತಮ್ಮ ಪ್ರಭಾವ ಇಲ್ಲದ ಕಡೆ ಹೋಗುವುದು ಬೇಡವೆಂದು ಉದ್ದೇಶಪೂರ್ವಕವಾಗಿ ಜೆಡಿಎಸ್ ನಾಯಕರು ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

English summary
JDS leaders were not taking part in very important Chincholi, Kundgol by election campaign. Congress leaders upset with JDS leaders for not campaigning for congress candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X